ಹುಟ್ಟಿದ 11 ತಿಂಗಳ ಬಳಿಕ ಅಕಾಯ್ ಕೊಹ್ಲಿ ಫೇಸ್ ರಿವೀಲ್! ಏನ್ ಮುದ್ದಾಗಿದ್ದಾನೆ ವಿರಾಟ್ ಕೊಹ್ಲಿ ಮಗ... ಫೋಟೋ ಇಲ್ಲಿದೆ
ಇತ್ತೀಚೆಗೆಯಷ್ಟೇ ತಮ್ಮ ಮಗುವಿನ ಫೋಟೋ ಅನುಮತಿ ಇಲ್ಲದೆ ಕ್ಲಿಕ್ಕಿಸಬಾರದು ಎಂದು ವಿದೇಶಿ ಪತ್ರಕರ್ತೆಯ ವಿರಾಟ್ ಕೊಹ್ಲಿ ಜಗಳವಾಡಿರುವುದು ತಿಳಿದೇಇದೆ. ಇದಕ್ಕೆ ಸಂಬಂಧಿಸಿದ ಅನೇಕ ಸುದ್ದಿಗಳು ಹರಿದಾಡುತ್ತಿವೆ.
ಆದರೆ ಈ ಬೆನ್ನಲ್ಲೇ ಅಕಾಯ್ ಎಂದು ಹೇಳಲಾಗುತ್ತಿರುವ ಮಗುವಿನ ಫೋಟೋವೊಂದು ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.
ಅನುಷ್ಕಾ ಶರ್ಮಾನೇ ಮಗುವನ್ನು ಎತ್ತಿಕೊಂಡಿದ್ದು, ಇದನ್ನು ಕಂಡ ಅಭಿಮಾನಿಗಳು ಹುಟ್ಟಿದ 11 ತಿಂಗಳ ಬಳಿಕ ಅಕಾಯ್ ಫೋಟೋ ವೈರಲ್ ಆಗಿದೆ ಎಂದು ಹೇಳುತ್ತಿದ್ದಾರೆ.
ಅಂದಹಾಗೆ ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ತಮ್ಮ ಇಬ್ಬರು ಮಕ್ಕಳನ್ನು ಮಾಧ್ಯಮದಿಂದ ದೂರ ಇಡುತ್ತಿದ್ದಾರೆ. ಇಲ್ಲಿಯವರೆಗೆ ದಂಪತಿ ತಮ್ಮ ಮಕ್ಕಳ ಫೋಟೋವನ್ನು ಒಮ್ಮೆಯೂ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿಲ್ಲ. ಆದರೆ ಎಲ್ಲ ಪ್ರಯತ್ನಗಳ ನಡುವೆಯೂ ಅನುಷ್ಕಾ ಮತ್ತು ವಿರಾಟ್ ಪುತ್ರ ಅಕಾಯ್ ಫೋಟೋಗಳು ಹೊರಬೀಳುತ್ತಿವೆ.
ಈ ವರ್ಷದ ಫೆಬ್ರವರಿ 15 ರಂದು ಅನುಷ್ಕಾ ಮತ್ತು ವಿರಾಟ್ ತಮ್ಮ ಮಗ ಅಕಾಯ್ ಜನನದ ಬಗ್ಗೆ ಸಾಮಾಜಿಕ ಮಾಧ್ಯಮದ ಮೂಲಕ ತಿಳಿಸಿದ್ದರು. ಇನ್ನು ಅಕಾಯ್ ಜನನದ ಬಳಿಕ ಲಂಡನ್‌ನಲ್ಲೇ ನೆಲೆಸಿರುವ ಈ ಜೋಡಿ, ಇನ್ಮುಂದೆ ಅಲ್ಲಿಯೇ ಸೆಟಲ್ ಆಗಲಿದ್ದಾರೆ ಎಂದು ಹೇಳಲಾಗುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ಅವರ ಬಾಲ್ಯದ ಕೋಚ್ ಕೂಡ ಇತ್ತೀಚೆಗೆ ಅಚ್ಚರಿಯ ಹೇಳಿಕೆ ನೀಡಿದ್ದರು.