ಮದುವೆ ವಾರ್ಷಿಕೋತ್ಸವಕ್ಕೆ ಪತ್ನಿಗೆ ನೀಡಿದ ಉಡುಗೊರೆ ಏನು ಗೊತ್ತಾ ? ಗಿಫ್ಟ್ ನೋಡಿ ದಂಗಾದ ಜನ
ಚಂದಿರನಲ್ಲಿ ಜಮೀನು ಖರೀದಿಸಿದ್ದಾದರೂ ಯಾಕೆ ? : ಡಿ. 24ರಂದು ಧರ್ಮೇಂದ್ರ ಮತ್ತು ಸ್ವಪ್ನ ಅವರ ಮದುವೆ ವಾರ್ಷಿಕೋತ್ಸವ ಇತ್ತು. ಧರ್ಮೇಂದ್ರ ಈ ಸಂದರ್ಭದಲ್ಲಿ ತನ್ನ ಪತ್ನಿಗೆ ಕಾರು , ಒಡವೆಯಂಥಹ ಗಿಫ್ಟ್ ನೀಡುವ ಬದಲು ಏನಾದರೂ ವಿಶೇಷ ಉಡುಗೊರೆ ನೀಡುವ ಬಗ್ಗೆ ಯೋಚನೆಮಾಡಿದ್ದಾರೆ. ಆಗ ಅವರಿಗೆ ಹೊಳೆದಿರುವುದೇ ಚಂದಿರನಲ್ಲಿ ಜಮೀನು ಖರೀಸುವ ಯೋಚನೆ.
ಜಮೀನಿನೊಂದಿಗೆ ಸಿಕ್ಕಿತು ಚಂದಿರನಲ್ಲಿ ನೆಲೆಸುವ ನಾಗರೀಕತೆ : ಚಂದಿರನಲ್ಲಿ ಜಮೀನು ಖರೀದಿಸಲು ನಿರ್ಧರಿಸಿದ ಮೇಲೆ ಧರ್ಮೇಂದ್ರ ಇದಕ್ಕಾಗಿ ಅಮೆರಿಕಾದ ನ್ಯೂಯಾರ್ಕ್ ನ ಲೂನಾ ಸೋಸೈಟಿ ಇಂಟರ್ ನ್ಯಾಷನಲ್ ಅನ್ನು ಸಂಪರ್ಕಿಸಿದ್ದಾರೆ. ಈ ಫರ್ಮ್ ಚಂದ್ರನಲ್ಲಿ ಎಕರೆಯ ರೂಪದಲ್ಲಿ ಜಮೀನನ್ನು ಮಾರಾಟ ಮಾಡುತ್ತದೆ. ಜಮೀನು ಖರೀದಿಸುವ ಪ್ರಕ್ರಿಯೆ ಪೂರ್ತಿ ಒಂದು ವರ್ಷಗಳವರೆಗೆ ನಡೆದಿದೆ. ಜಮೀನು ಖರೀದಿಯೊಂದಿಗೆ ಚಂದ್ರನಲ್ಲಿ ನೆಲೆಸಲು ನಾಗರೀಕತೆಯೂ ಇವರಿಗೆ ದೊರೆತಿದೆ.
ಯಾರಿಗೂ ಈ ಗಿಫ್ಟ್ ಬಗ್ಗೆ ಕಲ್ಪನೆಯೂ ಇರಲಿಲ್ಲ: ಈ ಉಡುಗೊರೆಯಿಂದ ಧರ್ಮೇಂದ್ರ ಪತ್ನಿ ಸ್ವಪ್ನ ಖುಷಿಗೆ ಪಾರವೇ ಇಲ್ಲ. ಮದುವೆಯ ಪ್ರತಿ ವಾರ್ಷಿಕೋತ್ಸವಕ್ಕೂ ಧರ್ಮೇಂದ್ರ ಏನಾದರೂ ವಿಶೇಷ ಉಡುಗೊರೆ ನೀಡುತ್ತಲೇ ಬಂದಿದ್ದಾರೆ. ಆದರೆ ಇಂಥಹ ಗಿಫ್ಟ್ ನೀಡಬಹುದು ಅನ್ನೋ ಕಲ್ಪನೆ ಧರ್ಮೇಂದ್ರ ಕುಟುಂಬದಲ್ಲಿ ಯಾರಿಗೂ ಇರಲಿಲ್ಲವಂತೆ.
ಈ ರೆಕಾರ್ಡ್ ಮಾಡಿದ್ದು ಹೀಗೆ : ಚಂದಿರನ ಮೇಲೆ ಜಮೀನು ಖರೀದಿಸಿ ಪತ್ನಿಗೆ ನೀಡಿರುವುದು ತನಗೆ ಬಹಳ ಸಂತೋಷ ನೀಡಿದೆ ಎನ್ನುತ್ತಾರೆ ಧರ್ಮೇಂದ್ರ. ಚಂದ್ರನ ಮೇಲೆ ಜಮೀನು ಖರೀದಿಸಿರುವ ರಾಜಸ್ಥಾನದ ಪ್ರಥಮ ವ್ಯಕ್ತಿ ನಾನು ಎಂದು ಹೆಮ್ಮೆಯಿಂದಲೇ ನುಡಿಯುತ್ತಾರೆ. ಚಂದಿರನ ಮೇಲೆ ಖರೀದಿಸಿದ ಜಮೀನಿನ ರಿಜಿಸ್ಟ್ರೇಷನ್ ವೇಳೆ ಒಂದು ಸಮಾರಂಭವನ್ನೂ ಆಯೋಜಿಸಲಾಗಿತ್ತು.
ಮೋಡಗಳ ಮಧ್ಯೆಯೇ ನಡೆಯಿತು ಸಮಾರಂಭ : ರಾಶಿ ಎಂಟರ್ ಟೈನ್ ಮೆಂಟ್ ವತಿಯಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು. ಮೋಡಗಳ ಮಧ್ಯೆ ಧರ್ಮೇಂದ್ರ ಮತ್ತು ಸ್ವಪ್ನ ಅವರನ್ನು ತೋರಿಸಲಾಯಿತು. ಅಲ್ಲಿಂದಲೇ ಜಮೀನನ್ನು ಧರ್ಮೇಂದ್ರ ಮತ್ತು ಸ್ವಪ್ನ ಹೆಸರಿನಲ್ಲಿ ರಿಜಿಸ್ಟರ್ ಮಾಡಲಾಯಿತು. ಈ ಸಮಾರಂಭದಲ್ಲಿ ಭಾಗಿಯಾಗಿದ್ದವರಿಗೆ ಈ ಉಡುಗೊರೆ ಬಗ್ಗೆ ಗುಣಗಾನ ಮಾಡಿದಷ್ಟು ಕಡಿಮೆ ಅನಿಸಿತ್ತಂತೆ.