ಹೇಗಿದೆ ಗೊತ್ತಾ Akasa Air ವಿಮಾನ ? ಯಾತ್ರಿಗಳಿಗೆ ಇದೇ ಮೊದಲ ಬಾರಿಗೆ ಸಿಗಲಿದೆ ಈ ಸೌಲಭ್ಯ

Thu, 28 Jul 2022-11:29 am,

ವಿಮಾನದ ಒಳಗಿನ ಫೋಟೋಗಳನ್ನು ಏರ್‌ಲೈನ್ಸ್ ಹಂಚಿಕೊಂಡಿದೆ. ಕಂಪನಿಯು ತನ್ನ ವಿಮಾನಗಳು ಇತರ ವಿಮಾನಯಾನ ಸಂಸ್ಥೆಗಳಿಗಿಂತ ಅನೇಕ ವಿಷಯಗಳಲ್ಲಿ ವಿಶೇಷವಾಗಿದೆ ಎಂದು ಹೇಳಿಕೊಂಡಿದೆ. ಅಲ್ಲದೆ, ಪ್ರಯಾಣದ ಸಮಯದಲ್ಲಿ ಹೆಚ್ಚುವರಿ ಸ್ಥಳಾವಕಾಶ ಸಿಗಲಿದೆ ಎಂದು ವಿಮಾನಯಾನ ಸಂಸ್ಥೆ ಹೇಳಿದೆ. ಹೆಚ್ಚು ಲೆಗ್‌ರೂಮ್ ಸಿಗುವ ಕಾರಣ ಪ್ರಯಾಣ ಸುಗಮವಾಗಲಿದೆ. 

ಅಲ್ಲದೆ ವಿಮಾನದಲ್ಲಿನ ಸೀಟುಗಳು ಇತರ ಯಾವುದೇ ಏರ್‌ಲೈನ್‌ಗಳಿಗಿಂತ ಹೆಚ್ಚು ಆರಾಮದಾಯಕವಾಗಿರುತ್ತದೆ ಎಂದು ಏರ್‌ಲೈನ್ ಹೇಳಿಕೊಂಡಿದೆ. ಆರಾಮದಾಯಕ ಆಸನದಿಂದಾಗಿ, ದೀರ್ಘ ವಿಮಾನ ಪ್ರಯಾಣವನ್ನು ಆರಾಮವಾಗಿ ಮಾಡಬಹುದು. 

ಈ ವಿಮಾನದಲ್ಲಿ ಪ್ರತಿ ಸೀಟಿನಲ್ಲಿ ಯುಎಸ್‌ಬಿ ಚಾರ್ಜರ್ ಸೌಲಭ್ಯವನ್ನು ಒದಗಿಸಲಾಗಿದೆ. ಇದರೊಂದಿಗೆ ವಿಮಾನ ಪ್ರಯಾಣದ ಸಮಯದಲ್ಲಿ ನಿಮ್ಮ ಫೋನ್ ಅನ್ನು ಸುಲಭವಾಗಿ ಚಾರ್ಜ್ ಮಾಡಬಹುದು. USB ಚಾರ್ಜರ್ ಅನ್ನು ಮುಂಭಾಗದ ಸೀಟಿನ ಹಿಂಭಾಗದಲ್ಲಿ ನೀಡಲಾಗಿದೆ. ಫೋನ್ ಚಾರ್ಜ್ ಮಾಡುವ ಸೌಲಭ್ಯವನ್ನು ನೀಡುತ್ತಿರುವ ಮೊದಲ ವಿಮಾನಯಾನ ಸಂಸ್ಥೆಯಾಗಿದೆ

ಆಕಾಶ ವಿಮಾನಯಾನ ಸಂಸ್ಥೆಯು ಮಾರ್ಗ ಮತ್ತು ಸಮಯದ ಮಾಹಿತಿಯನ್ನು ಸಹ ಪ್ರಯಾಣಿಕರಲ್ಲಿ ಹಂಚಿಕೊಂಡಿದೆ. ಮುಂಬೈನಿಂದ ಅಹಮದಾಬಾದ್, ಬೆಂಗಳೂರಿನಿಂದ ಕೊಚ್ಚಿ ಮಾರ್ಗದಲ್ಲಿ ಪ್ರತಿ ವಾರ 26 ವಿಮಾನಗಳು ಮತ್ತು ಬೆಂಗಳೂರಿನಿಂದ ಮುಂಬೈ ಮಾರ್ಗದಲ್ಲಿ ವಾರಕ್ಕೆ 28 ವಿಮಾನಗಳು ಕಾರ್ಯನಿರ್ವಹಿಸಲಿವೆ ಎಂದು ಕಂಪನಿಯು ತಿಳಿಸಿದೆ.

ಮುಂಬೈನಿಂದ ಬೆಂಗಳೂರಿಗೆ 4938 ರೂ.  (1 ಗಂ 35 ನಿಮಿಷಗಳು) ಬೆಂಗಳೂರಿನಿಂದ ಮುಂಬೈ  5209 ರೂ (1 ಗಂ 35 ನಿಮಿಷಗಳು) ಮುಂಬೈನಿಂದ ಅಹಮದಾಬಾದ್ 3948 ರೂ ( 80 ನಿಮಿಷಗಳು) ಅಹಮದಾಬಾದ್‌ನಿಂದ ಮುಂಬೈ- 3906 ರೂ.   ಬೆಂಗಳೂರಿನಿಂದ ಕೊಚ್ಚಿ 3483   ರೂ. , ಕೊಚ್ಚಿಯಿಂದ ಬೆಂಗಳೂರು 3282 ರೂಪಾಯಿ.  ( photo  source  twitter/ Akasa Air) 

ZEENEWS TRENDING STORIES

By continuing to use the site, you agree to the use of cookies. You can find out more by Tapping this link