ನಟನೆಗೂ ಮುನ್ನ ಐಶ್ವರ್ಯ ರೈ ಮಾಡುತ್ತಿದ ಕೆಲಸ ಏನು ಗೊತ್ತಾ..ಅವರು ಪಡೆಯಿತ್ತಿದ ಸಂಬಳ ಎಷ್ಟು ಅಂತಾ ಕೇಳಿದ್ರೆ ನೀವು ಬೆರಗಾಗಿ ಹೋಗ್ತಿರ..!

Thu, 22 Aug 2024-7:04 am,

 ಐಶ್ವರ್ಯ ರೈ... ಈ ಹೆಸರು ಯಾರಿಗೆ ತಾನೆ ಗೊತ್ತಿಲ್ಲ ಹೇಳಿ. ʻಇರುವರ್ʼ ಎಂಬ ತಮಿಳಿನ ಚಿತ್ರದ ಮೂಲಕ ಐಶ್ವರ್ಯ ರೈ ಸಿನಿಮಾಗೆ ಎಂಟ್ರಿ ಕೊಟ್ಟಿದ್ದರು. ಮಣಿರತ್ನಂ ಅವರು ನಟಿಗೆ ತಮ್ಮ ಸಿನಿಮಾದಲ್ಲಿ ನಟಿಸಲು ಮೊದಲ ಅವಕಾಶ ನೀಡಿದರು. ಆಕೆ ನಟಿಸಿದ ಮೊದಲ ಸಿನಿಮಾದಲ್ಲೇ ಜನರು ಆಕೆಯನ್ನು ನೋಡಿ ಫಿದಾ ಆಗಿದ್ದರು. ಅಷ್ಟೇ, ಅಲ್ಲಿಂದ ಶುರುವಾದ ನಟನೆಯ ಜರ್ನಿ ಅವರ ಜೀವನವನ್ನೇ ಬದಲಿಯಿಸಿ ಬಿಟ್ಟಿತು.  

ಅದನ್ನೇ ಅಲ್ವಾ ಅದೃಷ್ಟ ಅನ್ನೋದು, ಕೆಲವೊಬ್ಬರು ಎಷ್ಟೇ ಸಿನೆಮಾ ಮಾಡಿದರು ಹಿಟ್ ಆಗೋದೆ ಇಲ್ಲ. ಇನ್ನು ಕೆಲವರು ಮಾಡಿದ ಮೊದಲನೇ ಸಿನೆಮಾದಲ್ಲೇ ಒಳ್ಳೆ ರೆಸ್ಪಾನ್ಸ್ ಗಳಿಸಿ ಕೊಳ್ತಾರೆ. ಒಂದು ಸಿನೆಮಾ ತಮ್ಮ ಬದುಕಿನ ದಿಕ್ಕನ್ನೇ ಬದಲಾಯಿಸಿ ಬಿಡುತ್ತೆ. ಅಂಥಹ ನಟಿಯರಲ್ಲಿ ಐಶ್ವರ್ಯ ರೈ ಕೂಡ ಒಬ್ಬರು.  

ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯ ರೈ ಜೋಡಿ ಸಾಧ್ಯ ತಮ್ಮ ವಿಚ್ಚೇದನ ಸುದ್ದಿಯ ಕುರಿತು ಸಿಕ್ಕಾಪಟ್ಟೆ ಸದ್ದು ಮಾಡ್ತಿದಾರೆ. ಎಲ್ಲಿ ನೋಡಿದರೂ ಈ ಜೋಡಿಯದ್ದೆ ಚರ್ಚೆ.   

ಅಂಬಾನಿ ಮದುವೆಗೆ ಪ್ರತ್ಯೇಕವಾಗಿ ಬಂದು ಜನರಿಗೆ ಶಾಕ್ ನೀಡಿದ ಜೋಡಿಯ ನಡೆಗಳನ್ನು ಅಭಿಮಾನಿಗಳು ಆಲಿಸ ತೊಡಗಿದರು.    

