ಬಿಗ್ ಬಾಸ್ ಮನೆಯಿಂದ ಹೊರ ಬಂದ ಐಶ್ವರ್ಯ ಸಿಂಧೋಗಿ ಪಡೆದ ಒಟ್ಟು ಸಂಭಾವನೆ ಎಷ್ಟು ಗೊತ್ತೇ?
Aishwarya Sindhogi Remuneration: ಬಿಗ್ ಬಾಸ್ ಮನೆಯಿಂದ ಹೊರ ಬಂದ ಐಶ್ವರ್ಯ ಸಿಂಧೋಗಿ ಪಡೆದ ಒಟ್ಟು ಹಣವೆಷ್ಟು ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.
ಬಿಗ್ ಬಾಸ್ ಕನ್ನಡ ಸೀಸನ್ 11 ಈ ವಾರ ಐಶ್ವರ್ಯ ಸಿಂಧೋಗಿ ಮನೆಯಿಂದ ಎಲಿಮಿನೇಟ್ ಆಗಿದ್ದಾರೆ ಎನ್ನಲಾಗುತ್ತಿದೆ.
ಉಳಿದ ಸ್ಪರ್ಧಿಗಳಿಗೆ ಹೋಲಿಸಿದರೆ ಐಶ್ವರ್ಯ ಸಿಂಧೋಗಿ ನೇರವಾಗಿ ಮುಖದ ಮೇಲೆಯೇ ಮಾತನಾಡುತ್ತಿದ್ದರು. ಮೊದಲ ದಿನದಿಂದಲೂ ತಮ್ಮ ದಿಟ್ಟ ಮಾತುಗಳಿಂದಲೇ ಜನರ ಪ್ರೀತಿ ಗಳಿಸಿದ್ದರು.
ಇದರಿಂದಲೇ ಹಲವು ಬಾರಿ ಮನೆಯಲ್ಲಿ ಅನೇಕ ಜನರ ಜೊತೆ ವೈಮನಸ್ಸು ಮೂಡಿದ್ದೂ ಇದೆ. ಐಶ್ವರ್ಯ ಸಿಂಧೋಗಿ ಟಾಸ್ಕ್‌ಗಳಲ್ಲಿಯೂ ಉತ್ತಮ ಪ್ರದರ್ಶನ ತೋರುತ್ತಿದ್ದರು.
ಐಶ್ವರ್ಯ ಸಿಂಧೋಗಿ ಅನೇಕ ಬಾರಿ ಮನೆಯಲ್ಲಿ ನಡೆದ ವಿವಾದಗಳಲ್ಲಿಯೂ ಭಾಗಿ ಆಗಿದ್ದರು. ಮನರಂಜನೆ ವಿಚಾರದಲ್ಲಯೂ ಐಶ್ವರ್ಯ ಸಿಂಧೋಗಿ ಮುಂದಿದ್ದರು.
ಐಶ್ವರ್ಯ ಸಿಂಧೋಗಿ ಬ್ಯೂಟಿಗೆ ಮನಸೋತ ಹುಡುಗರು ಅನೇಕರು. ಐಶ್ವರ್ಯ ಸಿಂಧೋಗಿ ಈ ವಾರ ಕಡಿಮೆ ವೋಟ್ ಪಡೆದ ಕಾರಣ ಮನೆಯಿಂದ ಹೊರಬಂದಿದ್ದಾರೆ.
ಐಶ್ವರ್ಯ ಸಿಂಧೋಗಿ ಕಳೆದ ಎರಡು ವಾರಗಳಿಂದ ಟಾರ್ಗೆಟ್ ನಾಮಿನೇಷನ್ ಬಗ್ಗೆ ಮಾತನಾಡಿ ಕೆಂಗಣ್ಣಿಗೆ ಗುರಿಯಾಗಿದ್ದರು. ಇದೇ ಅವರಿಗೆ ನೆಗೆಟಿವ್ ಆದಂತಿದೆ ಎಂಬುದು ಬಿಗ್‌ಬಾಸ್ ವೀಕ್ಷಕರ ಅಭಿಪ್ರಾಯ.
ನಾಗಿಣಿ 2, ತನಿಷಾ, ಮಂಗಳ ಗೌರಿ ಮದುವೆ, ನಮ್ಮ ಲಚ್ಚಿ ಧಾರಾವಾಹಿಗಳಲ್ಲಿ ನಟಿಸಿರುವ ಐಶ್ವರ್ಯ ಕಿರುತೆರೆಯಲ್ಲಿ ಸಾಕಷ್ಟು ಜನಪ್ರಿಯತೆ ಗಳಿಸಿದವರು.
ಐಶ್ವರ್ಯ ಸಿಂಧೋಗಿ ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ ಒಂದು ವಾರಕ್ಕೆ 40,000 ರೂಪಾಯಿ ಸಂಭಾವನೆ ಪಡೆಯುತ್ತಿದ್ದರು ಎನ್ನಲಾಗುತ್ತದೆ.
ಈ ಲೆಕ್ಕಾಚಾರದ ಪ್ರಕಾರ, ಐಶ್ವರ್ಯ ಬಿಗ್‌ಬಾಸ್ ಮನೆಯಲ್ಲಿ 13 ವಾರಗಳವರೆಗೆ ಇದ್ದರು. ಒಟ್ಟು 5,20,000 ರೂಪಾಯಿ ಸಂಭಾವನೆಯನ್ನು ಪಡೆದಿದ್ದಾರೆ.
ಐಶ್ವರ್ಯ ಅವರಿಗೆ ಈ ಸಂಭಾವನೆ ಜೊತೆಗೆ 1ಲಕ್ಷ ರೂಪಾಯಿ ಕ್ಯಾಶ್ ಪ್ರೈಜ್, 50,000 ಕ್ಯಾಶ್ ಪ್ರೈಜ್ ಜೊತೆ 50,000 ದ ಗಿಫ್ಟ್ ವೋಚರ್ ದೊರೆಯುತ್ತದೆ.
ಈ ಎಲ್ಲ ಹಣ ಸೇರಿ ಒಟ್ಟು 7,20,000 ರೂಪಾಯಿ ಹಣವನ್ನು ಐಶ್ವರ್ಯ ಸಿಂಧೋಗಿ ಬಿಗ್ ಬಾಸ್‌ನಿಂದ ಪಡೆದಂತಾಗುತ್ತದೆ. (ಇದು ವರದಿಗಳನ್ನು ಮತ್ತು ವೈರಲ್ ಸಂಗತಿಗಳನ್ನು ಆಧರಿಸಿ ಬರೆದ ಸುದ್ದಿಯಾಗಿದೆ.)