Alert! ದೇಶದಲ್ಲಿ ಸಿಕ್ಕಿದೆ ಕೊರೊನಾ ವೈರಸ್ ನ Delta Plus Variant

Wed, 16 Jun 2021-7:14 pm,

1. ಏನಿದು Delta Plus Variant (What is the new delta plus variant?) - ಡೆಲ್ಟಾ ಪ್ಲಸ್ ವೇರಿಯಂಟ್, ಡೆಲ್ಟಾ ರೂಪಾಂತರಿಯ ಹೊಸ ರೂಪವಾಗಿದೆ. ಕೊರೊನಾ ವೈರಸ್ ನ ಎರಡನೆಯ ಅಲೆಯ ವೇಳೆ ವೈರಸ್ ದಾಳಿಗೆ ತುತ್ತಾಗಿರುವ ಜನರಲ್ಲಿ ಡೆಲ್ಟಾ ವೇರಿಯಂಟ್ ಪತ್ತೆಯಾಗಿತ್ತು. ಈ ಡೆಲ್ಟಾ ರೂಪಾಂತರಿಯೇ ಮ್ಯೂಟೆಟ್ ಆಗಿ ಡೆಲ್ಟಾ ಪ್ಲಾಸ್ ಆಗಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

2. ಎಷ್ಟು ಅಪಾಯಕಾರಿಯಾಗಿದೆ ಈ ವೇರಿಯಂಟ್? (How concerning is the Delta plus variant for the Indian population?) - ಪ್ರತಿಬಾರಿಯೂ ಈ ವೈರಸ್ ರೂಪಾಂತರಗೊಳ್ಳುವ ಕಾರಣ ಇದು ಅಪಾಯಕಾರಿ ಸಾಬೀತಾಗುತ್ತಿದೆ. ಹೀಗಾಗಿ ಮತ್ತೊಮ್ಮೆ ಈ ವೈರಸ್ ಮ್ಯೂಟೆಟ್ ಆಗಿರುವುದು ಚಿಂತೆ ಹೆಚ್ಚಿಸಿದೆ. ಆದರೆ ತಜ್ಞರು ಹೇಳುವ ಪ್ರಕಾರ, ಇದುವರೆಗೆ ಡೆಲ್ಟಾ ಪ್ಲಸ್ ವೇರಿಯಂಟ್ ಅಪಾಯಕಾರಿ ಸ್ವರೂಪ ಪಡೆದುಕೊಂಡಿಲ್ಲ ಎನ್ನುತ್ತಾರೆ. ಆದರೆ ಸರ್ಕಾರ ಈಗಾಗಲೇ ಇದರ ಮೇಲೆ ಕಾರ್ಯ ಆರಂಭಿಸಿದೆ.

3. ರಕ್ಷಣೆ ಹೇಗೆ ಸಿಗಲಿದೆ  (How does it respond to COVID treatments?) - ಈ ಕುರಿತು ಹೇಳಿಕೆ ನೀಡಿರುವ ಸರ್ಕಾರ ಮ್ಯೂಟೆಶನ್ ಒಂದು ಜೈವಿಕ ಪ್ರಕ್ರಿಯೆಯಾಗಿದೆ. ಹೀಗಾಗಿ ನಮ್ಮನ್ನು ನಾವು ರಕ್ಷಿಸಿಕೊಳ್ಳುವ ವಿಧಾನ ಕಂಡುಕೊಳ್ಳಬೇಕಿದೆ. ಇದನ್ನು ಹರಡದಂತೆ ನಾವು ತಡೆಗಟ್ಟಬೇಕಿದೆ. ಇದರರ್ಥ 'ಕೊರೊನಾ ಪ್ರೋಟೋಕಾಲ್ ಅನ್ನು ನಾವು ಕಠಿಣವಾಗಿ ಪಾಲಿಸುವ ಅವಶ್ಯಕತೆ ಇದೆ. ಒಂದು ವೇಳೆ ನಾವು ನಿರ್ಲಕ್ಷ ತೋರಿದರೆ ಮತ್ತೆ ಕಷ್ಟ ಕಾಲ ಎದುರಾಗಲಿದೆ.

4. ಡೆಲ್ಟಾ ಪ್ಲಾಸ್ ರೂಪಾಂತರಿ ಹೇಗೆ ತಯಾರಾಗಿದೆ? - ಡೆಲ್ಟಾ ಪ್ಲಸ್ ವೇರಿಯಂಟ್ B.1.617.2  ಸ್ತ್ರೈನ್ ನ ಮ್ಯೂಟೆಶನ್ ನಿಂದ ತಯಾರಾಗಿದೆ. ಈ ಮ್ಯೂಟೆಶನ್ ಹೆಸರು K417N ಆಗಿದ್ದು, ಈ ಕೊರೊನಾ ವೈರಸ್ ನ ಸ್ಪೈಕ್ ಪ್ರೋಟೀನ್ ನಲ್ಲಿಯೂ ಕೂಡ ಸ್ವಲ್ಪ ಪ್ರಮಾಣದ ಬದಲಾವಣೆಗಳನ್ನು ಗಮನಿಸಲಾಗಿದೆ. ಹೀಗಾಗಿ ಈ ಹೊಸ ರೂಪಾಂತರಿ ಬೆಳಕಿಗೆ ಬಂದಿದೆ. ಆದೆ, ನೀತಿ ಆಯೋಗ ಹೇಳುವ ಪ್ರಕಾರ, 'ಡೆಲ್ಟಾ ಪ್ಲಸ್ ವೇರಿಯಂಟ್' ಈ ವರ್ಷದ ಮಾರ್ಚ್ ನಿಂದಲೇ ನಮ್ಮ ಮಧ್ಯೆ ಇದೆ ಎಂದಿದೆ.

5. ವಿಶ್ವಾದ್ಯಂತ ಹರಡಿದೆ ಡೆಲ್ಟಾ (Now Delta Variant Spread Across World) - ಭಾರತದಲ್ಲಿ ಎರಡನೇ ಅಲೆಯ ಸಂದರ್ಭದಲ್ಲಿ ಹಾಹಾಕಾರ ಸೃಷ್ಟಿಸಿದ್ದ ಡೆಲ್ಟಾ ವೇರಿಯಂಟ್ ಇದೀಗ ವಿಶ್ವಾದ್ಯಂತ ಹರಡಿದೆ. ಇದುವರೆಗೆ ವಿಶ್ವಾದ್ಯಂತ ಈ ವೇರಿಯಂಟ್ ನ 156 ಸ್ಯಾಂಪಲ್ ಗಳು ಪತ್ತೆಯಾಗಿವೆ.  ಇದರ ಮೊದಲ ಸ್ಯಾಂಪಲ್ ಮಾರ್ಚ್ ನಲ್ಲಿ ಯುರೋಪ್ ನಲ್ಲಿ ಪತ್ತೆಯಾಗಿದೆ. ಹಲವು ದೇಶಗಳು ಇದನ್ನು 'ಇಂಡಿಯನ್ ವೇರಿಯಂಟ್' ಎಂದೂ ಕೂಡ ಕರೆಯುತ್ತಿವೆ. ಭಾರತದಲ್ಲಿ ಡೆಲ್ಟಾ ವೈರಸ್ ಎರಡನೆಯ ಅಲೆಯಲ್ಲಿ ಭಾರಿ ಹಾನಿ ಸೃಷ್ಟಿಸಿದೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link