ಈ ಒಣಹಣ್ಣು ಸಾಕು… ಬೆಳಗ್ಗೆ ಎದ್ದಂತೇ ತಿಂದರೆ ಸೊಂಟದ ಸುತ್ತ ಸಂಗ್ರಹವಾದ ಕೊಬ್ಬು ಕೇವಲ 5 ದಿನದಲ್ಲಿ ಇಳಿಯುತ್ತೆ!
ಬಾದಾಮಿಯನ್ನು ಸೂಪರ್ ಫುಡ್ ಎಂದೇ ಕರೆಯಲಾಗುತ್ತದೆ. ಏಕೆಂದರೆ ಇದು ಕಡಿಮೆ ಕಾರ್ಬೋಹೈಡ್ರೇಟ್ ಮತ್ತು ಹೆಚ್ಚಿನ ಪ್ರೊಟೀನ್ ಅನ್ನು ಹೊಂದಿರುವುದರಿಂದ ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ
ಪೋಷಕಾಂಶಗಳಿಂದ ಸಮೃದ್ಧವಾಗಿರುವ ಬಾದಾಮಿಯು ದೀರ್ಘಕಾಲದವರೆಗೆ ಹೊಟ್ಟೆಯನ್ನು ತುಂಬಿರುವಂತೆ ನೋಡಿಕೊಳ್ಳುತ್ತದೆ. ಇದರಲ್ಲಿರುವ ಪ್ರೋಟೀನ್ಗಳು ಸ್ನಾಯುಗಳನ್ನು ಬಲಗೊಳಿಸಲು ಸಹಾಯ ಮಾಡುತ್ತದೆ. ಬಾದಾಮಿಯನ್ನು ನಿಯಮಿತವಾಗಿ ತಿನ್ನುವುದರಿಂದ, ದೇಹದಲ್ಲಿ ಕೊಬ್ಬು ಮತ್ತು ಕೆಟ್ಟ ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸಬಹುದು.
ತೂಕ ಇಳಿಸಿಕೊಳ್ಳಲು ಬಾದಾಮಿ ಬಳಕೆ ಮಾಡಿದರೆ, ನೀವು ಅದನ್ನು ಪುಡಿ ರೂಪದಲ್ಲಿ ಆಹಾರದಲ್ಲಿ ಸೇರಿಸಿಕೊಳ್ಳಬಹುದು. ಪ್ರತಿದಿನ ಬೆಳಿಗ್ಗೆ ಬಾದಾಮಿ ಪುಡಿಯನ್ನು ಹಾಲಿಗೆ ಸೇರಿಸಿ ಅಥವಾ ಗಂಜಿಗೆ ಬೆರೆಸಿ ಕುಡಿದರೆ ಉತ್ತಮ.
ಕರಿದ ಪದಾರ್ಥಗಳನ್ನು ತಿನ್ನುವ ಬದಲು, ಬಾದಾಮಿಯನ್ನು ಫ್ರೈ ಮಾಡಿಕೊಂಡು ತಿನ್ನಬಹುದು. ಹೀಗೆ ಮಾಡಿದರೆ ಹೆಚ್ಚುವರಿ ಕ್ಯಾಲೊರಿ ಸಂಗ್ರಹವಾಗುವುದಿಲ್ಲ. ಜೊತೆಗೆ ಕಡಿಮೆ ಕಾರ್ಬೋಹೈಡ್ರೇಟ್‌ಗಳು ಮತ್ತು ಹೆಚ್ಚಿನ ಪ್ರೊಟೀನ್’ನಿಂದಾಗಿ, ದೇಹದಲ್ಲಿ ಸಂಗ್ರಹವಾಗಿ, ದೀರ್ಘಕಾಲದವರೆಗೆ ಹೊಟ್ಟೆ ತುಂಬಿರುವ ಭಾವನೆಯನ್ನು ಮಾಡುತ್ತದೆ.
ತೂಕ ಕಡಿಮೆ ಮಾಡಿಕೊಳ್ಳಲು ಬಾದಾಮಿ ಹಾಲು ಕೂಡ ಕುಡಿಯಬಹುದು. ಬೆಳಗಿನ ಉಪಾಹಾರದ ಸಮಯದಲ್ಲಿ ಬಾದಾಮಿ ಹಾಲು ಕುಡಿಯುವುದು ಹೆಚ್ಚು ಪ್ರಯೋಜನ ಪಡೆಯಬಹುದು.
(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇವುಗಳನ್ನು ಅನುಸರಿಸುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. Zee News Kannada ಈ ಮಾಹಿತಿಯನ್ನು ಅನುಮೋದಿಸುವುದಿಲ್ಲ.)