Aliens On Earth: ಭೂಮಿಗೆ ಬರಲಿವೆಯೇ Aliens? ವಿಜ್ಞಾನಿಗಳು ಹೇಳುವುದೇನು?
ಅಂತರರಾಷ್ಟ್ರೀಯ ವಿಜ್ಞಾನಿಗಳ ತಂಡವೊಂದು ಭೂಮಿಯಿಂದ ಸಾಕಷ್ಟು ದೂರದ ಭಾಗದಿಂದ ರೇಡಿಯೋ ಸಿಗ್ನಲ್ ಗಳನ್ನೂ ಪತ್ತೆಹಚ್ಚಿದೆ. ಟೌ ಬೂಟ್ಸ್ ಎಂಬ ತಾರಾಮಂಡಲದಲ್ಲಿ ಈ ಗ್ರಹವಿದೆ. ಇದು ಭೂಮಿಯಿಂದ ಸುಮಾರು 51 ಬೆಳಕಿನ ವರ್ಷಗಳ ದೂರದಲ್ಲಿದೆ. ಈ ತಾರಾಮಂಡಲ ಬೈನರಿ ಸ್ಟಾರ್ ಮತ್ತು ಎಕ್ಸೋಪ್ಲಾನೆಟ್ ಅನ್ನು ಒಳಗೊಂಡಿದೆ.
ಜೇಕ್ ಟರ್ನರ್ (Jake Turner) ಈ ವಿಜ್ಞಾನಿಗಳ ತಂಡವನ್ನು ಮುನ್ನಡೆಸುತ್ತಿದ್ದಾರೆ. ಜೇಕ್ ಟರ್ನರ್ ಕಾರ್ನೆಲ್ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಸಂಶೋಧಕರಾಗಿದ್ದಾರೆ (Postdoctoral Researcher in Cornell University). ಅವರ ತಂಡವು ಫಿಲಿಪ್ ಜಾರ್ಕಾ ಮತ್ತು ಜೀನ್ ಮಥಿಯಾಸ್ ಗ್ರಿಸ್ಮಿಯರ್ ಅವರನ್ನು ಒಳಗೊಂಡಿದೆ. ಅನ್ಯಲೋಕದ ಬಗ್ಗೆ ಅವರ ಸಂಶೋಧನೆಯನ್ನು ಸೈಂಟಿಫಿಕ್ ಜರ್ನಲ್ ಆಸ್ಟ್ರೋನಾಮಿ ಅಂಡ್ ಆಸ್ಟ್ರೋಫಿಸಿಕಲ್ ನಲ್ಲಿ ಪ್ರಕಟಗೊಂಡಿದೆ.
ಟೌ ಬೂಟ್ಸ್ ತಾರಾಮಂಡಲದಿಂದ ವಿಜ್ಞಾನಿಗಳು ಈ ಸಂಕೇತಗಳನ್ನು ಸ್ವೀಕರಿಸುತ್ತಿದ್ದಾರೆ ಎಂದು ಜೇಕ್ ಟರ್ನರ್ ಹೇಳಿದ್ದಾರೆ. ಭೂಮಿಯ ಕಾಂತಕ್ಷೇತ್ರದ ಶಕ್ತಿ ಮತ್ತು ಧ್ರುವೀಕರಣದಿಂದಾಗಿ ಈ ರೇಡಿಯೊ ಸಂಕೇತಗಳನ್ನು ಸ್ವೀಕರಿಸಲಾಗುತ್ತದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ವಿಜ್ಞಾನಿ ಜೆಕ್ ಟರ್ನರ್, ತಮ್ಮ ಅಧ್ಯಯನದಿಂದ ಏಲಿಯನ್ ಗಳ ಪ್ರಪಂಚದ ಹಲವು ರಹಸ್ಯಗಳು ಬೆಳಕಿಗೆ ಬಂದಿವೆ ಎಂದಿದ್ದಾರೆ. ಇವುಗಳನ್ನು ಬಳಸಿ ಏಲಿಯನ್ ಪ್ರಪಂಚದ ಅಧ್ಯಯನ ನಡೆಸುವ ಸಂಭವನೀಯತೆಗಳು ಹೆಚ್ಚಾಗಲಿವೆ.