30 ವರ್ಷಗಳ ಬಳಿಕ ನವರಾತ್ರಿಯಂದು ಅಖಂಡ ಗ್ರಹಯೋಗ! ಈ 3 ರಾಶಿಗೆ ರಾಜರಂತಹ ಜೀವನ, ದುಡ್ಡಿನ ಮಳೆ-ಬಂಪರ್ ಲಾಟರಿ ಭಾಗ್ಯ
ನವರಾತ್ರಿ ಸಮಯದಲ್ಲಿ 30 ವರ್ಷಗಳ ಬಳಿಕ ವಿಶೇಷ ಯೋಗಗಳು ಸೃಷ್ಟಿಯಾಗುತ್ತವೆ. ಮಂಗಳಕರ ಗ್ರಹ ಯೋಗಗಳು ಎಲ್ಲಾ ರಾಶಿಗಳ ಮೇಲೆ ಪ್ರಭಾವ ಬೀರುತ್ತವೆ.
ಈ ಬಾರಿ ನವರಾತ್ರಿ ಅಕ್ಟೋಬರ್ 15ರಂದು ಪ್ರಾರಂಭವಾಗಿದೆ. ದೇಶದಲ್ಲೆಡೆ ಸಂಭ್ರಮ ಮನೆ ಮಾಡಿದ್ದು, ಅಕ್ಟೋಬರ್ 23 ರಂದು ಕೊನೆಗೊಳ್ಳುತ್ತದೆ. ಇನ್ನು ಈ ಶುಭ ಸಮಯದಲ್ಲಿ ವಿಶೇಷ ಯೋಗಗಳು ರೂಪುಗೊಂಡು ಕೆಲ ರಾಶಿಯವರ ಬಾಳನ್ನು ಬೆಳಗಲಿವೆ.
ನವರಾತ್ರಿಯ ಸಮಯದಲ್ಲಿ, ಒಂಬತ್ತು ದಿನಗಳ ಕಾಲ ನವದುರ್ಗೆಯರನ್ನು ವಿಶೇಷವಾಗಿ ಪೂಜಿಸಲಾಗುತ್ತದೆ. ಶ್ರದ್ಧೆ, ಭಕ್ತಿ ನಿಷ್ಠೆಯಿಂದ ದೇವಿಯ ವಿವಿಧ ರೂಪಗಳನ್ನು ಪೂಜಿಸಿದರೆ, ಸಂತೋಷ, ಸಮೃದ್ಧಿ ಹೆಚ್ಚಾಗುತ್ತದೆ ಎಂಬುದು ನಂಬಿಕೆ.
ಮೇಷ ರಾಶಿ: 30 ವರ್ಷಗಳ ಬಳಿಕ ರೂಪುಗೊಂಡ ಅಖಂಡ ಗ್ರಹಯೋಗವು ಮೇಷ ರಾಶಿಯವರಿಗೆ ಅದೃಷ್ಟ ತರಲಿದೆ. ವೃತ್ತಿ ಕ್ಷೇತ್ರದಲ್ಲಿ ಬಹಳ ಲಾಭ ಸಿಗಲಿದೆ. ವ್ಯಾಪಾರಸ್ಥರಿಗೆ ಧನಲಾಭದ ಸಾಧ್ಯತೆ ಇದೆ. ಹೂಡಕೆಯಿಂದ ಲಾಭ ಸಿಗಲಿದೆ.
ವೃಷಭ ರಾಶಿ: ಶುಕ್ರ ಅಧಿಪತಿಯಾಗಿರುವ ಈ ರಾಶಿಯ ಜನರಿಗೆ ಅಖಂಡ ಗ್ರಹಯೋಗವು ಶುಭಫಲಗಳನ್ನ ನೀಡಲಿದೆ. ವೃತ್ತಿ ಜೀವನದಲ್ಲಿ ಭರಪೂರ ಅವಕಾಶಗಳು ಒದಗಿಬರಲಿದೆ. ಕುಟುಂಬದಲ್ಲಿ ಸಂತಸ, ನೆಮ್ಮದಿ ಹೆಚ್ಚಾಗುತ್ತದೆ.
ಕಟಕ ರಾಶಿ: ಈ ರಾಶಿಯ ಜನರಿಗೆ, ನವರಾತ್ರಿ ಸಂದರ್ಭದಲ್ಲಿ ರೂಪುಗೊಂಡ ತ್ರಿಗ್ರಾಹಿ ಯೋಗವು ಸಂಪತ್ತಿನ ಮಳೆಯನ್ನೇ ಸುರಿಸಲಿದೆ. ಆಸ್ತಿ ಅಥವಾ ವಾಹನ ಖರೀದಿಸುವ ಭಾಗ್ಯವೂ ಇದೆ.
(ಸೂಚನೆ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)