ಬಿಳಿಕೂದಲನ್ನು ಬೇರಿನಿಂದಲೇ ಕಡುಕಪ್ಪಾಗಿಸಲು ಕಾಫಿಪುಡಿಗೆ ಇದನ್ನು ಬೆರೆಸಿ ಹಚ್ಚಿ: ಸೆಕೆಂಡುಗಳಲ್ಲಿ ಕೂದಲಾಗುವುದು ಕಡುಕಪ್ಪು! 60 ವರ್ಷವಾದ್ರೂ ಹಾಗೇ ಇರುತ್ತೆ
ಬೆಳಿಗ್ಗೆ ಒಂದು ಕಪ್ ಬಿಸಿ ಕಾಫಿ ಕುಡಿದರೆ ದಿನ ಫ್ರೆಶ್ ಆಗಿರುತ್ತದೆ ಎಂದು ಅನೇಕರಿಗೆ ಅನಿಸುತ್ತದೆ. ಕೆಲವರಿಗಂತೂ ಕಾಫಿ ಇಲ್ಲದೆ ದಿನವೇ ಪ್ರಾರಂಭವಾಗುವುದಿಲ್ಲವೇನೋ ಎಂಬಂತಿರುತ್ತಾರೆ. ಅಂದಹಾಗೆ ಕಾಫಿಯು ಮನಸ್ಥಿತಿಯನ್ನು ತಾಜಾವಾಗಿಡಲು ಮಾತ್ರವಲ್ಲದೆ ಕೂದಲು ಮತ್ತು ಚರ್ಮಕ್ಕೂ ತುಂಬಾ ಪ್ರಯೋಜನಕಾರಿ.
ಕಾಫಿ ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಕಾಫಿಯಲ್ಲಿರುವ ಆಂಟಿಆಕ್ಸಿಡೆಂಟ್‌ಗಳು ಫ್ರೀ ರ್ಯಾಡಿಕಲ್‌ಗಳಿಂದ ಉಂಟಾಗುವ ಹಾನಿಯಿಂದ ಕೂದಲನ್ನು ರಕ್ಷಿಸಲು ಸಹಾಯ ಮಾಡುತ್ತದೆ. ಇದರೊಂದಿಗೆ ಇದರಲ್ಲಿರುವ ಕೆಫೀನ್ ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಕೂದಲನ್ನು ಉದ್ದ, ಕಪ್ಪು ಮತ್ತು ದಪ್ಪವಾಗಿಸಲು ಕಾಫಿಯನ್ನು ಹಲವು ರೀತಿಯಲ್ಲಿ ಬಳಸಬಹುದು.
ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸಲು ಕಾಫಿ ಮತ್ತು ತೆಂಗಿನ ಎಣ್ಣೆಯನ್ನು ಬಳಸಬಹುದು. ತೆಂಗಿನಎಣ್ಣೆಗೆ ಒಂದು ಚಮಚ ಕಾಫಿ ಪುಡಿಯನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಈಗ ಇದನ್ನು ಸಂಪೂರ್ಣವಾಗಿ ಕೂದಲಿಗೆ ಹಚ್ಚಿ ಸ್ವಲ್ಪ ಸಮಯ ಮಸಾಜ್ ಮಾಡಿ. 30 ನಿಮಿಷಗಳ ಕಾಲ ಹಾಗೇಬಿಡಿ. ಇದರ ನಂತರ, ಕೂದಲನ್ನು ಸ್ವಚ್ಛಗೊಳಿಸಿ. ವಾರಕ್ಕೆ ಎರಡು ಬಾರಿ ಇದನ್ನು ಬಳಸಿದರೆ ಉತ್ತಮ.
ಕಾಫಿ ಮತ್ತು ಅಲೋವೆರಾ ಕೂಡ ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದಕ್ಕಾಗಿ ಒಂದು ಬೌಲ್‌ನಲ್ಲಿ ಎರಡು ಚಮಚ ಅಲೋವೆರಾ ಜೆಲ್ ಮತ್ತು ಒಂದು ಚಮಚ ಕಾಫಿ ಪುಡಿಯನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಈಗ ಈ ಪೇಸ್ಟ್ ಅನ್ನು ನೆತ್ತಿ ಮತ್ತು ಕೂದಲಿಗೆ ಹಚ್ಚಿ ಸ್ವಲ್ಪ ಸಮಯ ಮಸಾಜ್ ಮಾಡಿ. 30 ನಿಮಿಷಗಳ ಕಾಲ ಕೂದಲಿನ ಮೇಲೆ ಬಿಟ್ಟ ನಂತರ, ಸೌಮ್ಯವಾದ ಶಾಂಪೂ ಬಳಸಿ ಕೂದಲನ್ನು ಸ್ವಚ್ಛಗೊಳಿಸಿ. ಉತ್ತಮ ಫಲಿತಾಂಶಕ್ಕಾಗಿ, ವಾರಕ್ಕೊಮ್ಮೆ ಇದನ್ನು ಹಚ್ಚಿ.
ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸಲು ಈ ವಿಧಾನವನ್ನು ಸಹ ಅನುಸರಿಸಬಹುದು. ಕಾಫಿಯನ್ನು ನೀರಿಗೆ ಹಾಕಿ ಕುದಿಸಿ. ಈಗ ನಿಮ್ಮ ಕೂದಲನ್ನು ಶಾಂಪೂ ಬಳಸಿ ತೊಳೆಯಿರಿ. ಆ ಬಳಿಕ ಕಾಫಿಯನ್ನು ತಲೆಯ ಮೇಲೆ ಸುರಿದು ಚೆನ್ನಾಗಿ ಮಸಾಜ್ ಮಾಡಿ. ಸುಮಾರು 20 ನಿಮಿಷಗಳ ನಂತರ, ಕೂದಲನ್ನು ನೀರಿನಿಂದ ತೊಳೆದು ಸ್ವಚ್ಛಗೊಳಿಸಿ. ಉತ್ತಮ ಫಲಿತಾಂಶಕ್ಕಾಗಿ ನೀವು ವಾರಕ್ಕೆ 2-3 ಬಾರಿ ಬಳಸಬಹುದು.
ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಯಾವುದೇ ರೀತಿಯಲ್ಲಿ ಅರ್ಹ ವೈದ್ಯಕೀಯ ಅಭಿಪ್ರಾಯಕ್ಕೆ ಪರ್ಯಾಯವಾಗಿಲ್ಲ. ಹೆಚ್ಚಿನ ವಿವರಗಳಿಗಾಗಿ ಯಾವಾಗಲೂ ತಜ್ಞರು ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಗೆ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