Isht Dev: ಹನ್ನೆರಡು ರಾಶಿಗಳ ಮೇಲಿರುತ್ತೆ ವಿವಿಧ ದೇವ-ದೇವತೆಗಳ ಅನುಗ್ರಹ, ನಿಮ್ಮ ಮೇಲೆ ಯಾರ ಅನುಗ್ರಹ ಇಲ್ಲಿ ತಿಳಿದುಕೊಳ್ಳಿ!
ಮಕರ-ಕುಂಭ-ಮೀನ: ಮಕರ ರಾಶಿಗೆ ಶನಿ ಅಧಿಪತಿ ಹಾಗೂ ಈ ರಾಶಿಯ ಇಷ್ಟದೇವ ಶ್ರೀ ಆಂಜನೇಯನಾಗಿದ್ದಾನೆ. ಹೀಗಾಗಿ ನೀವು ಆಂಜನೆಯನನ್ನು ಪೂಜಿಸಿದರೆ ಇಷ್ಟಫಲ ಪ್ರಾಪ್ತಿಯಾಗುತ್ತದೆ. ಇನ್ನೊಂದೆಡೆ ನಾವು ಇಷ್ಟ ದೇವತೆಗಳ ಕುರಿತು ಹೇಳುವುದಾದರೆ, ಕಾಳಿ ಮಾತೆ ಮತ್ತು ಸಿದ್ಧಿದಾತ್ರಿದೇವಿ ನಿಮ್ಮ ಇಷ್ಟ ದೇವತೆಗಳು. ಶನಿ ದೇವನು ಕುಂಭ ರಾಶಿಗೂ ಕೂಡ ಅಧಿಪತಿ. ಈ ರಾಶಿಗೆ ಹನುಮಂತ ಹಾಗೂ ಮಹಾದೇವ ಇಷ್ಟದೇವರಾಗಿದ್ದಾರೆ ಮತ್ತು ನಿಮಗೂ ಕೂಡ ಕಾಳಿಮಾತೆ ಹಾಗೂ ಸಿದ್ಧಿದಾತ್ರಿಗಳು ಇಷ್ಟದೇವತೆಗಲಾಗಿದ್ದಾರೆ. ಮೀನ ರಾಶಿಗೆ ದೇವಗುರು ಬೃಹಸ್ಪತಿ ಅಧಿಪತಿ. ಶ್ರೀ ಹರಿ ವಿಷ್ಣು ಇಷ್ಟದೇವ ಹಾಗೂ ತಾಯಿ ಲಕ್ಷ್ಮಿ, ಕಮಲಾ ಮತ್ತು ಸಿದ್ಧದಾತ್ರಿ ಇಷ್ಟದೇವತೆಗಳು.
ತುಲಾ-ವೃಶ್ಚಿಕ-ಧನು: ತುಲಾ ಗ್ರಹದ ಅಧಿಪತಿ ಶುಕ್ರ. ಶ್ರೀ ಹರಿ ವಿಷ್ಣು ಇಷ್ಟದೇವ ಹಾಗೂ ತಾಯಿ ಲಕ್ಷ್ಮಿ, ಬ್ರಹ್ಮಚಾರಿಣಿ ಮತ್ತು ಷೋಡಶಿ-ಶ್ರೀ ವಿದ್ಯಾ ಇಷ್ಟದೇವತೆಗಳಾಗಿದ್ದಾರೆ. ವೃಶ್ಚಿಕ ರಾಶಿಯ ಅಧಿಪತಿ ಮಂಗಳ, ಶ್ರೀರಾಮ ಮತ್ತು ಆಂಜನೇಯ ಇಷ್ಟದೇವರಾಗಿದ್ದಾರೆ. ಆದರೆ, ಭಗವತಿ ತಾರಾ ಮತ್ತು ಶೈಲಪುತ್ರಿ ಈ ರಾಶಿಗೆ ಇಷ್ಟದೇವತೆಗಳಾಗಿದ್ದಾರೆ. ಧನು ರಾಶಿಯ ಜನರಿಗೂ ಕೂಡ ದೇವಗುರು ಬೃಹಸ್ಪತಿಯೇ ಅಧಿಪತಿ, ಶ್ರೀ ಹರಿ ವಿಷ್ಣು ಇಷ್ಟದೇವನಾದರೆ. ತಾಯಿ ಲಕ್ಷ್ಮಿ, ಕಮಲಾ ಮತ್ತು ತಾಯಿ ಸಿದ್ಧಿದಾತ್ರಿ ಈ ರಾಶಿಯ ಇಷ್ಟದೇವತೆಗಳು.
