ನಟ ಅಲ್ಲು ಅರ್ಜುನ್ ಪತ್ನಿ ಸ್ನೇಹಾ ರೆಡ್ಡಿ ಯಾರ ಮಗಳು ಗೊತ್ತಾ? ಕೋಟಿ ಕೋಟಿಗೆ ಒಡತಿ ಈ ʻಪವರ್ ಫುಲ್ʼ ವುಮನ್!
Allu Arjun Wife Sneha Reddy: ಅಲ್ಲು ಅರ್ಜುನ್ ಪತ್ನಿ ಸ್ನೇಹಾ ರೆಡ್ಡಿ ಯಾರು? ಇವರ ತಂದೆ ಯಾರು? ಆಸ್ತಿ ಎಷ್ಟು? ಜೊತೆಗೆ ಸ್ನೇಹಾ ರೆಡ್ಡಿ ಮತ್ತು ಅಲ್ಲು ಅರ್ಜುನ್ ಲವ್ ಸ್ಟೋರಿ ಬಗ್ಗೆ ಸಹ ಈ ಲೇಖನದಲ್ಲಿ ಹೇಳಲಿದ್ದೇವೆ.
ಅಲ್ಲು ಅರ್ಜುನ್ ಬಂಧನದ ಬಳಿಕ ಜನರು ಇಂಟರ್ನೆಟ್‌ನಲ್ಲಿ ಅವರ ಬಗ್ಗೆ ಸಾಕಷ್ಟು ವಿಚಾರಗಳನ್ನು ಹುಡುಕಲು ಪ್ರಾರಂಭಿಸಿದ್ದಾರೆ. ಅಲ್ಲು ಅರ್ಜುನ್ ಪತ್ನಿ ಸ್ನೇಹಾ ರೆಡ್ಡಿ ಬಗ್ಗೆಯೂ ಜನರು ತಿಳಿದುಕೊಳ್ಳಲು ಬಯಸುತ್ತಿದ್ದಾರೆ.
ಅಲ್ಲು ಅರ್ಜುನ್‌ಗೆ ಸಂಧ್ಯಾ ಥಿಯೇಟರ್ ಕಾಳ್ತುಳಿತ ಪ್ರಕರಣದಲ್ಲಿ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಅವರನ್ನು ಬಂಧಿಸಲು ಶುಕ್ರವಾರ ಪೊಲೀಸರು ಅಲ್ಲು ಅರ್ಜುನ್ ಮನೆಗೆ ತಲುಪಿದ್ದರು.
ಈ ವೇಳೆ ಅಲ್ಲು ಅರ್ಜುನ್ ಪತ್ನಿ ಸ್ನೇಹಾ ರೆಡ್ಡಿ ಕೂಡ ಅಲ್ಲಿದ್ದರು. ಪತಿಯನ್ನು ಹೀಗೆ ಬಂಧಿಸಿರುವುದನ್ನು ನೋಡಿ ಅಲ್ಲು ಅರ್ಜುನ್ ಕೂಡ ಕಣ್ಣೀರಿಟ್ಟಿದ್ದಾರೆ. ಅಲ್ಲು ಅರ್ಜುನ್ ಸಮಾಧಾನ ಪಡಿಸಿ ಅಲ್ಲಿಂದ ತೆರಳಿದ್ದಾರೆ.
ಅಲ್ಲು ಅರ್ಜುನ್ ಪತ್ನಿ ಕೋಟ್ಯಾಂತರ ರೂಪಾಯಿ ಆಸ್ತಿಯ ಒಡತಿಯಾಗಿದ್ದಾರೆ. ಸ್ನೇಹಾ ರೆಡ್ಡಿ ಒಬ್ಬ ಯಶಸ್ವಿ ಉದ್ಯಮಿ ಮಹಿಳೆ. ಶಿಕ್ಷಣ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಕಷ್ಟು ಹೆಸರು ಗಳಿಸಿದ್ದಾರೆ. ಸ್ನೇಹಾ ರೆಡ್ಡಿ ಕೋಟ್ಯಂತರ ರೂಪಾಯಿ ವ್ಯವಹಾರ ನೋಡಿಕೊಳ್ಳುತ್ತಿದ್ದಾರೆ.
