ಪುಷ್ಪ 2 ʼಅಲ್ಲು ಅರ್ಜುನ್ ಮಗಳುʼ ಎಷ್ಟು ಕ್ಯೂಟ್ & ಹಾಟ್ ಆಗಿದಾಳೆ ಅಲ್ವಾ..! ಫೋಟೋಸ್ ವೈರಲ್
ಭಾರತದಲ್ಲಿ ಪಷ್ಪ ಸಿನಿಮಾದ ಜ್ವರ ಜೋರಾಗಿದೆ. ಬಹುತೇಕ ಥಿಯೇಟರ್‌ಗಳು ಫುಲ್ ಆಗಿವೆ. ತೆಲುಗು ರಾಜ್ಯಗಳಲ್ಲಿ ಮಾತ್ರವಲ್ಲದೆ ಇಡೀ ಭಾರತದಲ್ಲಿ ಈ ಸಿನಿಮಾ ಉತ್ತಮ ಪ್ರದರ್ಶನ ಕಾಣುತ್ತಿದೆ.
3 ವರ್ಷಗಳ ನಂತರ ತೆರೆ ಮೇಲೆ ಅಲ್ಲು ಅರ್ಜುನ್ ಅವರನ್ನು ನೋಡಿದ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ. ಪುಷ್ಪ 2 ಚಿತ್ರದಲ್ಲಿ ಅಲ್ಲು ಅರ್ಜುನ್ ನಟನೆ ನೆಕ್ಸ್ ಲೆವೆಲ್‌ನಲ್ಲಿದೆ ಎಂದೇ ಹೇಳಬಹುದು.
ರಶ್ಮಿಕಾ ಮಂದಣ್ಣ, ಫಹಾದ್ ಫಾಜಿಲ್ ಮುಂತಾದವರು ಪುಷ್ಪಾ 2 ಸಿನಿಮಾದಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಈ ಚಿತ್ರದಲ್ಲಿ ನಾಯಕಿಯರ ಹೊರತಾಗಿ, ಕಥೆಗೆ ಟ್ವಿಸ್ಟ್ ನೀಡುವ ಅಜಯ್ ಮಗಳಾಗಿ, ಪುಷ್ಪರಾಜ್ ಅವರನ್ನು ಚಿಕ್ಕಪ್ಪ ಎಂದು ಕರೆಯುವ ನಟಿ ಪ್ರೇಕ್ಷಕರಿಗೆ ನೆನಪುಳಿಯುತ್ತಾಳೆ..
ಆ ಪಾತ್ರದಲ್ಲಿ ನಟಿಸಿದ್ದು ಯಾರೋ ಅಲ್ಲ.. ಪಾವನಿ ಕರಣಂ. ಈ ಹುಡುಗಿ ಪುಷ್ಪಾ 1 ರಲ್ಲಿ ಸಂಕ್ಷಿಪ್ತವಾಗಿ ಕಾಣಿಸಿಕೊಂಡಳು. ಪುಷ್ಪಾ 2ರಲ್ಲಿ ಅವರ ಪಾತ್ರವೇ ಹೆಚ್ಚು. ಕ್ಲೈಮ್ಯಾಕ್ಸ್ ಫೈಟ್ ಕೂಡ ಅವಳದ್ದೇ.
ಪಾವನಿ ತನ್ನ ವೃತ್ತಿಜೀವನವನ್ನು ಮೊದಲು ಕಿರುಚಿತ್ರಗಳೊಂದಿಗೆ ಪ್ರಾರಂಭಿಸಿದಳು. ನಂತರ ಸಿನಿಮಾಗೆ ಎಂಟ್ರಿ ಕೊಟ್ಟರು. ಪರೇಶನ್ ಮತ್ತು ಪಾಯಲಂ ಪಿಲಗದಲ್ಲಿ ನಾಯಕಿಯಾಗಿ ನಟಿಸಿದ್ದಾರೆ.
ಪರೇಶಾನ್ ಸಿನಿಮಾದಲ್ಲಿ "ಸಮೋಸಾ ತಿಂತಿಯಾ ಶಿರೀಶಾ" ಎಂಬ ಡೈಲಾಗ್ ಮೂಲಕ ಪಾವನಿ ಫೇಮಸ್ ಆಗಿದ್ದಳು.
ಇತ್ತೀಚೆಗಷ್ಟೇ ಗಾಡ್ಸ್ ಆಫ್ ಧರ್ಮಪುರಿ ಎಂಬ ವೆಬ್ ಸೀರಿಸ್ ನಲ್ಲಿ ನಟಿಸಿದ್ದರು. ಇದೀಗ ಪುಷ್ಪ 2 ಚಿತ್ರದ ಈ ಹುಡುಗಿ ಎಲ್ಲರ ಗಮನಸೆಳೆಯುತ್ತಿದ್ದಾಳೆ.
ಪಾವನಿ ಕರಣಂ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದು, ಆಗಾಗ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾಳೆ..