ದೇವರಿಗೆ ದೀಪ ಬೆಳಗುವಾಗ ಎಣ್ಣೆಗೆ ಈ ವಸ್ತುವನ್ನು ಹಾಕಿದರೆ ಉಕ್ಕಿ ಬರುವುದು ಧನ ಸಂಪತ್ತು! ನಯಾ ಪೈಸೆ ಸಾಲ ಉಳಿಯುವುದಿಲ್ಲ!ಮನಸ್ಸಿನ ಸಣ್ಣ ಸಣ್ಣ ಇಚ್ಛೆ ಕೂಡಾ ಈಡೇರುವುದು
ಹಿಂದೂ ಧರ್ಮದಲ್ಲಿ ದೇವರಿಗೆ ದೀಪವನ್ನು ಬೆಳಗುವುದು ಮಂಗಳಕರ. ಬೆಳಿಗ್ಗೆ, ಸಂಜೆ ಎರಡೂ ಹೊತ್ತು ದೇವರ ಮುಂದೆ ದೀಪ ಬೆಳಗಲಾಗುತ್ತದೆ. ದೀಪವನ್ನು ಹಚ್ಚುವುದರಿಂದ ಆಗುವ ಪ್ರಯೋಜನಗಳ ಬಗ್ಗೆ ವಾಸ್ತು ಶಾಸ್ತ್ರದಲ್ಲಿ ಹೇಳಲಾಗಿದೆ.
ದೇವರ ಪೂಜೆಯನ್ನು ಮಾಡುವ ಸಮಯದಲ್ಲಿ ದೀಪವನ್ನು ಹಚ್ಚುವುದು ಕಡ್ಡಾಯ. ದೇವರಿಗೆ ದೀಪವನ್ನು ಹಚ್ಚದೆ ಮಾಡುವ ಪೂಜೆ ಪರಿಪೂರ್ಣ ಅಲ್ಲವೇ ಅಲ್ಲ.
ದೀಪ ಬೆಳಗುವುದರಿಂದ ನಕಾರಾತ್ಮಕತೆ ಕೊನೆಯಾಗುತ್ತದೆ. ಮನೆಯೊಳಗೆ ಧನಾತ್ಮಕ ಶಕ್ತಿ ಹರಿದಾಡುತ್ತದೆ. ಅದೇ ಕಾರಣಕ್ಕೆ ಒಳ್ಳೆಯ ಕೆಲಸ ಆರಂಭ ಮಾಡುವ ಮೊದಲು ದೀಪ ಬೆಳಗುವ ಪದ್ಧತಿ ಇದೆ.
ದೀಪಕ್ಕೆ ಎಳ್ಳೆಣ್ಣೆ ಮತ್ತು ತುಪ್ಪವನ್ನು ಬಳಸಲಾಗುತ್ತದೆ. ಈ ಎಣ್ಣೆಯನ್ನು ದೇವರ ದೀಪಕ್ಕೆ ಬಳಸುವುದು ಅತ್ಯಂತ ಶ್ರೇಷ್ಠ ಎಂದು ಹೇಳಲಾಗುತ್ತದೆ. ಕೆಲವೆಡೆ ದೇವರ ದೀಪಕ್ಕೆ ಸಾಸಿವೆ ಎಣ್ಣೆ ಬಳಸುವುದೂ ಇದೆ. ಆದರೆ ಅಡುಗೆ ಎಣ್ಣೆಯನ್ನು ಮಾತ್ರ ಯಾವುದೇ ಕಾರಣಕ್ಕೂ ದೇವರ ದೀಪಕ್ಕೆ ಬಳಸಬಾರದು.
ಇನ್ನು ದೇವರ ದೀಪಕ್ಕೆ ಎಣ್ಣೆಯ ಜೊತೆಗೆ ಒಂದು ಎಸಳು ಲವಂಗ ಸೇರಿಸಬೇಕು. ಹೀಗೆ ಮಾಡುವುದರಿಂದ ನಿಮ್ಮೆಲ್ಲ ಕಷ್ಟಗಳು ಕ್ಷಣದಲ್ಲಿ ನಿವಾರಣೆಯಾಗುವುದು. ಆರ್ಥಿಕ ಸಂಕಷ್ಟಗಳೆಲ್ಲ ಬಗೆಹರಿಯುವುದು.
ದೇವರ ಮುಂದೆ ಲವಂಗ ದೀಪ ಹಚ್ಚುವುದರಿಂದ ಹಣವನ್ನು ಆಕರ್ಷಿತವಾಗುತ್ತದೆ. ಮನದ ಇಷ್ಟಾರ್ಥ ಸಿದ್ದಿಸುತ್ತದೆ. ಮಾನಸಿಕ ನೆಮ್ಮದಿ ಹೆಚ್ಚುತ್ತದೆ ಎಂದು ಹೇಳಲಾಗುತ್ತದೆ.
ಲವಂಗ ಹಾಕಿದ ದೀಪವು ಚೆನ್ನಾಗಿ ಉರಿದು ಆರಿದ ನಂತರ ದೀಪದಲ್ಲಿದ್ದ ಲವಂಗವನ್ನು ತೆಂಗಿನ ಮರದ ಕೆಳಗೆ ಹಾಕಬೇಕು. ಒಂದು ವೇಳೆ ತೆಂಗಿನ ಮರ ಇಲ್ಲ ಎಂದಾದರೆ ನು ಯಾವುದಾದರೂ ಹೂವಿನ ಗಿಡದ ಕೆಳಗೆ ಹಾಕಬಹುದು. ಆದರೆ ಈ ಲವಂಗವನ್ನು ಎಲ್ಲೆಂದರಲ್ಲಿ ಎಸೆಯಬಾರದು.
ನಿಮ್ಮ ಜೀವನದಲ್ಲಿಯೂ ಬರಿಯ ಕಷ್ಟಗಳೇ ಮನೆ ಮಾಡಿದೆ ಎಂದಾದರೆ ಇಂದಿನಿಂದಲೇ ದೇವರಿಗೆ ಲವಂಗ ದೀಪ ಹಚ್ಚಿ ನೋಡಿ. ವ್ಯತ್ಯಾಸ ಸಿಕ್ಕಿಯೂ ಸಿಗಬಹುದು.
ಈ ಲೇಖನವನ್ನು ಸಾಮಾನ್ಯ ಮಾಹಿತಿ ಮತ್ತು ಧಾರ್ಮಿಕ ನಂಬಿಕೆಯ ಆಧಾರದಲ್ಲಿ ಬರೆಯಲಾಗಿದೆ. ಇದನ್ನು ಜೀ ನ್ಯೂಸ್ ಕನ್ನಡ ಅನುಮೋದಿಸುವುದಿಲ್ಲ.