Akshaya Tritiya 2022: ಚಿನ್ನ ಖರೀದಿಸುವಾಗ ಈ 5 ಸಂಗತಿಗಳನ್ನು ನೆನಪಿನಲ್ಲಿಟ್ಟುಕೊಳ್ಳಿ
1. ಅಕ್ಷಯ ತೃತಿಯಾದಂದು ಚಿನ್ನದ ದರ - ಎಂಸಿಎಕ್ಸ್ ನಲ್ಲಿ ಮಂಗಳವಾರ ಚಿನ್ನದ ಬೆಲೆ ಶೇ.2.13 ರಷ್ಟು ಇಳಿಕೆಯಾಗಿ ಪ್ರತಿ 10 ಗ್ರಾಂ.ಗೆ 50, 650ಕ್ಕೆ ತಲುಪಿದೆ. IBJA ವೆಬ್ ಸೈಟ್ ನಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ ರೂ.51336 ಪ್ರತಿ 10 ಗ್ರಾ.ನಷ್ಟು ಇದೆ. ಇದಕ್ಕೂ ಮುನ್ನ ಫೆಬ್ರವರಿ 28, 2022ರಂದು ಚಿನ್ನದ ಬೆಲೆ 10 ಗ್ರಾಂ,ಗೆ ರೂ.50696 ಗಳಷ್ಟಿತ್ತು. 999 ಪ್ಯೂರಿಟಿ ಹೊಂದಿರುವ ಬೆಳ್ಳಿಯ ಬೆಲೆ ಪ್ರತಿ ಕೆ.ಜಿಗೆ ರೂ.62950 ತಲುಪಿದೆ. ಹಾಗಾದರೆ ಚಿನ್ನ ಖರೀದಿಸುವಾಗ ಯಾವ ಸಂಗತಿಗಳನ್ನು ನೆನಪಿನಲ್ಲಿಡಬೇಕು ತಿಳಿದುಕೊಳ್ಳೋಣ ಬನ್ನಿ.
2. ಹಾಲಮಾರ್ಕ್ ಇರುವ ಚಿನ್ನವನ್ನೇ ಖರೀದಿಸಿ - ಚಿನ್ನವನ್ನು ಖರೀದಿಸುವಾಗ ನೀವು ಅಪ್ಪಟ ಚಿನ್ನ ಖರೀದಿಸುತ್ತಿರುವಿರಿ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಿ. ಇದಕ್ಕಾಗಿ ನೀವು ಯಾವಾಗಲು ಹಾಲ್ಮಾರ್ಕ್ ಇರುವ ಚಿನ್ನಾಭರಣವನ್ನೇ ಖರೀದಿಸಬೇಕು. ಕ್ಯಾರೆಟ್ ಹೊರತುಪಡಿಸಿ, ಚಿನ್ನದ ಫೈನ್ನೆಸ್ ಮೂಲಕ ಕೂಡ ನೀವು ಚಿನ್ನದ ಅಪ್ಪಟತನವನ್ನು ಪರಿಶೀಲಿಸಬಹುದು. ಪ್ಯೂರಿಟಿ ಚೆಕ್ ಮಾಡಿ ಖರೀದಿ ಮಾಡಲಾಗುವ ಚಿನ್ನ ನಿಮಗೆ ಭವಿಷ್ಯದಲ್ಲಿ ಉತ್ತಮ ರೀಸೆಲ್ ದರ ನೀಡುತ್ತದೆ.
3. ಶಾಪಿಂಗ್ ಮಾಡುವಾಗ ರಸೀದಿ ಪಡೆಯುವುದನ್ನು ಮರೆಯಬೇಡಿ - ಕೆಲವರು ಚಿನ್ನ ಖರೀದಿಸುವಾಗ ಅಂಗಡಿ ಮಾಲೀಕರು ನೀಡುವ ಕಚ್ಚಾ ರಸೀದಿಯನ್ನು ಪಡೆದು ಇಟ್ಟುಕೊಳ್ಳುತ್ತಾರೆ. ಜನರು ಸಾಮಾನ್ಯವಾಗಿ ಈ ರೀತಿಯ ತಪ್ಪನ್ನು ಮಾಡುತ್ತಾರೆ. ಆದರೆ, ಚಿನ್ನ ಖರೀದಿಸುವಾಗ ಪಕ್ಕಾ ರಸೀದಿಯನ್ನು ಪಡೆಯುವುದನ್ನು ಮರೆಯಬೇಡಿ. ಇದರ ಜೊತೆಗೆ ಬಿಲ್ ನಲ್ಲಿ ನೀವು ಖರೀದಿಸಿರುವ ಆಭರಣದ ಮೇಕಿಂಗ್ ಚಾರ್ಜ್ ಹಾಗೂ ಅಂಗಡಿ ಮಾಲೀಕರ ಹೆಸರು ಇತ್ಯಾದಿ ಸಂಪೂರ್ಣ ವಿವರಣೆಗಳು ಇರಬೇಕು.
