ಮೂರು ವರ್ಷದವಳಿರುವಾಗಲೇ ಆರಾಧ್ಯ ಬಾಯಲ್ಲಿ ಬಂದಿತ್ತಂತೆ ʻಅದೊಂದುʼ ಪದ! ಇದನ್ನು ಕೇಳಿದ ಐಶ್ವರ್ಯಾಗೆ ಅಘಾತ ಆಗಿದ್ಧೇಕೆ ಗೊತ್ತಾ?

Tue, 27 Aug 2024-9:21 am,

ಇತ್ತೀಚೆಗೆ ಐಶ್ವರ್ಯ ರೈ ಹಾಗೂ ಅಭಿಷೇಕ್‌ ಬಚ್ಚನ್‌ ಸುದ್ದಿಯಲಿದ್ದಾರೆ, ಈ ಜೋಡಿಯ ವಿಚ್ಛೇದನ ವದಂತಿಗಳು ಎಲ್ಲೆಡೆ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಕೇವಲ ೀ ಜೋಡಿಯಷ್ಟೆ ಅಲ್ಲ ಇವರ ಪುತ್ರಿ ಆರಾಧ್ಯ ಕೂಡ ಸದಾ ಒಂದಲ್ಲ ಒಂದು ವಿಷಯಕ್ಕೆ ಸುದ್ದಿಯಲ್ಲಿರುತ್ತಾರೆ.

ನಟಿ ಐಶ್ವರ್ಯ ರೈ ಹಾಗೂ ಆರಾಧ್ಯ ತಾಯಿ ಮಗಳಿಗಿಂತ ಹೆಚ್ಚು ವಿಶೇಷ ಬಂಧವನ್ನು ಹೊಂದಿದ್ದಾರೆ ಎಂದೆ ಹೇಳಬಹುದು. ನಟಿ ಹಾಗೂ ತಮ್ಮ ಮಗಳು ಯಾವುದೇ ಕಾರ್ಯಕ್ರಮಕ್ಕೆ ಹೋದರು ಜೊತೆಯಲ್ಲಿ ಕಾಣಿಸಿಕೊಳ್ಳುತ್ತಾರೆ. ಸದಾ ಜೊತೆಯಲ್ಲಿ ಇವರು ಕ್ಯಾಮರಾ ಕಣ್ಣಿಗೆ ಸೆರೆಯಾಗುತ್ತಿರುತ್ತಾರೆ.  

ಇತ್ತೀಚೆಗಷ್ಟೆ ನಡೆದ ಅಂಬಾನಿ ಕುಟುಂಬದ ಮದುವೆಗೂ ಕೂಡ ಆರಾಧ್ಯ ಹಾಗೂ ಐಶ್ವರ್ಯ ಇತ್ರ ಕುಟುಂಬ ಸದಸ್ಯರೊಂದಿಗೆ ಸಲ್ಲದೆ ಪ್ರತ್ಯೇಕವಾಗಿ ಇವರಿಬ್ಬರೇ ಎಂಟ್ರಿ ಕೊಟ್ಟಿದ್ದರು. ವಿಚ್ಛೇದನ ವದಂತಿಗಳ ನಡುವೆ ಇವರಿಬ್ಬರ ಈ ನಡೆ ಈ ವದಂತಿಗಳಿಗೆ ಮತ್ತಷ್ಟು ಪುಷ್ಠಿ ನೀಡಿತ್ತು.  

ಐಶ್ವರ್ಯ ರೈ ಹಾಗೂ ಅಭಿಷೇಕ್‌ ಬಚ್ಚನ್‌ 2007ರಲ್ಲಿ ವಿವಾಹವಾದರು, ಮದುವೆಯಾದ ನಾಲ್ಕು ವರ್ಷಗಳಿಗೆ ಈ ದಂಪತಿಗೆ ಆರಾಧ್ಯ ಜನಸಿದಳು, ಈ ಜೋಡಿಗೆ ಈಕೆ ಏಕೈಕ ಪುತ್ರಿ.  

ನಟಿ ಐಶ್ವರ್ಯಗೆ ತಮ್ಮ ಮಗಳೆಂದರೆ ಪ್ರಾಣ ನಟಿ ತಮ್ಮ ಮಗಳ ಕುರಿತು ಇನ್ಟ್ರೆಸ್ಟಿಂಗ್‌ ಸತ್ಯ ಬಿಚ್ಚಿಟ್ಟಿದ್ದಾರೆ, ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ತಮ್ಮ ಮಗಳು ಮೂರು ವರ್ಷದವಳಿದ್ದಾಗ ಯಾವ ಪದವನ್ನು ಮೊದಲು ಹೇಳಿದರು ಎಂದು ನಟಿ ಹಂಚಿಕೊಂಡಿದ್ದಾರೆ. ಮೂರು ವರ್ಷದ ಪುಟ್ಟ ಆರಾಧ್ಯರ ಬಾಯಲ್ಲಿ ಹೊಬಂದ ಅದೊಂದು ಪದವನ್ನು ಕೇಳಿ ನಟಿ ಐಶ್ವರ್ಯ ಬೆಚ್ಚಿಬಿದ್ದಿರಂತೆ.  

