ತುಂಡು ಬಟ್ಟೆ ಹಾಕ್ಕೊಂಡಿದ್ದು ತಪ್ಪಲ್ಲ, ಕ್ಯಾಮೆರಾಗಳು ಅದನ್ನ ಹಾಗೆ ತೋರಿಸಿವೆ..! ಟ್ರೋಲ್‌ಗೆ ಅಮಲಾ ರಿಯಾಕ್ಷನ್
ಈಗಾಗಲೇ ಎಲ್ಲಾ ಹಂತಗಳನ್ನು ಪೂರ್ಣಗೊಳಿಸಿರುವ ಚಿತ್ರ ಜುಲೈ 26 ರಂದು ಬಿಡುಗಡೆಯಾಗಲಿದೆ. ಈ ಸಿನಿಮಾದ ಪ್ರಚಾರದ ಭಾಗವಾಗಿ ಆಸಿಫ್ ಅಲಿ ಮತ್ತು ಅಮಲಾ ಪೌಲ್ ಕೊಚ್ಚಿಯ ಎರ್ನಾಕುಲಂನ ಸೇಂಟ್ ಆಲ್ಬರ್ಟ್ ಕಾಲೇಜಿಗೆ ತೆರಳಿದ್ದರು. ಈ ವೇಳೆ ಅಮಲಾ ನೆಕ್ ಲೈನ್ ಇರುವ ಶಾರ್ಟ್ ಡ್ರೆಸ್‌ನಲ್ಲಿ ಕಾಣಿಸಿಕೊಂಡಿದ್ದರು.
ಅಮಲಾ ಸದ್ಯ ಮಲಯಾಳಂನ ‘ಲೆವೆಲ್ ಕ್ರಾಸ್’ ಸಿನಿಮಾದಲ್ಲಿ ಆಸಿಫ್ ಅಲಿ ಜೊತೆ ನಟಿಸುತ್ತಿದ್ದಾರೆ. ಅರ್ಫಾಜ್ ಅಯೂಬ್ ನಿರ್ದೇಶನದ ಈ ಸಿನಿಮಾದಲ್ಲಿ ಖ್ಯಾತ ನಿರ್ದೇಶಕ ಜೀತು ಜೋಸೆಫ್ ನಿರೂಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಈಗಾಗಲೇ ಎಲ್ಲಾ ಹಂತಗಳನ್ನು ಪೂರ್ಣಗೊಳಿಸಿರುವ ಚಿತ್ರ ಜುಲೈ 26 ರಂದು ಬಿಡುಗಡೆಯಾಗಲಿದೆ. ಈ ಸಿನಿಮಾದ ಪ್ರಚಾರದ ಭಾಗವಾಗಿ ಆಸಿಫ್ ಅಲಿ ಮತ್ತು ಅಮಲಾ ಪೌಲ್ ಕೊಚ್ಚಿಯ ಎರ್ನಾಕುಲಂನ ಸೇಂಟ್ ಆಲ್ಬರ್ಟ್ ಕಾಲೇಜಿಗೆ ತೆರಳಿದ್ದರು.
ಈ ವೇಳೆ ನಟಿ ಶಾರ್ಟ್ ಡ್ರೆಸ್ ನಲ್ಲಿ ಕಾಣಿಸಿಕೊಂಡಿದ್ದು, ಟ್ರೋಲ್‌ಗೆ ಕಾರಣವಾಗಿತ್ತು. ಶಾರ್ಟ್ ಡ್ರೆಸ್‌ನಲ್ಲಿ ಕಾಣಿಸಿಕೊಂಡು ವಿದ್ಯಾರ್ಥಿಗಳಿಗೆ ಎಂತಹ ಸಂದೇಶ ನೀಡುತ್ತಿದ್ದಾರೆ ಅಂತ ನೆಟಿಜನ್‌ಗಳು ಆಕ್ರೋಶ ವ್ಯಕ್ತಪಡಿಸಿದ್ದರು.
ಸಧ್ಯ ತಮ್ಮ ಡ್ರೆಸ್ ಮೇಲೆ ಬರುತ್ತಿರುವ ಟೀಕೆಗಳಿಗೆ ಅಮಲಾ ಪೌಲ್ ಸ್ವಲ್ಪ ಗಂಭೀರವಾಗಿಯೇ ಪ್ರತಿಕ್ರಿಯಿಸಿದ್ದಾರೆ. ಆ ಡ್ರೆಸ್ ನನಗೆ ಕಂಫರ್ಟ್ ಆಗಿತ್ತು.. ಅಂತ ಹೇಳಿಕೊಂಡಿದ್ದಾರೆ ನಟಿ.. ಅಮಲಾ ಅವರ ಕಾಮೆಂಟ್ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಆರಾಮದಾಯಕವಾದ ಬಟ್ಟೆಗಳನ್ನು ಧರಿಸುವುದು ನನಗೆ ಇಷ್ಟ.. ಅದು ಸರಿಯೋ ಇಲ್ಲವೋ ಎಂದು ಎಂದಿಗೂ ಯೋಚಿಸುವುದಿಲ್ಲ. ಆ ಡ್ರೆಸ್ ಫಂಕ್ಷನ್‌ಗೆ ಸರಿಯಾಗಿಲ್ಲ ಅನ್ನಿಸಿರಲಿಲ್ಲ. ಕ್ಯಾಮೆರಾಗಳು ಅವರ ಡ್ರೆಸ್ಸಿಂಗ್ ಶೈಲಿಯನ್ನು ತಪ್ಪಾಗಿ ತೋರಿಸಿವೆ ಅಂತ ನಟಿ ನೆಟ್ಟಿಗರ ಮಾತಿಗೆ ಪ್ರತಿಕ್ರಿಯೆ ನೀಡಿದ್ದಾರೆ..