ಕರ್ಕ-ಸಿಂಹ-ಕನ್ಯಾ: ಕರ್ಕ ರಾಶಿಗೆ ಚಂದ್ರ ಅಧಿಪತಿ, ಶಿವ-ಶ್ರೀವಿಷ್ಣು ಇಷ್ಟದೇವರಾದರೆ, ಕಮಲ ಮತ್ತು ತಾಯಿ ಸಿದ್ಧಿದಾತ್ರಿ ಈ ರಾಶಿಯ ಜನರ ಇಷ್ಟದೇವತೆಗಳು. ಸಿಂಹ ರಾಶಿಯ ಅಧಿಪತಿ ಗ್ರಹಗಳ ರಾಜ ಸೂರ್ಯ ಮತ್ತು ಶ್ರೀ ಹರಿ ಮತ್ತು ಹನುಮ ಈ ರಾಶಿಗೆ ಷ್ಟ ದೇವರುಗಳು. ತಾಯಿ ಗಾಯತ್ರಿ, ಪೀತಾಂಬರಿ ಮತ್ತು ತಾಯಿ ಕಾಳರಾತ್ರಿ ಈ ರಾಶಿಗೆ ಇಷ್ಟದೇವತೆಗಳು. ಇದೇ ರೀತಿ ಕನ್ಯಾ ರಾಶಿಗೆ ಬುಧ ಅಧಿಪತಿಯಾದರೆ ಮತ್ತು ಗಣೇಶ ಈ ರಾಶಿಗೆ ಇಷ್ಟದೇವ ಮತ್ತು ದೇವಿ ದುರ್ಗೆ, ಭುವನೇಶ್ವರಿ ಮತ್ತು ಚಂದ್ರಘಂಟಾ ಈ ರಾಶಿಯ ಇಷ್ಟದೇವತೆಗಳು.
ಮೇಷ-ವೃಷಭ-ಮಿಥುನ: ಮೇಷ ರಾಶಿಗೆ ಮಂಗಳ ಅಧಿಪತಿ. ಶ್ರೀರಾಮ-ಹನುಮ ಈ ರಾಶಿಗೆ ಇಷ್ಟದೇವರಾದರೆ, ಭಗವತಿ ತಾರಾ, ನೀಲ್ ಸರಸ್ವತಿ ಮತ್ತು ಶೈಲಪುತ್ರಿದೇವಿ ಈ ರಾಶಿಗೆ ಇಷ್ಟದೇವತೆಗಳು. ಇನ್ನೊಂದೆಡೆ ವೃಷಭ ರಾಶಿಗೆ ಶುಕ್ರ ಅಧಿಪತಿ ಮತ್ತು ಶ್ರೀವಿಷ್ಣು ಇಷ್ಟ ದೇವ. ತಾಯಿ ಲಕ್ಷ್ಮಿ ಮತ್ತು ಷೋಡಶಿ-ಶ್ರೀ ವಿದ್ಯಾ ಈ ರಾಶಿಯ ಇಷ್ಟದೇವತೆಗಳು. ಮಿಥುನ ರಾಶಿಗೆ ಬುಧ ರಾಷ್ಯಾಧಿಪನಾಗಿದಾನೆ, ಆದರೆ ಗಣೇಶ ಮತ್ತು ವಿಷ್ಣು ಈ ರಾಶಿಗೆ ಇಷ್ಟದೇವರು. ಮತ್ತೊಂದೆಡೆ, ದೇವಿ ದುರ್ಗೆ, ಭುವನೇಶ್ವರಿ ಮತ್ತು ಚಂದ್ರಘಂಟಾ ಈ ರಾಶಿಯ ಇಷ್ಟ ದೇವತೆಗಳಾಗಿದ್ದಾರೆ (ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)