Interesting Facts: ಕಾಡಿನ ರಾಜ ‘ಸಿಂಹ’ದ ಬಗ್ಗೆ ಇಂಟರೆಸ್ಟಿಂಗ್ ಮಾಹಿತಿ ತಿಳಿದುಕೊಳ್ಳಿರಿ
ಕಾಡಿನ ರಾಜ ಸಿಂಹದ ಘರ್ಜಿಸಿದರೆ ಸಾಕು ಮೈಯಲ್ಲಿ ನಡುಕ ಹುಟ್ಟುತ್ತದೆ. ಸಿಂಹದ ಸಿಂಹದ ಉಗುರುಗಳು ಮತ್ತು ಹಲ್ಲುಗಳಲ್ಲಿ ತುಂಬಾ ಶಕ್ತಿಯಿದೆ. ಬೇಟೆಯಾಡಲು ಸಿಂಹ ತನ್ನ ಉಗುರುಗಳನ್ನು ಬಳಕೆ ಮಾಡುತ್ತದೆ. 2020ರ ಜನಗಣತಿಯ ಪ್ರಕಾರ ಸಿಂಹಗಳ ಸಂಖ್ಯೆಯಲ್ಲಿ ಏರಿಕೆ ಕಂಡು ಬಂದಿದ್ದು, ಭಾರತದಲ್ಲಿ ಸುಮಾರು 670ಕ್ಕೂ ಹೆಚ್ಚು ಸಿಂಹಗಳಿವೆ. ಸಿಂಹ ಭೂಮಿ ಮೇಲಿನ ಅತ್ಯಂತ ಧೈರ್ಯಶಾಲಿ ಪ್ರಾಣಿ ಎಂದು ಹೆಸರುವಾಸಿಯಾಗಿದೆ.
ಕಾಡಿನ ರಾಜ ಎಂದು ಕರೆಸಿಕೊಳ್ಳುವ ಸಿಂಹಗಳು ಸಾಮಾನ್ಯವಾಗಿ ಗುಂಪು ಗುಂಪಾಗಿ ಜೀವಿಸುತ್ತವೆ. ಸಾಮಾಜಿಕ ಜೀವನದ ಕಾರಣದಿಂದ ಹೆಚ್ಚಾಗಿ ಜೊತೆಯಾಗಿ ಬದುಕಲು ಇಷ್ಟಪಡುತ್ತವೆ. ಸಿಂಹಗಳ ಗುಂಪನ್ನು ಪ್ರೈಡ್ ಎಂದು ಕರೆಯಲಾಗುತ್ತದೆ. ಒಂದು ಪ್ರೈಡ್ನಲ್ಲಿ ಸುಮಾರು 15 ಸಿಂಹಗಳಿರುತ್ತವಂತೆ. ನಮ್ಮಲ್ಲಿ ಹೇಗೆ ಕುಟುಂಬ ವ್ಯವಸ್ಥೆ ಇದೆಯೇ ಹಾಗೆಯೇ ಸಿಂಹಗಳಲ್ಲಿಯೂ ಕುಟುಂಬ ವ್ಯವಸ್ಥೆ ಇದೆ.
ಒಂದು ಕಾಲದಲ್ಲಿ ಆಫ್ರಿಕಾ, ಏಷ್ಯಾ ಹಾಗೂ ಯುರೋಪ್ನ ಬಹುತೇಕ ಭಾಗಗಳಲ್ಲಿ ಸಿಂಹಗಳು ದೊಡ್ಡ ಸಂಖ್ಯೆಯಲ್ಲಿ ಕಂಡುಬರುತ್ತಿದ್ದವು. ಆದರೆ ಅರಣ್ಯ ನಾಶ, ಬೇಟೆ ಕಾರಣಗಳಿಂದ ಸಿಂಹಗಳ ಸಂಖ್ಯೆಯಲ್ಲಿ ಇಳಿಮುಖವಾಗಿದೆ. ಭಾರತದಲ್ಲಿ ಏಷ್ಯಾಟಿಕ್ ಸಿಂಹಗಳು ನಿರ್ಬಂಧಿತ ಗಿರ್ ಅರಣ್ಯದಲ್ಲಿ ಮತ್ತು ರಾಷ್ಟ್ರೀಯ ಉದ್ಯಾನವನದಲ್ಲಿ ಹೆಚ್ಚಾಗಿ ಕಂಡು ಬರುತ್ತವೆ. ಸಿಂಹಗಳು ನೋಡಲು ತುಂಬಾ ಮುದ್ದು ಮುದ್ದಾಗಿ ಕಾಣುತ್ತವೆ. ಆದರೆ ಒಂದೇ ಒಂದು ಘರ್ಜನೆ ಹಾಕಿದರೆ ನೀವೂ ಸಿಂಹದ ಬಳಿ ಸುಳಿಯುವುದೇ ಇಲ್ಲ.
ಸಿಂಹಗಳ ಪ್ರತಿ ಗುಂಪಿನಲ್ಲಿಯೂ ಗಂಡು ಹಾಗೂ ಹೆಣ್ಣು ಸಿಂಹಗಳಿರುತ್ತವೆ. ಗಂಡು ಸಿಂಹವು ಗುಂಪನ್ನು ಮುನ್ನಡೆಸಿದರೆ, ಹೆಣ್ಣು ಸಿಂಹಗಳು ತಮ್ಮ ಬಳಗಕ್ಕಾಗಿ ಬೇಟೆಯಾಡುತ್ತವಂತೆ. ಸಿಂಹ ಘರ್ಜನೆಯು ಸುಮಾರು 8 ಕಿ.ಮೀವರೆಗೂ ಕೇಳುತ್ತದಂತೆ. ಸಿಂಹವು ಗಂಟೆಗೆ 50 ಮೈಲಿ ವೇಗದಲ್ಲಿ ಓಡಬಲ್ಲವು ಹಾಗೂ 36 ಅಡಿಗಳಷ್ಟು ಹಾರಬಲ್ಲವು.
ಒಂದು ಸಿಂಹಕ್ಕೆ ಎಷ್ಟು ವಯಸ್ಸಾಗಿದೆ ಎಂದು ಅದರ ಗಡ್ಡ ನೋಡಿಯೇ ಹೇಳಬಹುದಂತೆ. ಸಿಂಹದ ಗಡ್ಡ ಎಷ್ಟು ಗಾಢ ಬಣ್ಣ ಹೊಂದಿರುತ್ತದೋ ಅದಕ್ಕೆ ಅಷ್ಟು ವಯಸ್ಸಾಗಿದೆ ಎಂದು ಅಂದಾಜಿಸಲಾಗುತ್ತದೆ. ಸಿಂಹಗಳು ನಡೆಯುವಾಗ ಅವುಗಳ ಹಿಮ್ಮಡಿ ನೆಲಕ್ಕೆ ತಾಗುವುದಿಲ್ಲವಂತೆ. ಸಿಂಹಗಳು ದಿನದಲ್ಲಿ 20 ಗಂಟೆಗಳ ಕಾಲವೂ ನಿದ್ರಿಸಬಲ್ಲವು. ಹೀಗಾಗಿ ಸಿಂಹವನ್ನು ಆಲಸಿ ಪ್ರಾಣಿ ಎಂತಲೂ ಕರೆಯುತ್ತಾರೆ.