ಒಂದು ಮಗು ಆದ್ರೂ ತಗ್ಗಿಲ್ಲ ಅಮಲಾ ಅಂದ..! ಬಾಲಿ ಬೀಚ್‌ನಲ್ಲಿ ಬೋಲ್ಡ್ ಬಾಲೆ.. ಫೊಟೋಸ್ ನೋಡಿ..
ಸೌತ್‌ನಲ್ಲಿ ಸ್ಟಾರ್ ಹೀರೋಗಳ ಜೊತೆ ನಟಿಸಿರುವ ಅಮಲಾ ಪೌಲ್ ಜಗತ್ ದೇಸಾಯಿ ಜತೆ ಮದುವೆಯಾಗಿದ್ದಾರೆ.. ಮದುವೆಯಾಗಿ ಮಗುವಾದ ಮೇಲೂ ಸುಂದರಿಯ ಜೋಶ್ ಸ್ವಲ್ಪವೂ ಕಡಿಮೆಯಾಗುತ್ತಿಲ್ಲ.
ಮದುವೆಗೂ ಮುನ್ನ ಪತಿಗೆ ಚುಂಬಿಸುತ್ತಿರುವ ಫೋಟೋಗಳನ್ನು ಅಮಲಾ ಹಂಚಿಕೊಂಡಿದ್ದರು.. ಇದೀಗ ಮತ್ತೇ ಬೋಲ್ಡ್ ಲುಕ್‌ನಲ್ಲಿ ಕಾಣಿಸಿಕೊಂಡಿರುವ ನಟಿಯ ಫೋಟೋಸ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
ಅಮಾಲಾ ಫೋಟೋಗಳನ್ನು ನೋಡಿ ಪಡ್ಡೆ ಹುಡುಗರು ಶಾಕ್ ಆಗಿದ್ದಾರೆ.. ಅಲ್ಲದೆ, ಮದುವೆಯಾಗಿ ಮಗುವಾದರೂ ಸುಂದರಿಯ ಸೌಂದರ್ಯ ಕೊಂಚವೂ ತಗ್ಗಿಲ್ಲ ಅಂತ ಕಾಮೆಂಟ್ ಮಾಡುತ್ತಿದ್ದಾರೆ..
ಸಧ್ಯ ಪತಿಯೊಂದಿಗೆ ಬಾಲಿಗೆ ತೆರಳಿರುವ ಅಮಲಾ, ಪ್ರಕೃತಿಯ ಮಡಿಲಲ್ಲಿ ಎಂಜಾಯ್ ಮಾಡುತ್ತಿದ್ದಾರೆ.. ಪತಿ ಹಾಗೂ ಮಗುವಿನೊಂದಿಗಿರುವ ಫೋಟೋಗಳನ್ನು ಇನ್‌ಸ್ಟಾದಲ್ಲಿ ಹಂಚಿಕೊಂಡಿದ್ದಾರೆ.
ಕೆಲ ಗಂಟೆಗಳ ಹಿಂದೆ ಶೇರ್ ಆಗಿರುವ ಈ ಫೋಟೋಗಳಿಗೆ ಭಾರಿ ಲೈಕ್, ಕಮೆಂಟ್‌ಗಳ ಜತೆಗೆ ಕೆಲವ ನೆಟ್ಟಿಗರು ವ್ಯಂಗ್ಯವಾಗಿ ಕಾಮೆಂಟ್ ಗಳನ್ನು ಮಾಡುತ್ತಿದ್ದಾರೆ.
ಅಮಲಾ ಹಂಚಿಕೊಂಡಿರುವ ಫೊಟೋಸ್‌ಗೆ 4 ಗಂಟೆಯೊಳಗೆ 1 ಲಕ್ಷ 85 ಸಾವಿರಕ್ಕೂ ಹೆಚ್ಚು ಲೈಕ್‌ಗಳು ಬಂದಿವೆ. ಕಾಮೆಂಟ್‌ಗಳ ವಿಷಯಕ್ಕೆ ಬಂದರೆ, ಬ್ಯೂಟಿ, ಲವ್ಲಿ, ಸೋ ಸ್ವೀಟ್, ಹಾಟಿ ಎಂಬ ಹೊಗಳಿಕೆಯೇ ಹೆಚ್ಚು..
ಪತಿ ಜಗತ್ ದೇಸಾಯಿ ಜೊತೆ ಮದುವೆಯಾಗಿ ಒಂದು ವರ್ಷವನ್ನು ಪೂರ್ಣಗೊಳಿಸಿದ್ದಾರೆ. ಮಗುವಿಗೆ 4 ತಿಂಗಳಾಗಿದೆ.. ಅದಕ್ಕಾಗಿ ಸೆಲೆಬ್ರೆಟ್ ಮಾಡಲು ಈ ಜೋಡಿ ಬಾಲಿಗೆ ತೆರಳಿದೆ..
ಇನ್ನು ಅಮಲಾ ಜಗತ್ ದೇಸಾಯಿ ಜೊತೆ ಮದುವೆಗೂ ಮುನ್ನ ನಿರ್ದೇಶಕ ಎಲ್. ವಿಜಯ್ ಜೊತೆ ಪ್ರೀತಿಯಲ್ಲಿ ಬಿದ್ದಿದ್ದರು.. ನಂತರ ವಿವಾಹವಾದರು.. ಆದರೆ ಭಿನ್ನಾಭಿಪ್ರಾಯಗಳಿಂದ ಇಬ್ಬರೂ ವಿಚ್ಛೇದನ ಪಡೆದರು.