Amazing Facts Human Body: ದಿನದಲ್ಲಿ ಎಷ್ಟು ಬಾರಿ ಹೃದಯ ಬಡಿದುಕೊಳ್ಳುತ್ತದೆ ಮತ್ತು ನಮ್ಮ ಮೆದುಳಿನಲ್ಲಿ ಎಷ್ಟು ಯೋಚನೆಗಳು ಬರುತ್ತವೆ?
1. ಹೃದಯಕ್ಕೆ (Heart) ಸಂಬಂಧಿಸಿದ ಪ್ರಮುಖ ಮಾಹಿತಿ - ನಿಮ್ಮ ಹೃದಯ ನಿರ್ಮಿಸುವ ಒತ್ತಡದ ಮೂಲಕ ಅದು ರಕ್ತವನ್ನು 30 ಅಡಿ ದೂರಕ್ಕೆ ಎಸೆಯಬಲ್ಲದು. ಇದೆ ಕಾರಣದಿಂದ ಕತ್ತನ್ನು ಸೀಳಿದಾಗ ರಕ್ತ ಕಾರಂಜಿಯಂತೆ ಹೊರಕ್ಕೆ ಚಿಮ್ಮುತ್ತದೆ. ಸಾಮಾನ್ಯವಾಗಿ ನಾವು ನಮ್ಮ ಹೃದಯದ ಬಡಿತವನ್ನು ಗಮನಿಸುವುದಿಲ್ಲ. ನಮ್ಮ ಹೃದಯ ಒಂದು ದಿನಕ್ಕೆ ಸುಮಾರು 1 ಲಕ್ಷ ಬಾರಿ ಬಡಿದುಕೊಳ್ಳುತ್ತದೆ.
2. ನಮ್ಮ ಶರೀರದಲ್ಲಿ 6 ಲೀಟರ್ ಅಥವಾ 1.6 ಗ್ಯಾಲನ್ ರಕ್ತ (Blood) ಇರುತ್ತದೆ. ದೇಹದಲ್ಲಿರುವ ಕೋಟ್ಯಾಂತರ ರಕ್ತಕೋಶಗಳಲ್ಲಿ ಹರಿಯುತ್ತದೆ. ನಮ್ಮ ಶರೀರದಲ್ಲಿ ಸುಮಾರು 30 ಲಕ್ಷ ಕೆಂಪು ರಕ್ತ ಕಣಗಳಿವೆ.
3. ಬಹುಮೂಲ್ಯ ಕಣ್ಣು (EYe) - ಮಾನವನ ಕಣ್ಣಿನಲ್ಲಿ ಒಟ್ಟು 12.7 ಕೋಟಿ ರೆಟಿನಾ ಸೆಲ್ ಗಳಿವೆ. ಇದೆ ಕಾರಣದಿಂದ ನಾವು ಸುಮಾರು 1 ಕೋಟಿಗೂ ಅಧಿಕ ವಿವಿಧ ಬಣ್ಣಗಳನ್ನು ಗುರುತಿಸಬಲ್ಲೆವು.
4. ವೀರ್ಯ - ಪುರುಷರಲ್ಲಿ ನಿತ್ಯ ಸುಮಾರು 10 ಕೋಟಿ ಸ್ಪರ್ಮ್ ಗಳು ಉತ್ಪತ್ತಿಯಾಗುತ್ತವೆ. ಇವುಗಳನ್ನು ಉನ್ನತ ತಂತ್ರಜ್ಞಾನದ ಉಪಕರಣಗಳ ಹೊರತು ಲೆಕ್ಕಹಾಕಲು ಸಾಧ್ಯವಿಲ್ಲ.
5. ಚರ್ಮದ ಜೀವಕೋಶಗಳು (Skin) - ಮಾನವನ ಶರೀರದಲ್ಲಿ ಕೋಟ್ಯಾಂತರ ಜೀವಕೋಶಗಳಿವೆ. ಪ್ರತಿಯೊಬ್ಬ ಮನುಷ್ಯನಲ್ಲಿ 200 ವಿವಿಧ ಜೀವಕೋಶಗಳು ಇರುತ್ತವೆ. ತ್ವಚೆಯ ಜೀವಕೋಶಗಳ ಕುರಿತು ಹೇಳುವುದಾದರೆ, ಒಂದು ಸಂಶೋಧನೆಯ ಪ್ರಕಾರ ಇವುಗಳ ಸಂಖ್ಯೆ 100 ಕೋಟಿ ಎಂದು ಅಂದಾಜಿಸಲಾಗಿದೆ.
6. ಎಲ್ಲಕ್ಕಿಂತ ದೊಡ್ಡ ಸೂಪರ್ ಕಂಪ್ಯೂಟರ್ (Brain) - ಮಾನವನ ಮೆದುಳನ್ನು ಅರ್ಥಮಾಡಿಕೊಳ್ಳುವುದು ಕೂಡ ಕಷ್ಟದ ಕೆಲಸ. ಏಕೆಂದರೆ ಇದರ ಸಂರಚನೆ ತುಂಬಾ ಜಟಿಲವಾಗಿದೆ. ಮೆದುಳಿಗೆ ಸಂಬಂಧಿಸಿದ ಸಮಸ್ಯೆಗಳಿಗೆ ನ್ಯೂರೋ ಸರ್ಜನ್ ಹೊರತುಪಡಿಸಿ ಬೇರೆ ಯಾರೂ ಚಿಕಿತ್ಸೆ ನೀಡಲು ಸಾಧ್ಯವಿಲ್ಲ. ಮಾನವನ ಮೆದುಳನ್ನು ವಿಶ್ವದ ಅತಿ ದೊಡ್ಡ ಸೂಪರ್ ಕಂಪ್ಯೂಟರ್ ಎಂದು ಕರೆಯಲಾಗುತ್ತದೆ. ಸಂಶೋಧನೆಯೊಂದರ ಪ್ರಕಾರ ಮೆದುಳಿನ ಸಂಭವನೀಯತೆಗಳು ಹಾಗೂ ಕ್ಷಮತೆ ಅನಂತವಾಗಿದೆ. ಮೆದುಳಿನಲ್ಲಿ 100 ಕೋಟಿಗೂ ಅಧಿಕ ನ್ಯೂರಾನಗಳಿವೆ. ದಿನವೊಂದರಲ್ಲಿ ನಮ್ಮ ಮೆದುಳಿನಲ್ಲಿ 60 ಸಾವಿರಕ್ಕೂ ಹೆಚ್ಚು ಯೋಚನೆಗಳು ಬರುತ್ತವೆ. ಒಂದು ನಿಮಿಷಕ್ಕೆ ನಮ್ಮ ಮೆದುಳು ಸುಮಾರು 1000 ಶಬ್ದಗಳನ್ನು ಓದಬಲ್ಲದು.