ಕೊಹ್ಲಿಯೂ ಅಲ್ಲ, ಪಾಟಿದಾರ್ ಕೂಡ ಅಲ್ಲ... ಈ ಆಟಗಾರನಿಗೆ ಪಟ್ಟ ಕಟ್ಟಲು ಆರ್‌ಸಿಬಿ ರೆಡಿ: ಸ್ಟಾರ್ ಆಲ್‌ರೌಂಡರ್ ಹೆಗಲಿಗೆ ನೂತನ ನಾಯಕತ್ವ!
ಇಂಡಿಯನ್ ಪ್ರೀಮಿಯರ್ ಲೀಗ್ 18ನೇ ಸೀಸನ್ ಅಂದರೆ IPL 2025 ಈಗಾಗಲೇ ಸದ್ದು ಮಾಡುತ್ತಿದೆ. ಮುಂಬರುವ ಸೀಸನ್‌ಗಾಗಿ ಎಲ್ಲಾ ತಂಡಗಳು ಸಜ್ಜಾಗಿದ್ದು, ಕೆಲವೊಂದು ತಂಡಗಳು ಇನ್ನೂ ತಮ್ಮ ನಾಯಕನನ್ನು ಘೋಷಿಸಿಲ್ಲ. ಅದರಲ್ಲಿ ಆರ್‌ಸಿಬಿ ಕೂಡ ಸೇರಿದೆ.
ಐಪಿಎಲ್ 2025 ರಲ್ಲಿ ವಿರಾಟ್ ಕೊಹ್ಲಿ ಮತ್ತೊಮ್ಮೆ ನಾಯಕತ್ವವನ್ನು ವಹಿಸಿಕೊಳ್ಳುತ್ತಾರೆ ಎಂದು ಕೆಲವು ಮಾಧ್ಯಮ ವರದಿಗಳಲ್ಲಿ ಹೇಳಲಾಗಿದೆ. ಅದಾದ, ನಂತರ ರಜತ್ ಪಾಟಿದಾರ್ ಆರ್‌ಸಿಬಿಯ ಕಮಾಂಡ್ ಪಡೆಯುತ್ತಾರೆ ಎಂಬ ವರದಿ ಬಂದಿತು, ಆದರೆ ಈಗ ನಾಯಕನ ಬಗ್ಗೆ ಸಂಪೂರ್ಣವಾಗಿ ಹೊಸ ಅಪ್‌ಡೇಟ್ ಹೊರಬಂದಿದೆ.
ವಿರಾಟ್ ಕೊಹ್ಲಿ ಮತ್ತೊಮ್ಮೆ ತಂಡದ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದ್ದಾರೆ ಎಂದು ಹಲವು ಮಾಧ್ಯಮಗಳಲ್ಲಿ ವರದಿಯಾಗಿದೆ. ಆದರೆ ಫ್ರಾಂಚೈಸ್ ಅಥವಾ ವಿರಾಟ್ ಕೊಹ್ಲಿ ಈ ಬಗ್ಗೆ ಏನನ್ನೂ ಹೇಳಿಲ್ಲ.
ನಂತರ ಕೆಲವು ದಿನಗಳ ನಂತರ ಹೊಸ ವರದಿಯೊಂದು ಹೊರಬಿದ್ದಿದ್ದು, ಈ ಬಾರಿ ಐಪಿಎಲ್ 2025 ರಲ್ಲಿ ಯುವ ಬ್ಯಾಟ್ಸ್‌ಮನ್ ರಜತ್ ಪಾಟಿದಾರ್ ಆರ್‌ಸಿಬಿ ನಾಯಕರಾಗಲಿದ್ದಾರೆ ಎಂದು ಹೇಳಲಾಗಿದೆ. ರಜತ್ ಪಾಟಿದಾರ್ ಅವರು ಸೈಯದ್ ಮುಷ್ತಾಕ್ ಅಲಿ ಟಿ20 ಟ್ರೋಫಿಯಲ್ಲಿ ಮಧ್ಯಪ್ರದೇಶದ ನಾಯಕರಾಗಿದ್ದರು.
ಇದೀಗ ಆರ್‌ಸಿಬಿ ನಾಯಕನ ಬಗ್ಗೆ ಹೊಸ ಅಪ್‌ಡೇಟ್ ಹೊರಬಿದ್ದಿದೆ. ಇತ್ತೀಚಿನ ವರದಿಯಲ್ಲಿ ಆಲ್‌ರೌಂಡರ್ ಕೃನಾಲ್ ಪಾಂಡ್ಯ ಆರ್‌ಸಿಬಿಯ ನೂತನ ನಾಯಕರಾಗಲಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ಈ ಬಾರಿಯೂ ಫ್ರಾಂಚೈಸಿ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಈ ವರದಿ ನೋಡಿದ ಮೇಲೆ ಕೃಣಾಲ್ ಪಾಂಡ್ಯ ಕೂಡ ನಾಯಕನಾಗುವ ರೇಸ್ ನಲ್ಲಿದ್ದಾರೆ ಎಂಬುದು ಸ್ಪಷ್ಟವಾಗಿದೆ.