4. ಪ್ಯಾಕೆಜಿಂಗ್ - ಸಾಮಾನ್ಯವಾಗಿ ಗೋಲ್ಡ್ ಕ್ವಾಯಿನ್ ಪ್ಯಾಕೆಜಿಂಗ್ ತುಂಬಾ ಮಹತ್ವದ್ದಾಗಿರುತ್ತದೆ. ಗೋಲ್ಡ್ ಕ್ವಾಯಿನ್ ಮೇಲೆ ಬರುವ ಪ್ಯಾಕೆಜಿಂಗ್ ಟ್ಯಾಂಪರ್ ಪ್ರೂಫ್ ಆಗಿರುತ್ತದೆ ಮತ್ತು ಇದರಿಂದ ಚಿನ್ನದ ನಾಣ್ಯದ ಶುದ್ಧತೆ ಹಾಗೆಯೇ ಇರುತ್ತದೆ. ಒಂದು ವೇಳೆ ಪ್ಯಾಕೆಜಿಂಗ್ ಹಾಳಾಗಿದ್ದರೆ, ಅದರ ಮರುಮಾರಾಟದಲ್ಲಿ ನಿಮಗೆ ಅಡಚಣೆ ಎದುರಾಗುತ್ತದೆ. ಹೀಗಾಗಿ ಪ್ಯಾಕೆಜಿಂಗ್ ಬಗ್ಗೆ ಗಮನಹರಿಸಲು ಮರೆಯಬೇಡಿ.
5. ತೂಕವನ್ನು ಸರಿಯಾಗಿ ಗಮನಿಸಿ - ಚಿನ್ನ ಖರೀದಿಸಲು ಹೋದಾಗ ಬೇರೆ ಯಾವುದೇ ಕೆಲಸದಲ್ಲಿ ವ್ಯಸ್ತರಾಗಬೇಡಿ. ಉದಾಹರಣೆಗೆ ಚಿನ್ನ ಖರೀದಿಸುವಾಗ ಕೆಲವರು ಫೋನ್ ನಲ್ಲಿ ಮಾತನಾಡುತ್ತಿರುತ್ತಾರೆ ಮತ್ತು ವ್ಯಾಪಾರಿ ಚಿನ್ನವನ್ನು ತೂಗುತ್ತಿರುತ್ತಾನೆ. ಈ ಅವಧಿಯಲ್ಲಿ ಫ್ರೀಯಾಗಿರಿ ಮತ್ತು ಚಿನ್ನ ಖರೀದಿಸುತ್ತಿರುವಾಗ ತೂಕವನ್ನು ಸರಿಯಾಗಿ ಗಮನಿಸಿ. ಹಲವು ಬಾರಿ ಅಂಗಡಿಯವರು ನಿಮಗೆ ತಪ್ಪಾದ ಚಿನ್ನವನ್ನು ತೂಗಿ ಪಂಗನಾಮ ಹಾಕುತ್ತಾರೆ.
6. ಮೇಕಿಂಗ್ ಚಾರ್ಜ್ - ವಿವಿಧ ಚಿನ್ನಾಭರಣಗಳ ಲೆಕ್ಕಾಚಾರದಲ್ಲಿ ಮೇಕಿಂಗ್ ಚಾರ್ಜ್ ಅನ್ವಯಿಸುತ್ತದೆ. ಇದು ಶೇ.6 ರಿಂದ ಶೇ.30ರಷ್ಟಿರುತ್ತದೆ. ಇದರ ಮೇಲೆ ನಿಮಗೆ ವಿನಾಯ್ತಿ ಕೂಡ ಸಿಗುತ್ತದೆ. ಹೀಗಿರುವಾಗ ಚಿನ್ನದಂಗಡಿಗೆ ಹೋದ ಮೇಲೆ ಪ್ರತಿಯೊಂದು ಸಂಗತಿಗಳ ಮೇಲೆ ಮೊದಲೇ ಸ್ಥಿತಿಯನ್ನು ಸ್ಪಷ್ಟವಾಗಿ ಅರ್ಥೈಸಿಕೊಳ್ಳಿ.