ಸ್ನೇಹಾ ರೆಡ್ಡಿ ಮತ್ತು ಅಲ್ಲು ಅರ್ಜುನ್ ಇವರಿಬ್ಬರೂ ಮದುವೆ ಸಮಾರಂಭವೊಂದರಲ್ಲಿ ಭೇಟಿಯಾಗಿದ್ದರು. ಈ ವೇಳೆ ಅಲ್ಲು ಅರ್ಜುನ್ ಸ್ನೇಹಾಳನ್ನು ನೋಡಿದ ತಕ್ಷಣ ಪ್ರೀತಿಯಲ್ಲಿ ಬಿದ್ದರು. ಕ್ರಮೇಣ ಇಬ್ಬರ ನಡುವೆ ಸ್ನೇಹ ಬೆಳೆದು ಆತ್ಮೀಯತೆ ಬೆಳೆಯತೊಡಗಿತು.
ಅಲ್ಲು ಅರ್ಜುನ್ ಮತ್ತು ಸ್ನೇಹಾ 2010 ರಲ್ಲಿ ನಿಶ್ಚಿತಾರ್ಥ ಮಾಡಿಕೊಂಡರು. ಇದರ ನಂತರ 2011 ರಲ್ಲಿ ವಿವಾಹವಾದರು. ಅಲ್ಲು ಅರ್ಜುನ್ ಮತ್ತು ಸ್ನೇಹಾ ಅವರಿಗೆ ಇಬ್ಬರು ಮಕ್ಕಳಿದ್ದಾರೆ - ಒಬ್ಬ ಮಗ ಮತ್ತು ಮಗಳು.
ವ್ಯವಹಾರವನ್ನು ನಿರ್ವಹಿಸುವುದರೊಂದಿಗೆ ಸ್ನೇಹಾ ತನ್ನ ಕುಟುಂಬ ಮತ್ತು ಮಕ್ಕಳನ್ನು ಸಂಪೂರ್ಣವಾಗಿ ನೋಡಿಕೊಳ್ಳುತ್ತಾರೆ.
ಮಾಧ್ಯಮ ವರದಿಗಳ ಪ್ರಕಾರ, ಸ್ನೇಹಾ ರೆಡ್ಡಿ ಶ್ರೀಮಂತ ಕುಟುಂಬದಿಂದ ಬಂದವರು. ಅವರ ತಂದೆ ಕಂಚಾರ್ಲ ಚಂದ್ರಶೇಖರ್ ರೆಡ್ಡಿ.
ಕಂಚಾರ್ಲ ಚಂದ್ರಶೇಖರ್ ರೆಡ್ಡಿ ಹೈದರಾಬಾದ್‌ನ ಸೈಂಟ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ (SIT) ಅಧ್ಯಕ್ಷರಾಗಿದ್ದಾರೆ. ಅವರು ಕೂಡ ಕೆಲ ಸಮಯದ ಹಿಂದೆ ಕಾಂಗ್ರೆಸ್ ಪಕ್ಷ ಸೇರಿದ್ದಾರೆ. ಆಂಧ್ರಪ್ರದೇಶದ ಕಾಂಗ್ರೆಸ್ ನಾಯಕರಾಗಿದ್ದಾರೆ.
ಸ್ನೇಹಾ ತನ್ನ ತಂದೆಯ ವ್ಯವಹಾರವನ್ನು ನೋಡಿಕೊಳ್ಳುತ್ತಿದ್ದಾರೆ. ಸ್ನೇಹಾ ರೆಡ್ಡಿ 42 ಕೋಟಿ ರೂಪಾಯಿ ಆಸ್ತಿ ಹೊಂದಿದ್ದಾರೆ ಎಂದು ಹೇಳಲಾಗುತ್ತದೆ.