`ನನ್ನ ಮಗಳು ನನ್ನ ಜವಾಬ್ದಾರಿ, ಅವಳನ್ನು ಬೇರ್ಯಾರು ಸಾಕಬೇಕಿಲ್ಲ..` ವಿಚ್ಛೇದನ ವದಂತಿ ಮಧ್ಯೆ ಐಶ್ವರ್ಯ ರೈ ಶಾಕಿಂಗ್ ಹೇಳಿಕೆ ವೈರಲ್

Thu, 29 Aug 2024-6:56 am,

ಸದ್ಯ ಐಶ್ವರ್ಯ ರೈ ಹಾಗೂ ಅಭಿಷೇಕ್ ಬಚ್ಚನ್ ಅವರ ವಿಚ್ಛೇದನ ವದಂತಿ ಬಿ ಟೌನ್ ನ ಹಾಟ್ ಟಾಪಿಕ್ ಆಗಿದೆ. ಎಲ್ಲಿ ನೋಡಿದರೂ ಇವರಿಬ್ಬರ ಸುದ್ದಿಯದ್ದೆ ಸದ್ದು. ಈಗಿರುವಾಗ ಈ ವದಂತಿಗಳಿಗೆ ಪುಷ್ಠಿ ನೀಡುವಂತೆ ಈ ದಂಪತಿ ನಡೆದುಕೊಳ್ಳುತ್ತಿದ್ದಾರೆ. ಈ ಜೋಡಿ ಮಾಧ್ಯಮಕ್ಕೆ ಕೊಟ್ಟ ಸಂದರ್ಶನಗಳು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.  

ಮಾಡೆಲ್ ಆಗಿ ತಮ್ಮ ವೃತ್ತಿಜೀವನ ಶುರು ಮಾಡಿದ ಐಶ್ವರ್ಯ ರೈ, 'ಇರುವರ್' ಎಂಬ ಚಿತ್ರದ ಮೂಲಕ ಸಿನೆಮಾಗೆ ಎಂಟ್ರಿ ಕೊಟ್ಟಿದ್ರು, ಈ ಸಿನೆಮಾ ಅವರ ಬದುಕಿನ ದಿಕ್ಕನ್ನೇ ಬದಲಾಯಿಸಿಬಿಟ್ಟಿತು. ಸಾಲು ಸಾಲು ಸಿನೆಮಾಗಳು ನಟಿಯನ್ನು ಹುಡುಕುತ್ತ ಬಂದವು, ನಟಿಯಾಗಿ ಅಷ್ಟೇ ಅಲ್ಲದೇ ಐಶ್ವರ್ಯ ವಿಶ್ವ ಸುಂದರಿಯಾಗಿ ಗುರುತಿಸಿಕೊಂಡಿದ್ದರು, ಆಗಿನ ಕಾಲದ ಹುಡುಗರ ಕನಸಿನ ಕನ್ಯೆ ಆಗಿದ್ದ ಈಕೆ ತನ್ನ ವೃತ್ತಿ ಜೀವನದ ಉತ್ತುಂಗದಲ್ಲಿದ್ದಾಗ 2007 ರಲ್ಲಿ ಅಭಿಷೇಕ್ ಬಚ್ಚನ್ ಅವರನ್ನು ವರಿಸಿದಿರು.

2011ರಲ್ಲಿ ಈ ದಂಪತಿಯ ಪ್ರೀತಿಗೆ ಸಾಕ್ಷಿಯಾಗಿ ಮುದ್ದಾದ ಹೆಣ್ಣು ಮಗು ಕೂಡ ಜನಿಸಿತ್ತು. ಅವಳೇ ಆರಾಧ್ಯ.   

ಸಂಸಾರ ಸುಂದರವಾಗಿ ಏನೋ ಸಾಗುತ್ತಿತ್ತು ಆದರೆ ಇತ್ತೀಚೆಗೆ ಈ ದಂಪತಿಯ ಸುಂದರ ಸಂಸಾರದಲ್ಲಿ ಬಿರುಕು ಮೂಡಿದೆ ಎಂದು ಹೇಳಲಾಗುತ್ತಿದೆ. ಈ ವದಂತಿಗಳಿಗೆ ಪುಷ್ಠಿ ನೀಡುವಂತೆ ದಂಪತಿಗಳು ಕೂಡ ನಡೆದುಕೊಳ್ಳುತ್ತಿದ್ದಾರೆ.

ಅಷ್ಟಕ್ಕೂ ಈ ದಂಪತಿಯ ವಿಚ್ಚೇದನಕ್ಕೆ ಕಾರಣ ಜಯಾ ಬಚ್ಚನ್ ಹಾಗೂ ಅಭಿಷೇಕ್ ಬಚ್ಚನ್ ಸಹೋದರಿ ಶ್ವೇತ ಬಚ್ಚನ್ ಎಂದು ಸುದ್ದಿ ಎಲ್ಲೆಡೆ ಸದ್ದು ಮಾಡುತ್ತಿದೆ.

