ಚಳಿ ಹೆಚ್ಚಾಗುತ್ತಿದ್ದಂತೆ ಬಾಧಿಸುವ ಕೆಮ್ಮು, ಶೀತ, ನೆಗಡಿಗೆ ಈ ಎಲೆಯೇ ಮದ್ದು! ಒಂದು ಸಲ ಬಳಸಿ, ಬಹು ಕಾಲದಿಂದ ಕಾಡುವ ಕೆಮ್ಮು ಕೂಡಾ ಥಟ್ ಅಂತ ನಿಲ್ಲುವುದು
ಈ ವರ್ಷ ವಿಪರೀತ ಚಳಿ ಇರುತ್ತದೆ ಎಂದು ಈಗಾಗಲೇ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಚಳಿ ಹೆಚ್ಚಾಗುತ್ತಿದ್ದ ಹಾಗೆ ಶೀತ, ಕೆಮ್ಮಿನ ಸಮಸ್ಯೆ ಬಿಟ್ಟೂ ಬಿಡದಂತೆ ಕಾಡುತ್ತದೆ.
ಚಳಿಗಾಲದಲ್ಲಿ ಕೆಮ್ಮು ಒಮ್ಮೆ ಶುರುವಾದರೆ ತಿಂಗಳಾನುಗಟ್ಟಲೆ ಸಮಸ್ಯೆ ನೀಡುತ್ತದೆ. ಸಿರಪ್, ಮಾತ್ರೆ ಎಷ್ಟೇ ತೆಗೆದುಕೊಂಡರೂ ತಾತ್ಕಾಲಿಕ ಪರಿಹಾರ ವಷ್ಟೇ ನೀಡುತ್ತದೆ.
ಇದರ ಬದಲು ಈ ಎಲೆಯನ್ನು ಬಳಸಿದರೆ ಕೆಮ್ಮು ಶೀತದಿಂದ ಥಟ್ ಅಂತ ಪರಿಹಾರ ನೀಡುತ್ತದೆ. ಈ ಎಲೆ ನಿಮ್ಮ ಮನೆ ಮುಂದೆಯೇ ಹರಡಿಕೊಂಡಿರುತ್ತದೆ ಎನ್ನುವುದು ಕೂಡಾ ಗಮನಾರ್ಹ.
ಈ ಎಲೆಯನ್ನು ದೊಡ್ಡಪತ್ರೆ, ಸಾಂಬ್ರಾಣಿ, ಸಂಬಾರ ಬಳ್ಳಿ, ಚೆಂಪರವಳ್ಳಿ, ಅಜವಾನದ ಎಲೆ, ಕರ್ಪೂರವಳ್ಳಿ, ಚಟ್ನಿ ಸೊಪ್ಪು ಹೀಗೆ ಬೇರೆ ಬೇರೆ ಹೆಸರುಗಳಿಂದ ಕರೆಯಲಾಗುತ್ತದೆ.
ಇದರ ಎಲೆಯನ್ನು ತೆಗೆದುಕೊಂಡು ಕಾವಲಿ ಮೇಲೆ ಹಾಕಿ ಸ್ವಲ್ಪ ಬಾಡಿಸಿಕೊಂಡು ಹಿಸುಕಿದರೆ ಚೆನ್ನಾಗಿ ರಸ ಬರುತ್ತದೆ. ಈ ರಸಕ್ಕೆ ಸ್ವಲ್ಪ ಕಾಳು ಮೆಣಸಿನ ಪುಡಿ ಜೇನು ಬೆರೆಸಿ ಸೇವಿಸಬೇಕು. ಕೆಮ್ಮಿಗೆ ಇದು ಉತ್ತಮ ಪರಿಹಾರ.
ಮಕ್ಕಳಿಗೆ ಇದನ್ನು ನೀಡುವುದಾದರೆ ಬರೀಈ ಎಲೆಯ ರಸ ನೀಡಿದರೆ ಸಾಕಾಗುತ್ತದೆ.ಕಾಳುಮೆಣಸು ಬೆರೆಸಬೇಕೆಂದಿಲ್ಲ.
ಅಲ್ಲದೆ ಈ ಎಲೆಯನ್ನು ಬಿಸಿ ಮಾಡಿ ಎದೆಯ ಭಾಗಕ್ಕೆ ಅದರ ಶಾಖ ಕೊಟ್ಟರೆ ಕಫ ಕೂಡಾ ಕರಗಿ ನೀರಾಗುತ್ತದೆ. ಕಫ ಕಟ್ಟಿ ಎದೆ ಬಿಗಿ ಹಿಡಿಯುತ್ತಿದ್ದರೆ ಇದು ಉತ್ತಮ ಪರಿಹಾರ.
ಅಲ್ಲದೆ ಸಾಧಾರಣ ಜ್ವರ ಬಂದಾಗ ದೊಡ್ಡ ಪತ್ರೆ ಎಲೆಯನ್ನು ಸ್ವಲ್ಪ ಬೆಳಕಿಯ ಝಳದಲ್ಲಿ ಬಾಡಿಸಿ ತಲೆ ಮೇಲೆ ಇಟ್ಟರೆ ತಾತ್ಕಾಲಿಕ ಮಟ್ಟಕ್ಕೆ ಜ್ವರ ಕಡಿಮೆ ಆಗುತ್ತದೆ.
ಸೂಚನೆ: ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಇದನ್ನು ಖಚಿತಪಡಿಸುವುದಿಲ್ಲ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತಪ್ಪದೇ ತೆಗೆದುಕೊಳ್ಳಿ.