ಅಕಾಲಿಕವಾಗಿ ಬಿಳಿಯಾದ ಕೂದಲನ್ನು ಕಡುಕಪ್ಪಾಗಿಸುತ್ತೆ ವೀಳ್ಯದೆಲೆ: ಈ ಎಣ್ಣೆಯ ಜೊತೆ ಬೆರೆಸಿ ಹಚ್ಚಿದರೆ ಸಾಕು!
ಹೊಳೆಯುವ ಮುಖ ಮತ್ತು ಕೂದಲು ಪ್ರತಿಯೊಬ್ಬರ ವ್ಯಕ್ತಿತ್ವವನ್ನು ಹೆಚ್ಚಿಸುತ್ತದೆ. ಆದರೆ ಇದರಲ್ಲಿ ಏನಾದರೂ ಸಮಸ್ಯೆ ಕಂಡುಬಂದರೆ, ಚಿಂತೆಗೀಡುಮಾಡುತ್ತದೆ. ಇದಕ್ಕೆ ಕೆಲವು ಪರಿಹಾರಗಳನ್ನು ಅನುಸರಿಸಿಕೊಳ್ಳಬೇಕು.
ಅಂದಹಾಗೆ ವೀಳ್ಯದೆಲೆ ಕೂದಲಿಗೆ ಅಮೃತವಿದ್ದಂತೆ. ಇದನ್ನು ಸರಿಯಾದ ವಿಧಾನದಲ್ಲಿ ಬಳಕೆ ಮಾಡಿದರೆ ಕೂದಲಿನ ಸರ್ವ ಸಮಸ್ಯೆಯೂ ಪರಿಹಾರವಾಗುತ್ತದೆ.
ಈ ಹೇರ್ ಮಾಸ್ಕ್ ತಯಾರಿಸಲು, 4 ರಿಂದ 5 ವೀಳ್ಯದೆಲೆ, ತೆಂಗಿನ ಎಣ್ಣೆ, ಆಲಿವ್ ಎಣ್ಣೆ ಮತ್ತು ಸ್ವಲ್ಪ ನೀರು ಬೇಕಾಗುತ್ತದೆ. ವೀಳ್ಯದೆಲೆಯನ್ನು ಮಿಕ್ಸರ್ ಗ್ರೈಂಡರ್’ನಲ್ಲಿ ರುಬ್ಬಿಕೊಂಡು ನುಣ್ಣಗೆ ಪೇಸ್ಟ್ ಮಾಡಿಕೊಳ್ಳಬೇಕು, ನಂತರ ಅದಕ್ಕೆ ತೆಂಗಿನೆಣ್ಣೆ, ಆಲಿವ್ ಎಣ್ಣೆ ಮತ್ತು ಸ್ವಲ್ಪ ನೀರು ಸೇರಿಸಿ ಪೇಸ್ಟ್ ತಯಾರಿಸಿಕೊಳ್ಳಬೇಕು.
ಇದನ್ನು ಕೂದಲಿನ ಬೇರುಗಳಿಂದ ತುದಿಯವರೆಗೆ ಸಂಪೂರ್ಣವಾಗಿ ಹಚ್ಚಿ. ನಂತರ 5 ನಿಮಿಷಗಳ ಕಾಲ ಮಸಾಜ್ ಮಾಡಿ, 30 ನಿಮಿಷಗಳ ಕಾಲ ಒಣಗಲು ಬಿಡಿ. ಬಳಿಕ ಸಾಮಾನ್ಯ ಶಾಂಪೂ ಮತ್ತು ಕಂಡಿಷನರ್ನೊಂದಿಗೆ ಕೂದಲನ್ನು ತೊಳೆಯಿರಿ. ಹೀಗೆ ವಾರಕ್ಕೊಮ್ಮೆ ಮಾಡಬೇಕು.
ಮತ್ತೊಂದು ಹೇರ್ ಮಾಸ್ಕ್ ತಯಾರಿಸಲು 4 ರಿಂದ 5 ವೀಳ್ಯದೆಲೆಗಳು, 1 ರಿಂದ 2 ಚಮಚ ತುಪ್ಪ, 1 ಚಮಚ ಜೇನುತುಪ್ಪ ಮತ್ತು ನೀರು ಬೇಕಾಗುತ್ತದೆ. ಪೇಸ್ಟ್ ತಯಾರಿಸಲು, ವೀಳ್ಯದೆಲೆ, ನೀರು, ತುಪ್ಪ ಮತ್ತು ಜೇನುತುಪ್ಪವನ್ನು ಗ್ರೈಂಡರ್ನಲ್ಲಿ ಸೇರಿಸಿ ರುಬ್ಬಿಕೊಳ್ಳಿ. ಈ ಪೇಸ್ಟ್’ನ್ನು ಸಂಪೂರ್ಣ ಕೂದಲಿಗೆ ಹಚ್ಚಿ, 20 ನಿಮಿಷಗಳ ಕಾಲ ಒಣಗಲು ಬಿಡಿ. ನಂತರ ಶಾಂಪೂವಿನಿಂದ ಕೂದಲನ್ನು ಚೆನ್ನಾಗಿ ತೊಳೆಯಿರಿ. ಈ ವೀಳ್ಯದೆಲೆ ಹೇರ್ ಮಾಸ್ಕ್ ಕೂದಲನ್ನು ಸುಂದರವಾಗಿ, ಹೊಳೆಯುವಂತೆ ಮಾಡುತ್ತವೆ.
ಪೊಟ್ಯಾಸಿಯಮ್, ನಿಕೋಟಿನಿಕ್ ಆಮ್ಲ, ವಿಟಮಿನ್ ಎ, ಬಿ 1, ಬಿ 2 ಮತ್ತು ಸಿ ಜೊತೆಗೆ ಇತರ ಅಗತ್ಯ ಜೀವಸತ್ವಗಳು ಮತ್ತು ಖನಿಜಗಳು ವೀಳ್ಯದೆಲೆಯಲ್ಲಿ ಕಂಡುಬರುತ್ತವೆ. ಈ ಎಲ್ಲಾ ಅಂಶಗಳು ಬ್ಯಾಕ್ಟೀರಿಯಾದ ಬೆಳವಣಿಗೆಯನ್ನು ನಿಲ್ಲಿಸುವ ಮೂಲಕ ಕೂದಲು ಉದುರುವಿಕೆಯನ್ನು ತಡೆಯುವುದುದ ಹಾಗೂ ಬಿಳುಪಾಗಿರುವ ಕೂದಲನ್ನು ಕಪ್ಪಾಗಿಸುವ ಕೆಲಸ ಮಾಡುತ್ತದೆ.
ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಅರ್ಹ ವೈದ್ಯಕೀಯ ಅಭಿಪ್ರಾಯಕ್ಕೆ ಯಾವುದೇ ರೀತಿಯಲ್ಲಿ ಪರ್ಯಾಯವಾಗಿಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞ ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸಿ. ಈ ಮಾಹಿತಿಯ ಹೊಣೆಯನ್ನು Zee Kannada News ಖಚಿತಪಡಿಸಿಕೊಳ್ಳುವುದಿಲ್ಲ.