Aloe Vera Juice Benefits: ಹಲವು ಸಮಸ್ಯೆಗಳಿಗೆ ರಾಮಬಾಣ ಈ ಆಲೋವಿರಾ ಜ್ಯೂಸ್
ಅಲೋವೆರಾದಲ್ಲಿ ನೀರಿನ ಅಂಶ ಹೆಚ್ಚಿನ ಪ್ರಮಾಣದಲ್ಲಿ ಇರುತ್ತದೆ. ಇದು ಡಿಹೈಡ್ರೆಶನ್ ಸಮಸ್ಯೆಯನ್ನು ನಿವಾರಿಸಲು ಸಹಕಾರಿಯಾಗಿದೆ. ದೇಹದಲ್ಲಿ ಉತ್ತಮ ಪ್ರಮಾಣದ ನೀರು ಇದ್ದಾಗ, ದೇಹದಲ್ಲಿ ಇರುವ ಮಲಿನ ವಸ್ತುಗಳು ಮತ್ತು ವಿಷಕಾರಕ ವಸ್ತುಗಳನ್ನು ಹೊರಹಾಕಲು ಸಹಾಯ ಮಾಡುತ್ತದೆ. ಬೇಸಿಗೆಯಲ್ಲಿ ಅಲೋವೆರಾ ಜ್ಯೂಸ್ ಅನ್ನು ಕುಡಿಯುವುದು ಅತ್ಯಂತ ಸಹಕಾರಿಯಾಗಿದೆ.
ದೇಹವನ್ನು ಡಿಟಾಕ್ಸ್ ಮಾಡಬೇಕಾದರೆ ಲಿವರ್ ಅನ್ನು ಶುಚಿಯಾಗಿಡುವುದು ಬಹಳ ಮುಖ್ಯ. ಅಲೋವೆರಾ ಜ್ಯೂಸ್ ಯಕೃತ್ತನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ. ಫೈಟೊನ್ಯೂಟ್ರಿಯೆಂಟ್‌ಗಳಲ್ಲಿ ಸಮೃದ್ಧವಾಗಿರುವ ಅಲೋವೆರಾ ರಸ ಯಕೃತ್ತಿನ ಆರೋಗ್ಯಕ್ಕೆ ಪ್ರಯೋಜನಕಾರಿ.
ಅಲೋವೆರಾ ಜ್ಯೂಸ್ ಕುಡಿಯುವುದರಿಂದ ಕರುಳಿನಲ್ಲಿ ನೀರಿನ ಅಂಶ ಹೆಚ್ಚಾಗುತ್ತದೆ. ಇದು ಹೊಟ್ಟೆಶುಚಿಗೊಳಿಸಲು ಸಹಾಯ ಮಾಡುತ್ತದೆ. ಮಲಬದ್ಧತೆಯ ಸಮಸ್ಯೆಯನ್ನು ನಿವಾರಿಸುತ್ತದೆ. ಒಬ್ಬ ವ್ಯಕ್ತಿಯು ನಿಯಮಿತವಾಗಿ ಮಲಬದ್ಧತೆ ಸಮಸ್ಯೆಯನ್ನು ಎದುರಿಸುತ್ತಿದ್ದರೆ, ಅವರು ಪ್ರತಿದಿನ ಅಲೋವೆರಾ ರಸವನ್ನು ಸೇರಿಸಬೇಕು.
ಆಸಿಡಿಟಿ ಸಮಸ್ಯೆ ಇದ್ದವರಿಗೆ ಎದೆಯುರಿ ಹೊಟ್ಟೆ ಉರಿ ಯಂಥಹ ಸಮಸ್ಯೆಗಳು ಎದುರಾಗುತ್ತದೆ. ಅಲೋವೆರಾ ಜ್ಯೂಸ್ ಇಂಥಹ ಸಮಸ್ಯೆಗಳನ್ನು ಹೋಗಲಾಡಿಸಲು ಸಹಕಾರಿಯಾಗಿದೆ. ಇದರಲ್ಲಿರುವ ಸಂಯುಕ್ತಗಳು ಹೊಟ್ಟೆಯಲ್ಲಿನ ಆಮ್ಲ ಸ್ರವಿಸುವಿಕೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
ಅಲೋವೆರಾ ಜ್ಯೂಸ್ ಚರ್ಮಕ್ಕೆ ಸಂಬಂಧಿಸಿದ ಕಾಯಿಲೆಗಳಾದ ಸೋರಿಯಾಸಿಸ್ ಮತ್ತು ಡರ್ಮಟೈಟಿಸ್ ಅನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಅಲೋವೆರಾ ಆಂಟಿ ಒಕ್ಸಿಡೆಂಟ್ ಮತ್ತು ವಿಟಮಿನ್ ಗಳನ್ನ ಒಳಗೊಂಡಿದೆ. ಇದು ಸೂರ್ಯನ ಹಾನಿಕಾರಕ ಯುವಿ ಕಿರಣಗಳಿಂದ ಚರ್ಮವನ್ನು ರಕ್ಷಿಸುತ್ತದೆ.