ಇದು ತರಕಾರಿಯಲ್ಲ, ಸಂಜೀವಿನಿ!ಮಧುಮೇಹದಿಂದ ಕ್ಯಾನ್ಸರ್ ವರೆಗೆ ಮುಕ್ತಿ ನೀಡಬಲ್ಲ ಪರಮೌಷಧ! ವರ್ಷದಲ್ಲಿ ಮೂರೇ ತಿಂಗಳು ಸಿಗುವ ಕಾಯಿ ಇದು !

Mon, 06 Jan 2025-12:35 pm,

ಕೆಲವು ತರಕಾರಿಗಳು ಚಳಿಗಾಲದಲ್ಲಿ ಮಾತ್ರ ಸಿಗುತ್ತವೆ. ಅಂಥಹ ಒಂದು ತರಕಾರಿ ಚಪ್ಪರದ ಅವರೆಕಾಯಿ. ಈ ಹಸಿರು ತರಕಾರಿ ಪೌಷ್ಟಿಕಾಂಶಗಳ ಆಗರ.  

ಚಪ್ಪರದ ಅವರೆಕಾಯಿಯಲ್ಲಿ ಪ್ರೋಟೀನ್, ಫೈಬರ್, ವಿಟಮಿನ್, ಖನಿಜಗಳು ಹೇರಳವಾಗಿ ಇರುತ್ತವೆ. ವಿಟಮಿನ್ ಎ, ಸಿ ಮತ್ತು ಕೆ ಜೊತೆಗೆ ಕಬ್ಬಿಣ, ಕ್ಯಾಲ್ಸಿಯಂ ಮತ್ತು ಮೆಗ್ನೀಸಿಯಮ್  ಕೂಡಾ ಈ ತರಕಾರಿಯಲ್ಲಿ ಅಡಗಿರುತ್ತವೆ.

ಕಣ್ಣಿನ ದೃಷ್ಟಿಯನ್ನು ಇದು ಚುರುಕಾಗಿಸುತ್ತದೆ. ಇದರಲ್ಲಿರುವ ಲುಟೀನ್ ವೃದ್ಧಾಪ್ಯದಲ್ಲಿ ಕಣ್ಣಿನ ಪೊರೆ ಮತ್ತು ದೃಷ್ಟಿ ಕಳೆದುಕೊಳ್ಳುವ ಅಪಾಯವನ್ನು ಕಡಿಮೆ ಮಾಡುತ್ತದೆ.

ತೂಕನಷ್ಟ ಮಾಡಬೇಕು ಎನ್ನುವವರಿಗೆ ಇದಕ್ಕಿಂತ ಬೆಸ್ಟ್ ತರಕಾರಿ ಮತ್ತೊಂದಿಲ್ಲ. ಇದು ಕಡಿಮೆ ಕ್ಯಾಲೊರಿಗಳನ್ನು ಹೊಂದಿರುವ ತರಕಾರಿ. ಮಾತ್ರವಲ್ಲ ಅಧಿಕ ಪ್ರಮಾಣದಲ್ಲಿ ಫೈಬರ್ ಅನ್ನು ಹೊಂದಿರುತ್ತದೆ. ಹಾಗಾಗಿ ತೂಕ ಇಳಿಸಿಕೊಳ್ಳುವವರಿಗೆ ಇದು ಸಹಾಯ ಮಾಡುತ್ತದೆ.

ಇದು ಅಧಿಕ ಫೈಬರ್ ಹೊಂದಿರುವ ತರಕಾರಿಯಾಗಿದ್ದು ಚಯಾಪಚಯವನ್ನು ಹೆಚ್ಚಿಸುತ್ತದೆ. ಹಾಗಾಗಿ ಬ್ಲಡ್ ಶುಗರ್ ನಿಯಂತ್ರಣಕ್ಕೂ ಇದು ಸಹಾಯ ಮಾಡುತ್ತದೆ. 

ಇದು ವಿಟಮಿನ್ ಸಿಯ ಅತ್ಯುತ್ತಮ ಮೂಲ. ಹಾಗಾಗಿ ಕಾಲಜನ್ ಉತ್ಪಾದನೆಯಲ್ಲಿಯೂ ಇದರ ಪಾತ್ರ ದೊಡ್ಡದು. ಹೊಳೆಯುವ ಕಾಂತಿಯುತ ಚರ್ಮವನ್ನು ನಿಮ್ಮದಾಗಿಸುತ್ತದೆ.

ಚಪ್ಪರದ ಅವರೆಕಾಯಿಯಲ್ಲಿ ಮೆಗ್ನಿಶಿಯಂ ಕೂಡಾ ಹೇರಳವಾಗಿ ಕಂಡು ಬರುತ್ತದೆ. ಇದು ನಿದ್ರಾಹೀನತೆ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ. ಇದನ್ನು ಸೇವನೆ ಮಾಡಿದರೆ ರಾತ್ರಿ ಗಾಢ ನಿದ್ದೆ ಬರುವುದು ಗ್ಯಾರಂಟಿ. 

ಅವರೆ ಕಾಳಿನಲ್ಲಿ ಸತುವಿನ ಅಂಶವು ಆಕ್ಸಿಡೇಟಿವ್ ಒತ್ತಡವನ್ನು ನಿವಾರಣೆ ಮಾಡುತ್ತದೆ. ಇದು ಹಲವಾರು ರೀತಿಯ ಅನಾರೋಗ್ಯಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಸೂಚನೆ: ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್‌ ಇದನ್ನು ಖಚಿತಪಡಿಸುವುದಿಲ್ಲ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತಪ್ಪದೇ ತೆಗೆದುಕೊಳ್ಳಿ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link