ಕಡು ಕಪ್ಪಾದ ರೇಷ್ಮೆಯಂತಹ ಉದ್ದ ಕೂದಲು ಪಡೆಯಲು ಮನೆಯ ಕುಂಡದಲ್ಲಿರುವ ಈ ಗಿಡಮೂಲಿಕೆಯೇ ಸಾಕು!

Mon, 30 Sep 2024-11:51 am,

ಕಳಪೆ ಜೀವನಶೈಲಿ, ಆಹಾರ ಪದ್ಧತಿ ಮತ್ತು ಮಾಲಿನ್ಯದಿಂದಾಗಿ ಕೂದಲು ಉದುರುವಿಕೆ, ಚಿಕ್ಕ ವಯಸ್ಸಿನಲ್ಲೇ ಕೂದಲು ಬೆಳ್ಳಗಾಗುವುದು, ಬೋಳು ತಲೆ ಸಮಸ್ಯೆಗಳು ಹೆಚ್ಚಾಗಿದೆ. 

ಕೂದಲುದುರುವಿಕೆ, ಬಿಳಿ ಕೂದಲು ಸೇರಿದಂತೆ ಕೂದಲಿನ ಸಮಸ್ಯೆಗಳಿಂದ ಪರಿಹಾರ ಪಡೆಯಲು ಕೂದಲಿನ ಆರೈಕೆ ಬಹಳ ಮುಖ್ಯ. 

ಮನೆಯ ಕುಂಡದಲ್ಲಿ ಸುಲಭವಾಗಿ ಬೆಳೆಯಬಹುದಾದ ಅಲೋವೆರಾ ಕೂದಲನ್ನು ನೈಸರ್ಗಿಕವಾಗಿ ಕಪ್ಪಾಗಿಸುವುದರ ಜೊತೆಗೆ ರೇಷ್ಮೆಯಂತಹ ಉದ್ದ ಕೂದಲ ಬೆಳವಣಿಗೆಗೆ ನೆರವಾಗುತ್ತದೆ. 

ಅಲೋವೆರಾ ಬಳಕೆಯಿಂದ ಕೂದಲನ್ನು ಬುಡದಿಂದಲೂ ಕಪ್ಪಾಗಿಸಿ ಬಲವಾದ ದಪ್ಪ ಉದ್ದ ರೇಷ್ಮೆಯಂತಹ ಕೂದಲನ್ನು ಹೊಂದಬಹುದು. ಆದರೆ, ಇದಕ್ಕಾಗಿ ಅಲೋವೆರಾ ಬಳಸುವ ಸರಿಯಾದ ವಿಧಾನ ತಿಳಿದಿರಬೇಕು. 

ತಾಜಾ ಅಲೋವೆರಾ ಜೆಲ್ ತೆಗೆದುಕೊಂಡು ಅದನ್ನು ಮಿಕ್ಸಿಯಲ್ಲಿ ರುಬ್ಬಿ. ಮೊದಲು ಸ್ವಚ್ಛವಾದ ಕೂದಲನ್ನು ಸ್ವಲ್ಪ ಒದ್ದೆ ಮಾಡಿ ಹೇರ್ ಬ್ರಶ್ ಸಹಾಯದಿಂದ ಕೂದಲಿನ ಬುಡಕ್ಕೆ ಅಲೋವೆರಾ ಜೆಲ್ ಅನ್ವಯಿಸಿ. 

ಸಂಪೂರ್ಣವಾಗಿ ಕೂದಲಿನ ಬುಡದಿಂದ ತುದಿಯವರೆಗೂ ಅಲೋವೆರಾ ಜೆಲ್ ಹಚ್ಚಿದ ಬಳಿಕ ಕನಿಷ್ಠ 10-15 ನಿಮಿಷಗಳ ಕಾಲ ಲಘುವಾಗಿ ಮಸಾಜ್ ಮಾಡಿ. ಒಂದು ಗಂಟೆ ನಂತರ ಹೇರ್ ವಾಶ್ ಮಾಡಿ. 

ಕೂದಲಿಗೆ ಅಲೋವೆರಾ ಜೆಲ್ ಹಾಕಿ ಮಸಾಜ್ ಮಾಡುವುದರಿಂದ ರಕ್ತಪರಿಚಲನೆ ಚೆನ್ನಾಗಿ ಆಗಿ ಕೂದಲು ಬುಡದಿಂದಲೂ ಬಲಗೊಳ್ಳುತ್ತದೆ. ಜೊತೆಗೆ ಬಿಳಿ ಕೂದಲು ಕಡು ಕಪ್ಪಾಗಿ ಉದ್ದವಾಗುವುದಷ್ಟೇ ಅಲ್ಲ ರೇಷ್ಮೆಯಂತೆ ಫಳಫಳ ಹೊಳೆಯುತ್ತದೆ. 

ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ.ಈ ಮಾಹಿತಿಯ ಹೊಣೆಯನ್ನು ಜೀ ಕನ್ನಡ ನ್ಯೂಸ್ ಹೇಳಿಕೊಳ್ಳುವುದಿಲ್ಲ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link