Ajwain Leaf: ಶೀತ, ನೆಗಡಿಯಿಂದ ಮಧುಮೇಹದವರೆಗೂ ರಾಮಬಾಣ ಈ ಒಂದು `ಎಲೆ`
ಮನೆಯಲ್ಲಿ ಸುಲಭವಾಗಿ ಬೆಳಿಸಬಹುದಾದ ದೊಡ್ಡಪತ್ರೆ ಎಲೆಯು ಆರೋಗ್ಯಕ್ಕೆ ವರದಾನಕ್ಕಿಂತ ಕಡಿಮೆಯಿಲ್ಲ.
ಹಲವು ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ದೊಡ್ಡಪತ್ರೆ ಎಲೆಗಳಲ್ಲಿರುವ ಉತ್ಕರ್ಷಣ ನಿರೋಧಕಗಳು, ಜೀವಸತ್ವಗಳು ಮತ್ತು ಖನಿಜಗಳು ಮಧುಮೇಹ ನಿವಾರಣೆಯಿಂದ ಮುಟ್ಟಿನ ಸಮಸ್ಯೆವರೆಗೂ ರಾಮಬಾಣವಿದ್ದಂತೆ.
ಪುಟ್ಟ ಮಕ್ಕಳಿಗೆ ಋತುಮಾನದ ಸಾಮಾನ್ಯ ಶೀತ, ನೆಗಡಿ ಇದ್ದರೆ ಎದೆ ಹಾಗೂ ಬೆನ್ನಿನ ಭಾಗಕ್ಕೆ ಇದರ ರಸ ಸವರಿದರೆ ಶೀಘ್ರವೇ ಪರಿಹಾರ ದೊರೆಯುತ್ತದೆ.
ದೊಡ್ಡಪತ್ರೆಯಲ್ಲಿ ಆಂಟಿ-ವೈರಲ್ ಗುಣಲಕ್ಷಣಗಳು ಹೇರಳವಾಗಿದ್ದು, ರಸ ಸವಿದರೆ ಸಾಕು ಉಸಿರಾಟದ ಸೋಂಕುಗಳನ್ನು ಪರಿಹಾರ ಪಡೆಯಬಹುದು.
ದೊಡ್ಡಪತ್ರೆ ಎಲೆಗಳಲ್ಲಿ ಮಧುಮೇಹ ವಿರೋಧಿ ಗುಣಗಳು ಸಮೃದ್ಧವಾಗಿವೆ ಎಂದು ಅಧ್ಯಯನಗಳಿಂದ ತಿಳಿದುಬಂದಿದ್ದು, ನಿತ್ಯ ಖಾಲಿ ಹೊಟ್ಟೆಯಲ್ಲಿ ಒಂದು ದೊಡ್ಡಪತ್ರೆ ಎಲೆ ಸೇವಿಸುವುದರಿಂದ ದೇಹದಲ್ಲಿ ಬ್ಲಡ್ ಶುಗರ್ ಹೆಚ್ಚಾಗುವುದಿಲ್ಲ.
ದೊಡ್ಡಪತ್ರೆಯಲ್ಲಿ ನೋವು ನಿವಾರಕ ಗುಣಲಕ್ಷಣಗಳು ಹೇರಳವಾಗಿದ್ದು ಇದರ ಕಷಾಯ ತಯಾರಿಸಿ ಕುಡಿಯುವುದರಿಂದ ಮಹಿಳೆಯರು ಮುಟ್ಟಿನ ಸಮಯದಲ್ಲಿ ಅನುಭವಿಸುವ ನೋವಿನಿಂದ ಪರಿಹಾರ ದೊರೆಯುತ್ತದೆ.
ಅಲರ್ಜಿ ಪೀಡಿತ ಜಾಗದಲ್ಲಿ ದೊಡ್ಡಪತ್ರೆ ಎಲೆಯ ರಸ ಸವರುವುದರಿಂದ ಆದಷ್ಟು ಶೀಘ್ರವಾಗಿ ಅಲರ್ಜಿಯಿಂದ ಮುಕ್ತಿ ದೊರೆಯುತ್ತದೆ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.