ಡಿವೋರ್ಸ್ ವದಂತಿ ಮಧ್ಯೆ ಐಶ್ವರ್ಯಾ ರೈ ಮದರಂಗಿ ಶಾಸ್ತ್ರದ ಫೋಟೋ ವೈರಲ್: ಏನ್ ಮುದ್ದಾಗಿ ಕಾಣ್ತಿದ್ದಾರೆ ʼವಿಶ್ವಸುಂದರಿʼ ! ಫೋಟೋ ಇಲ್ಲಿವೆ
ಬಾಲಿವುಡ್ ಪವರ್ ಕಪಲ್ ಎಂದೇ ಖ್ಯಾತಿ ಪಡೆದ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ಜೋಡಿ ವಿಚ್ಛೇದನ ಪಡೆದುಕೊಳ್ಳಲಿದ್ದಾರೆ ಎಂದು ವದಂತಿ ಹಬ್ಬುತ್ತಿದೆ. ಆದರೆ ಇದರ ಬಗ್ಗೆ ಬಚ್ಚನ್ ಫ್ಯಾಮಿಲಿ ತುಟಿ ಬಿಚ್ಚಿಲ್ಲ.
ಇತ್ತೀಚೆಗೆಯಷ್ಟೇ ಮಗಳು ಆರಾಧ್ಯ ಬರ್ತ್ ಡೇ ದಿನ ಸ್ಪೆಷಲ್ ಫೋಟೋಸ್ ಹಂಚಿಕೊಂಡಿದ್ದ ಐಶ್ವರ್ಯಾ, ತಮ್ಮ ಮದುವೆಯ ಉಂಗುರ ಧರಿಸಿದ್ದ ಫೋಟೋವನ್ನು ಶೇರ್ ಮಾಡಿದ್ದರು. ಈ ಮೂಲಕ ಡಿವೋರ್ಸ್ ಪಡೆದುಕೊಳ್ಳುತ್ತಿದ್ದಾರೆ ಎಂದು ಆಡಿಕೊಳ್ಳುತ್ತಿದ್ದವರ ಬಾಯಿ ಮುಚ್ಚುವಂತೆ ಮಾಡಿದ್ದರು.
ಇದೀಗ ಈ ಎಲ್ಲದರ ಮಧ್ಯೆ ಐಶ್ವರ್ಯಾ ರೈ ಅವರ ಮದುವೆ ದಿನ ನಡೆದ ಮದರಂಗಿ ಶಾಸ್ತ್ರದ ಫೋಟೋಗಳು ಸಿಕ್ಕಾಪಟ್ಟೆ ವೈರಲ್ ಆಗಿವೆ. ಈ ಫೋಟೋಗಳಲ್ಲಿ ದಂತದ ಗೊಂಬೆಯಂತೆ ಕಾಣುವ ಐಶ್‌ಗೆ ಎಂಥವರದ್ದಾದರೂ ದೃಷ್ಟಿ ಬೀಳದೆ ಇರದು...
ಮದರಂಗಿ ಶಾಸ್ತ್ರದ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಈ ಸಂದರ್ಭದಲ್ಲಿ ಬಿಗ್ ಬಿ ಅಮಿತಾಬ್ ಬಚ್ಚನ್, ಜಯಾ ಬಚ್ಚನ್, ಶ್ವೇತಾ ಬಚ್ಚನ್ ಸೇರಿದಂತೆ ಅನೇಕರು ಸಂಭ್ರಮಿಸುತ್ತಾ ಕುಣಿದಾಡುತ್ತಿದ್ದಾರೆ.
ಮದರಂಗಿ ಶಾಸ್ತ್ರದಂದು ಐಶ್ವರ್ಯಾ ರೈ ಪಿಂಕ್ ಘಾಗ್ರಾ ಚೋಲಿ ಧರಿಸಿದ್ದಾರೆ. ಇದಕ್ಕೆ ಸೂಟ್ ಆಗುವಂತೆ ಬಿಳಿ ಮತ್ತು ಪಿಂಕ್ ಬಣ್ಣದಿಂದ ಕೂಡಿರುವ ಫ್ಲಾರಲ್ ಆರ್ನಮೆಂಟ್ಸ್ ಕೂಡ ಧರಿಸಿದ್ದು ಮುದ್ದಾಗಿ ಕಾಣಿಸುತ್ತಿದ್ದಾರೆ.
ಮದರಂಗಿ ಶಾಸ್ತ್ರದ ಫೋಟೋಗಳ ಜೊತೆ ಒಂದಷ್ಟು ಮದುವೆ ಫೋಟೋ ಕೂಡ ಇದ್ದು, ಅಪ್ಪಟ ದಕ್ಷಿಣ ಭಾರತದ ಸಂಪ್ರದಾಯದಂತೆ ಕಾಣಿಸುತ್ತಿದೆ.