ಇನ್ನೂ, ಇದಕ್ಕೆ ಅನುಗುಣವಾಗಿ ದಂಪತಿಗಳು ಎಲ್ಲೆಡೆ ಒಂದಾಗಿ ಕಾಣಿಸಿಕೊಳ್ಳದೆ ಪ್ರತ್ಯೇಕವಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತಿಚೆಗೆ ನಡೆದ ಅಂಬಾನಿ ಮದುವೆಯಲ್ಲಿ ಕೂಡ ಐಶ್ವರ್ಯಾ ಮಗಳು ಆರಾಧ್ಯಳೊಂದಿಗೆ ಆಗಮಿಸಿದ್ದರು. 

ಇನ್ನೊಂದೆಡೆ ಅಭಿಷೇಕ್ ಬಚ್ಚನ್, ತಂದೆ ಅಮಿತಾಬ್ ಬಚ್ಚನ್ ತಾಯಿ ಜಯ ಬಚ್ಚನ್ ಹಾಗೂ ಸಹೋದರಿ ಶ್ವೇತ ಬಚ್ಚನ್ ಅವರೊಂದಿಗೆ ಆಗಮಿಸಿದ್ದರು. ಈ ನಡೆ ಅಭಿಮಾನಿಗಳಿದ್ದ ಅನುಮಾನವನ್ನು ಹೆಚ್ಚು ಮಾಡಿತ್ತು.

ಅದರಲ್ಲೂ ಅಭಿಷೇಕ್ ಬಚ್ಚನ್ ಈ ನಡುವೆ ನೀಡಿದ ಹೇಳಿಕೆಗಳು ಹಾಗು ಸಾಮಾಜಿಕ ಜಾಲತಾಣದಲ್ಲಿ ಮಾಡುತ್ತಿರುವ ಕಾಮೆಂಟ್‌ಗಳು ಉರಿಯುತ್ತಿರುವ ಬೆಂಕಿಗೆ ತುಪ್ಪ ಸುರಿದಂತಿದೆ. 

ಇನ್ನೂ ಐಶ್ವರ್ಯ ರೈ ಈ ನಡುವೆ ಮಗಳು ಆರಾಧ್ಯ ಜೊತೆಗೆ ಒಂಟಿಯಾಗಿ ಹಲವೆಡೆ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗೆ ಮಗಳ ಜೊತೆ ಐಶ್ವರ್ಯ ವಿಧೇಶಕ್ಕೆ ಟ್ರಿಪ್ ಹೋಗಿದ್ದು ಗೊತ್ತೇ ಇದೆ.

ಈಗಿರುವಾಗ ನಟಿ ನೀಡಿದ ಸಂದರ್ಶನವೊಂದು ಸದ್ಯ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಖಾಸಗಿ ವಾಹಿನಿಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ನಟಿ "ನನ್ನ ಮಗಳನ್ನು ನೋಡಿಕೊಳ್ಳಲು, ನನಗೆ ಯಾರ ಸಹಾಯವೂ ಬೇಡ, ಆಕೆಯನ್ನು ನಾನು ಒಂಟಿಯಾಗಿ ಸಾಕಿ ಸಲಹಬಲ್ಲೆ ಎಂದಿದ್ದಾರೆ".  ಈ ಹೇಳಿಕೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು. ಹೇಳಿದಂತೆ ಮಗಳನ್ನು ನಟಿ ಒಂಟಿಯಾಗಿ ಬೆಳಿಸುತ್ತಿದ್ದಾರೆ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.

ಯಾವುದು ಏನೇ ಇರಲಿ ಸಾಧ್ಯ ಇವೆಲ್ಲವೂ ವದಂತಿಗಳೇ ಹೊರತು ದಂಪತಿ ಈ ಬಗ್ಗೆ ಎಲ್ಲೂ ಮಾಹಿತಿ ಹಂಚಿಕೊಂಡಿಲ್ಲ.

ಈ ಕುರಿತು ಐಶ್ವರ್ಯಾ ಹಾಗು ಅಭಿಷೇಕ್ ಬಚ್ಚನ್ ಇಬ್ಬರು ಸಹ ಯಾವುದೇ ಅಧಿಕೃತ ಘೋಷಣೆ ನೀಡಲ್ಲ. ಇನ್ನೂ ಈ ದಂಪತಿಯ ಸಂಸಾರದಲ್ಲಿ ಏನೆಲ್ಲಾ ಬೆಳವಣಿಗೆ ನಡೆಯಲಿದೆ ಎನ್ನುವುದನ್ನು ಇನ್ನಷ್ಟೇ ಕಾದು ನೋಡಬೇಕಿದೆ

ZEENEWS TRENDING STORIES

By continuing to use the site, you agree to the use of cookies. You can find out more by Tapping this link