Alia Bhatt: ಲಂಡನ್‌ನಲ್ಲಿ ದುಬಾರಿ ನೆಕ್ಲೇಸ್ ಧರಿಸಿ ನೆಟ್ಟಿಗರ ಕಣ್ಮನ ಸೆಳೆದ ಬಾಲಿವುಡ್ ಬೆಡಗಿ!
ಬಾಲಿವುಡ್ ನಟಿ ಆಲಿಯಾ ಭಟ್ ಇತ್ತೀಚೆಗೆ ಲಂಡನ್‌ನಲ್ಲಿ ಭಾರತದ ಬಡವರ ಉನ್ನತಿಗಾಗಿ ಹಣವನ್ನು ಸಂಗ್ರಹಿಸುವ ಗುರಿಯನ್ನು ಹೊಂದಿದ ಸಮಾರಂಭವೊಂದರಲ್ಲಿ ಕಾಣಿಸಿಕೊಂಡಿದ್ದರು.
ಆಲಿಯಾ ಭಟ್ ಲಂಡನ್‌ನಲ್ಲಿ ಎರಡು ವಿಭಿನ್ನ ರೀತಿಯಲ್ಲ್ ಕಾಣಿಸಿಕೊಂಡಿದ್ದರು. ಮೊದಲು ವೈನ್ ಪರ್ಪಲ್ ಬಣ್ಣದ ಗೌನ್‌ನಲ್ಲಿ ಕಾಣಿಸಿಕೊಂಡಿದ್ದರು. ಇನ್ನೊಂದರಲ್ಲಿ ಕ್ರೀಮ್ ಪರ್ಲ್ ನೆಟೆಡ್ ಸ್ಯಾರಿಯನ್ನು ಉಟ್ಟಿದ್ದರು.
ನಟಿ ಆಲಿಯಾ ಭಟ್ ಲಂಡನ್‌ನಲ್ಲಿ ವೈನ್ ಪರ್ಪಲ್ ಬಣ್ಣದ ಗೌನ್ ಹಾಕಿಕೊಂಡಾಗ ಅದಕ್ಕೆ ಮ್ಯಾಚ್ ಆಗುವಂತಹ ದುಬಾರಿ ನೆಕ್ಲೇಸ್ ಹಾಗೂ ಬೆರಳಿಗೆ ನೀಲಮಣಿಯ ಉಂಗುರವನ್ನು ಧರಿಸಿಕೊಂಡಿದ್ದರು.
ಆಲಿಯಾ ಲಂಡನ್ ಕಾರ್ಯಕ್ರಮದಲ್ಲಿ ಹಾಕಿಕೊಂಡಿದ್ದ ಬ್ರಾಂಡ್ ಬಲ್ಗೇರಿಯ ಡೈಮೆಂಡ್ ನೆಕ್ಲೇಸ್ ಹಾಗೂ ಉಂಗುರ ಎರಡೂ ಸೇರಿ 20 ಕೋಟಿ ರೂಪಾಯಿ ಮೌಲ್ಯದ್ದಾಗಿದೆ.
ಬಿ-ಟೌನ್ ಸುಂದರಿ ಆಲಿಯಾ ಭಟ್ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಈ ಕಾರ್ಯಕ್ರಮದ ಫೋಟೋಸ್ ಮತ್ತು ವಿಡಿಯೋವನ್ನು ಹಂಚಿಕೊಂಡಿದ್ದು, ಕ್ಯಾಪ್ಶನ್‌ನಲ್ಲಿ "ತುಂಬಾ ಪ್ರೀತಿ, ಉದ್ದೇಶ ಮತ್ತು ಭರವಸೆಯಿಂದ ತುಂಬಿರುವ, ನಿಜವಾಗಿಯೂ ವಿಶೇಷವಾದ ಸಂಜೆಯನ್ನು ಆಯೋಜಿಸಲು ನನಗೆ ಬಹಳ ಸಂತೋಷವಾಯಿತು" ಎಂದು ಬರೆದುಕೊಂಡಿದ್ದಾರೆ.
ಆಲಿಯಾ ಭಟ್ ಫೋಸ್ಟ್‌ಗೆ 22 ಲಕ್ಷಕ್ಕೂ ಹೆಚ್ಚು ಲೈಕ್ಸ್ ಬಂದಿದೆ. ಹಾಗೆ ನೆಟ್ಟಿಗರು ಕಮೆಂಟ್ ವಿಭಾಗದಲ್ಲಿ ರೆಡ್ ಹಾರ್ಟ್ ಏಮೋಜಿಗಳ ಜೊತೆಗೆ ಸಾಕಷ್ಟು ಜನ ತುಂಬಾ ಸುಂದರವಾಗಿ ಕಾಣುತ್ತಿದ್ದೀರಾ ಅಂತ ಬರೆದಿದ್ದಾರೆ.