ಜೋಡಿ ವಿಚ್ಛೇದನ ಪಡೆಯುವ ಸುದ್ದಿಯ ನಡುವೆ ಈ ಸುದ್ದಿಗೆ ಪುಷ್ಠಿ ನೀಡುವಂತಹ ಹಲವು ಸುದ್ದಿಗಳು ಹೊರಬಂದಿದ್ದವು.  

ಹೀಗೆ ವಿಚ್ಛೇದನ ಸುದ್ದಿಯ ನಡುವೆ ಐಶ್ವರ್ಯ ರೈ ಕುರಿತ ಮತ್ತೊಂದು ವಿಷಯ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಅದು ಬೇರೆ ಏನು ಅಲ್ಲ, ಐಶ್ವರ್ಯ ರೈ ಅವರ ಮೊದಲ ಚಿತ್ರವಾದ ʻಇರುವಾರ್ʼ ಸಿನೆಮಾದ ಮುನ್ನ ನಟಿ ಮಾಡುತ್ತಿದ್ದ ಕೆಲ್ಸಕ್ಕೆ ಸಿಕ್ಕ ಸಂಬಳದ ಪೇ ಸ್ಲಿಪ್.  

ನಟಿ ಸಿನಿಮಾಗೆ ಕಾಲಿಡುವುದಕ್ಕೆ ಮುನ್ನ, ಬಟ್ಟೆ ಬ್ರಾಂಡ್ ಗಳಿಗೆ ಮಾಡೆಲ್ ಆಗಿ ಕೆಲಸ ಮಾಡುತ್ತಿದ್ದರಂತೆ. ಬಟ್ಟೆ ಧರಿಸಿ ಫೋಟೋಗೆ ಪೋಸ್ ಕೊಡೂದಕ್ಕೆ ಇವರಿಗೆ ಸಿಗುತ್ತಿದ್ದದ್ದು 1500 ಅಷ್ಟೆ.  

1992ರಲ್ಲಿ ಖಾಸಗಿ ಬ್ರಾಂಡ್ ಒಂದರ ಮಾಡೆಲ್ ಆಗಿ ಕೆಲಸ ಮಾಡುತ್ತಿದ್ದ ಈಕೆಗೆ ಆಗಿನ ಕಾಲಕ್ಕೆ ಫೋಟೋಗೆ ಪೋಸ್ ನೀಡಲು 1500 ರೂಪಾಯಿ ನೀಡಲಾಗುತ್ತಿತಂತೆ.   

1994 ಐಶ್ವರ್ಯ ರೈ ಮೊದಲ ಬಾರಿಗೆ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ನಮ್ಮ ದೇಶವನ್ನು ಪ್ರತಿನಿಧಿಸಿ ಗೆದ್ದು ಬಂದಿದ್ದರು.  

ಹೀಗೆ ಒಂದು ಕಾಲದಲ್ಲಿ 1500 ರುಪಾಯಿ ಸಂಬಳಕ್ಕೆ ಕೆಲ್ಸಕ್ಕೆ ಹೋಗುತ್ತಿದ್ದ ಐಶ್ವರ್ಯ ರೈ ಇಂದು ಒಂದು ಸಿನೆಮಾಗೆ ಬರೋಬ್ಬರಿ 12 ಕೋಟಿ ಚಾರ್ಜ್ ಮಾಡುತ್ತಾರೆ. ಅಷ್ಟಕ್ಕೂ ಇವರ ಆಸ್ತಿ ಮೌಲ್ಯ 776 ಕೋಟಿ.  

ಸಧ್ಯ ಐಶ್ವರ್ಯ ರೈ ಅವರ ಮೊದಲ ಸಂಬಳದ ರಸೀತಿ ವೈರಲ್ ಆಗುತ್ತಿದ್ದು, ನೆಟ್ಟಿಗರು ವಿವಿಧ ಪ್ರಶಂಸೆ ವ್ಯಕ್ತ ಪಡಿಸುತ್ತಿದ್ದಾರೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link