Cricketer Retirement: ಕೊನೆಯಾಯ್ತು ಸುದೀರ್ಘ ಪಯಣ… ಕ್ರಿಕೆಟ್ ಜಗತ್ತಿಗೆ ದಿಢೀರ್ ನಿವೃತ್ತಿ ಘೋಷಿಸಿದ ಕೊಹ್ಲಿ!
2008ರಲ್ಲಿ ಆಡಿದ 19 ವರ್ಷದೊಳಗಿನವರ ವಿಶ್ವಕಪ್ ತಂಡದಲ್ಲಿ ವಿರಾಟ್ ಕೊಹ್ಲಿ ಸಹ ಆಟಗಾರನಾಗಿದ್ದ, 35ನೇ ವಯಸ್ಸಿನಲ್ಲಿ ಕ್ರಿಕೆಟ್’ಗೆ ವಿದಾಯ ಹೇಳಿದ ತರುವರ್ ಕೊಹ್ಲಿ ಬಗ್ಗೆ ಈ ವರದಿಯಲ್ಲಿ ಮಾತನಾಡಲಿದ್ದೇವೆ.
ತರುವರ್ ಕೊಹ್ಲಿ ಆಲ್ ರೌಂಡರ್ ಆಗಿದ್ದು, ಬಲಗೈ ಬ್ಯಾಟ್ಸ್‌ಮನ್ ಜೊತೆಗೆ ವೇಗದ ಬೌಲಿಂಗ್ ಕೂಡ ಮಾಡಿದ್ದರು. ಪಂಜಾಬ್‌ನ ಜಲಂಧರ್’ನಲ್ಲಿ ಜನಿಸಿದ ತರುವರ್ ಕೊಹ್ಲಿ ದೇಶೀಯ ಕ್ರಿಕೆಟ್’ನಲ್ಲಿ 184 ಪಂದ್ಯಗಳ ವೃತ್ತಿಜೀವನವನ್ನು ಹೊಂದಿದ್ದರು,
ಇದರಲ್ಲಿ 55 ಪ್ರಥಮ ದರ್ಜೆ ಪಂದ್ಯಗಳು, 72 ಲಿಸ್ಟ್ ಎ ಮತ್ತು 57 ಟಿ20 ಪಂದ್ಯಗಳು ಸೇರಿವೆ. ಎಲ್ಲಾ ಮೂರು ಸ್ವರೂಪಗಳನ್ನು ಒಳಗೊಂಡಂತೆ, ತರುವರ್ ಕೊಹ್ಲಿ ದೇಶೀಯ ಕ್ರಿಕೆಟ್’ನಲ್ಲಿ 7543 ರನ್ ಗಳಿಸಿದ್ದಾರೆ. ಜೊತೆಗೆ ಬೌಲಿಂಗ್’ನಲ್ಲಿ 133 ವಿಕೆಟ್‌ಗಳನ್ನು ಕಬಳಿಸಿದ್ದಾರೆ.
ಮಿಜೋರಾಂನ ಮಾಜಿ ನಾಯಕ ತರುವಾರ್ ಕೊಹ್ಲಿ ಪ್ರಥಮ ದರ್ಜೆ ಕ್ರಿಕೆಟ್’ನಲ್ಲಿ ಅಜೇಯ 307 ರನ್ ಗಳಿಸಿದ್ದು ಗರಿಷ್ಠ ಸ್ಕೋರ್ ಆಗಿದೆ. ಪ್ರಥಮ ದರ್ಜೆ ಕ್ರಿಕೆಟ್’ನಲ್ಲಿ, 14 ಶತಕಗಳು ಮತ್ತು 18 ಅರ್ಧ ಶತಕಗಳೊಂದಿಗೆ 53.80 ಸರಾಸರಿಯಲ್ಲಿ 4573 ರನ್‌ಗಳನ್ನು ಹೊಂದಿದ್ದಾರೆ.
2008ರಲ್ಲಿ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಅಂಡರ್-19 ವಿಶ್ವಕಪ್ ಗೆದ್ದ ತಂಡದಲ್ಲಿ ತರುವರ್ ಕೊಹ್ಲಿ ಕೂಡ ಒಬ್ಬರಾಗಿದ್ದರು. ಆ ಪಂದ್ಯಾವಳಿಯ 6 ಪಂದ್ಯಗಳಲ್ಲಿ 3 ಅರ್ಧ ಶತಕಗಳೊಂದಿಗೆ 218 ರನ್ ಗಳಿಸಿದರು. ಜೊತೆಗೆ ಪಂದ್ಯಾವಳಿಯ ಮೂರನೇ ಅಗ್ರ ಸ್ಕೋರರ್ ಆಗಿದ್ದರು. 2008ರಲ್ಲಿ ಮಾತ್ರ ತರುವರ್ ದೇಶೀಯ ಕ್ರಿಕೆಟ್ ಪ್ರವೇಶಿಸಿದರು.
ಪಂಜಾಬ್ ಪರ ತಮ್ಮ ಮೊದಲ ಪಂದ್ಯವನ್ನು ಸೌರಾಷ್ಟ್ರ ವಿರುದ್ಧ ರಾಜ್‌ಕೋಟ್’ನಲ್ಲಿ ಆಡಿದ್ದರು. ಕಳೆದ ವರ್ಷ ಜನವರಿಯಲ್ಲಿ ಅರುಣಾಚಲ ಪ್ರದೇಶದ ವಿರುದ್ಧ ಮಿಜೋರಾಂ ಪರ ಕೊನೆಯ ಪ್ರಥಮ ದರ್ಜೆ ಪಂದ್ಯವನ್ನು ಆಡಲಾಗಿತ್ತು. 2009 ರಲ್ಲಿ ತಮ್ಮ ಮೊದಲ ಪಂದ್ಯವನ್ನು ಲಿಸ್ಟ್ ಎ ನಲ್ಲಿ ಆಡಿದ ತರುವರ್, ಈ ಮಾದರಿಯಲ್ಲಿ ತಮ್ಮ ಕೊನೆಯ ಪಂದ್ಯವನ್ನು 2022 ರಲ್ಲಿ ಆಡಿದ್ದಾರೆ.
ಕಳೆದ ಮೂರು ದಿನಗಳಲ್ಲಿ ವೃತ್ತಿಪರ ಕ್ರಿಕೆಟ್’ನಿಂದ ನಿವೃತ್ತಿಯಾದ ಎರಡನೇ ಆಟಗಾರ ತರುವರ್ ಕೊಹ್ಲಿ. ಇದಕ್ಕೂ ಮುನ್ನ ಫೈಜ್ ಫಜಲ್ ನಿವೃತ್ತಿ ಘೋಷಿಸಿದ್ದರು. ತರುವರ್ ಅವರ ತಂದೆ ಸುಶೀಲ್ ಕೊಹ್ಲಿ ಕೂಡ ಒಬ್ಬ ಆಟಗಾರ. ಅವರು ವೃತ್ತಿಪರ ಈಜುಗಾರರಾಗಿದ್ದರು.