ಆರಾಧ್ಯ ಬಚ್ಚನ್‌ ಕುಟುಂಬದಲ್ಲಿ ಮುದ್ದಿನ ಮಗಳು, ಚಿಕ್ಕ ವಯಸ್ಸಿನಿಂದಲೂ ಈಕೆ ಒಳ್ಳೆಯ ಸಂಸ್ಕಾರವನ್ನು ಕಲಿಯುತ್ತಾ ಬೆಳೆದವರು, ಅಷ್ಟೆ ಅಲ್ಲ ಬುದ್ದಿವಂತೆ ಕೂಡ.   

ಆರಾಧ್ಯ ತಾನು ಮೂರು ವರ್ಷದವಳಾಗಿದ್ದಾಗ ಅನೇಕ ವಿಷಯಗಳನ್ನು ಮಾಡಲು ಕಲಿತರಂತೆ, ಅದನ್ನು ನೋಡಿ ಐಶ್ವರ್ಯ ಅಚ್ಚರಿ ಪಡುತ್ತಿದ್ದೃಂತೆ, ತಮ್ಮ ಮಗಳು ಮಾಡುತ್ತಿದ್ದ ಚಿಕ್ಕ ಚಿಕ್ಕ ವಿಷಯಗಳನ್ನು ನೋಡಿ ನಟಿ ಖುಷಿ ಪಡುತ್ತಿದ್ದರಂತೆ. ಇದನ್ನು ಸ್ವತಃ ಐಶ್ವರ್ಯ ಅವರೇ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.  

ಚಿಕ್ಕವಳಿದ್ದಾಗಿನಿಂದಲೂ ಆರಾಧ್ಯ ತನ್ನ ಅಮ್ಮ ಮೇಕಪ್‌ ಹಚ್ಚಿ ರೆಡಿಯಾಗುವುದನ್ನು ನೋಡಿ ಬೆಳೆದವರಂತೆ, ತಾನು ಮೇಕಪ್‌ ಹಚ್ಚುತ್ತಿದ್ದರೆ ಅಮ್ಮ ಏನೇನು ಮಾಡುತ್ತಿದ್ದಾರೆ ಎಂದು ರೂಮ್‌ನಲ್ಲಿ ಐಶ್ವರ್ಯ ಅವರ ಪಕ್ಕದಲ್ಲಿ ನಿಂತು ಪುಟ್ಟ ಆರಾಧ್ಯ ಎಲ್ಲವನ್ನು ಗಮನಿಸುತ್ತಿದ್ದರಂತೆ. ಈ ಕುರಿತು ಐಶ್ವರ್ಯ ಪ್ಯಾರಿಸ್‌ನಲ್ಲಿ ನಡೆದ ಕಾರ್ಯಕ್ರಮ ಒಂದರಲ್ಲಿ ಹೇಳಿಕೊಂಡಿದ್ದಾರೆ.  

ಆರಾದ್ಯ ಮೂರು ವರ್ಷದವಳಿದ್ದಾಗ ಐಶ್ವರ್ಯ ಹೊರಗೆ ಹೋಗಿ ಮನೆಗೆ ಹಿಂತಿರುಗಿದರಂತೆ, ವೆಟ್‌ ಟಿಶ್ಯೂ ಬಳಸಿ ಮುಖವನ್ನು ಸ್ವಚ್ಛಗೊಳಿಸಿ ತಮ್ಮ ಮೇಕ್‌ಕಿಟ್‌ ತೆಗೆದುಕೊಂಡ ಅಮ್ಮನನ್ನು ನೋಡಿ ಆರಾಧ್ಯ ತೊದಲು ನುಡಿಯಲ್ಲಿ ʻಮೇಕಪ್‌ʼ ಎಂದಿದ್ದರಂತೆ. ಪುಟ್ಟ ಮಗುವಿನ ಬಾಯಲ್ಲಿ ಈ ಪದವನ್ನು ಕೇಳಿ ಐಶ್ವರ್ಯ ಶಾಕ್‌ ಆಗಿದ್ದರಂತೆ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link