Star Heroine: ಮದುವೆಗೂ ಮುನ್ನವೇ ಈ ಸ್ಟಾರ್ ಹೀರೋಯಿನ್ ಪ್ರೆಗ್ನೆಂಟ್‌? ಸೀಮಂತದ ಫೋಟೋ ವೈರಲ್!

Sat, 06 Apr 2024-8:41 am,

ಕನ್ನಡದಲ್ಲಿ ಕಿಚ್ಚ ಸುದೀಪ್ ಜೊತೆ ಹೆಬ್ಬುಲಿ ಸಿನಿಮಾದಲ್ಲಿ ನಟಿಸಿರುವ ಅಮಲಾ ಪೌಲ್ ನಿರ್ದೇಶಕ ಎಎಲ್ ವಿಜಯ್ ಜೊತೆ 2014 ರಲ್ಲಿ ವಿವಾಹವಾದರು. 

ಅಮಲಾ ಪೌಲ್ ಮತ್ತು ನಿರ್ದೇಶಕ ಎಎಲ್ ವಿಜಯ್ ಮದುವೆ ಕೇವಲ ಮೂರು ವರ್ಷಗಳಲ್ಲೇ ಮುರಿದು ಬಿತ್ತು. 2017 ರಲ್ಲಿ ವಿಚ್ಛೇದನ ಪಡೆದರು. 

ಕೇರಳ ಮೂಲದ ಅಮಲಾ ಪೌಲ್ 2023 ರಲ್ಲಿ ಉದ್ಯಮಿ ಜಗತ್ ದೇಸಾಯಿ ಅವರನ್ನು ಮದುವೆಯಾದರು. ಸದ್ಯ ಈ ದಂಪತಿ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.

ಮದುವೆಗೂ ಮುನ್ನವೇ ಅಮಲಾ ಪೌಲ್ ಗರ್ಭಿಣಿ ಆಗಿದ್ದರು ಎಂದು ನೆಟಿಜನ್‌ಗಳು ಕಮೆಂಟ್ ಮಾಡುತ್ತಿದ್ದಾರೆ. ಅಮಲಾ ಪೌಲ್ ಇತ್ತೀಚೆಗೆ ಬೇಬಿ ಬಂಪ್ ನ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈಗ ಅವು ವೈರಲ್ ಆಗುತ್ತಿವೆ. 

ನವೆಬಂರ್‌ನಲ್ಲಿ ಮದುವೆಯಾದ ನಟಿ ಅಮಲಾ ಪೌಲ್ ಜನವರಿಯಲ್ಲಿ‌ ತಾನು ಗರ್ಭಿಣಿ ಎಂದು ಘೋಷಿಸಿದರು. ಹೀಗಾಗಿ ಅವರು ಮದುವೆಗೂ ಮೊದಲೇ ಪ್ರೆಗ್ನೆಂಟ್‌ ಆಗಿದ್ದರು ಎಂಬ ವದಂತಿ ಹಬ್ಬಿತು. ಈಗ ಅವರಿಗೆ 7 ತಿಂಗಳು ಎನ್ನಲಾಗ್ತಿದೆ. 

ಈಗ ನಟಿ ಅಮಲಾ ಪೌಲ್ ಸೀಮಂತಾ ಕಾರ್ಯ ಅದ್ಧೂರಿಯಾಗಿ ನಡೆದಿದೆ. ಆಪ್ತ ಸ್ನೇಹಿತರು ಮತ್ತು ಕುಟುಂಬದವರು ಈ ಸಮಾರಂಭದಲ್ಲಿ ಭಾಗಿಯಾಗಿದ್ದಾರೆ. 

ಗುಜರಾತಿ ಸೊಸೆ ಅಮಲಾ ಪೌಲ್ ಟ್ರೆಡಿಷನಲ್ ಲುಕ್‌ನಲ್ಲಿ ಪತಿಯ ಜೊತೆಗೆ ಫೋಟೋಗೆ ಪೋಸ್‌ ನೀಡಿದ್ದು, ಅಭಿಮಾನಿಗಳು ಫಿದಾ ಆಗಿದ್ದಾರೆ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link