ಚಂದನ್ ಶೆಟ್ಟಿಯಿಂದ ನಿವೇದಿತಾ ಗೌಡ ಪಡೆದ ಜೀವನಾಂಶ ಎಷ್ಟು ಗೊತ್ತೇ?
ಚಂದನ್ ಶೆಟ್ಟಿ ನಿವೇದಿತಾ ಗೌಡ ಒಂದು ವರ್ಷದ ಹಿಂದೆಯೇ ವಿಚ್ಛೇದನ ಪಡೆಯುವ ಬಗ್ಗೆ ತೀರ್ಮಾನಿಸಿದ್ದರಂತೆ.
ಇವರಿಬ್ಬರ ಪೋಷಕರೂ ಏನೇ ಪ್ರಯತ್ನ ಮಾಡಿದರೂ ರಾಜಿ ಸಂಧಾನ ಸಾಧ್ಯವಾಗಿಲ್ಲ ಎಂದು ಲಾಯರ್ ಅನಿತಾ ಹೇಳಿದ್ದಾರೆ.
ಲಾಯರ್ ಅನಿತಾ ಸಹ ಮೀಡಿಯೇಟರ್ ಆಗಿ ಇಬ್ಬರನ್ನೂ ಒಂದು ಮಾಡಲು ಯತ್ನಿಸಿದರಂತೆ. ಇಬ್ಬರೂ ತಮ್ಮ ತಮ್ಮ ವೃತ್ತಿ ಜೀವನದ ಕಾರಣ ಡಿವೋರ್ಸ್ ಪಡೆಯುವ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಹೇಳಿದ್ದಾರೆ.
ವಿಚ್ಛೇದನ ಪ್ರಕ್ರಿಯೆ ವೇಳೆ ಪತಿಯಿಂದ ಪತ್ನಿ ಜೀವನಾಂಶ ಕೇಳುವುದು ನ್ಯಾಯಾಲಯದಲ್ಲಿ ನಡೆಯುವ ಸರ್ವೆ ಸಾಮಾನ್ಯ ಪ್ರಕ್ರಿಯೆಯಾಗಿದೆ.
ಪತಿ ಚಂದನ್ ಶೆಟ್ಟಿ ಅವರಿಂದ ಪತ್ನಿ ನಿವೇದಿತಾ ಗೌಡ ಯಾವುದೇ ಜೀವನಾಂಶ ಕೇಳಿಲ್ಲ ಎಂದು ಲಾಯರ್ ಅನಿತಾ ತಿಳಿಸಿದ್ದಾರೆ.