ಸರ್ಕಾರಿ ನೌಕರರಿಗೆ ಜಾಕ್ ಪಾಟ್ !ತುಟ್ಟಿಭತ್ಯೆ ಹೆಚ್ಚಳದ ಜೊತೆಗೆ ದೀಪಾವಳಿ ಬೋನಸ್ ! ಈ ಬಾರಿ ಸರ್ಕಾರದ ಭರ್ಜರಿ ಕೊಡುಗೆ
ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಿ ನೌಕರರು ಈ ವರ್ಷದ ಭತ್ಯೆಯಲ್ಲಿ ಎರಡನೇ ಹೆಚ್ಚಳದ ಘೋಷಣೆಗಾಗಿ ಕಾತರದಿಂದ ಕಾಯುತ್ತಿದ್ದಾರೆ.ಈ ವಾರ ಅಥವಾ ಅಕ್ಟೋಬರ್ ಮೊದಲ ವಾರದಲ್ಲಿ ಮುಖ್ಯ ಘೋಷಣೆ ಹೊರಬೀಳಲಿದೆ ಎಂಬ ವರದಿಗಳಿವೆ.
ಇದರ ಮಧ್ಯೆ, ತಮಿಳುನಾಡು ಸರ್ಕಾರ ನೌಕರರಿಗೆ ದೀಪಾವಳಿ ಬೋನಸ್ ಕುರಿತು ಮಹತ್ವದ ಘೋಷಣೆ ಮಾಡಲಿದೆ ಎನ್ನಲಾಗಿದೆ. ಅದಕ್ಕಾಗಿ ಭರದ ಸಿದ್ಧತೆಗಳು ನಡೆಯುತ್ತಿವೆ. ಮೂಲಗಳ ಪ್ರಕಾರ ಸರ್ಕಾರಿ ನೌಕರರಿಗೆ ಡಬಲ್ ಬೋನಸ್ ನೀಡಲು ತಮಿಳುನಾಡು ಸರ್ಕಾರ ಸಿದ್ಧತೆ ನಡೆಸಿದೆ.
ತಮಿಳುನಾಡು ಸರ್ಕಾರದ ಅಧಿಕಾರಿಗಳು ದೀಪಾವಳಿಗೆ ಮುನ್ನ ತುಟ್ಟಿಭತ್ಯೆ ಮತ್ತು ದೀಪಾವಳಿ ಬೋನಸ್ ಎರಡರ ಕುರಿತು ಮಹತ್ವದ ಮಾಹಿತಿಯನ್ನು ಪ್ರಕಟಿಸಲಿದ್ದಾರೆ. ಇದಕ್ಕಾಗಿ ಅಗತ್ಯವಿರುವ ಎಲ್ಲಾ ಕೆಲಸಗಳು ನಡೆಯುತ್ತಿವೆ.
ತುಟ್ಟಿಭತ್ಯೆ ಹೆಚ್ಚಳ ಮತ್ತು ದೀಪಾವಳಿ ಬೋನಸ್ ಕುರಿತು ಅಧಿಕಾರಿಗಳು ಎಲ್ಲಾ ರೀತಿಯ ದಾಖಲೆಗಳು ಮತ್ತು ಮಾಹಿತಿಯನ್ನು ಸಿದ್ಧಪಡಿಸುತ್ತಿದ್ದಾರೆ.ಮುಖ್ಯಮಂತ್ರಿ ಸ್ಟಾಲಿನ್ ಅನುಮೋದನೆ ನೀಡಿದ ನಂತರ ಈ ಬಗ್ಗೆ ಅಧಿಕೃತ ಅಧಿಸೂಚನೆ ಹೊರ ಬೀಳಲಿದೆ.
ಕೇಂದ್ರ ಸರ್ಕಾರಿ ನೌಕರರಿಗೆ ಸಂಬಂಧಿಸಿದಂತೆ ಭತ್ಯೆ ಹೆಚ್ಚಳ ಶೇ.50ಕ್ಕೆ ತಲುಪಿದೆ. ಈ ವರ್ಷ ಎರಡನೇ ತುಟ್ಟಿಭತ್ಯೆ ಹೆಚ್ಚಳ ಹೊರ ಬಿದ್ದರೆ ಇದು 53% ಅಥವಾ 54% ಕ್ಕೆ ಏರುತ್ತದೆ.
ಕೇಂದ್ರ ಸರ್ಕಾರಿ ನೌಕರರಿಗೆ ಡಿಎಯಲ್ಲಿ 3% ಅಥವಾ 4% ಹೆಚ್ಚಳವಾದರೂ ಸರ್ಕಾರಿ ನೌಕರರಿಗೆ ಇದು ದೊಡ್ಡ ವರದಾನವಾಗಲಿದೆ.