ಈ ಹಣ್ಣು ಮಾತ್ರವಲ್ಲ ಇದರ ಬೀಜದ ಗುಣ ತಿಳಿದರೆ ಖಂಡಿತಾ ಎಸೆಯುವುದಿಲ್ಲ
)
ಖರ್ಬೂಜ ಹಣ್ಣಿನ ಬೀಜಗಳು ಹಣ್ಣಿಗಿಂತ ಹೆಚ್ಚಿನ ಪ್ರಯೋಜನಗಳನ್ನು ಹೊಂದಿವೆ. ಇದರ ಬೀಜಗಳ ಪ್ರಯೋಜನಗಳನ್ನು ಈ ಲೇಖನದಲ್ಲಿ ಕಾಣಬಹುದು.
)
ಹಿಂದಿನ ಕಾಲದಲ್ಲಿ ಖರ್ಬೂಜ ಹಣ್ಣನ್ನು ಕತ್ತರಿಸಿದ ನಂತರ ಅದರ ಬೀಜಗಳನ್ನು ತೊಳೆದು ಸ್ವಚ್ಛಗೊಳಿಸಿ ಬಿಸಿಲಿನಲ್ಲಿ ಒಣಗಿಸುತ್ತಿದ್ದರು. ಈ ಬೀಜಗಳನ್ನು ನಂತರ ಹಲ್ವಾ ಮುಂತಾದ ಸಿಹಿತಿಂಡಿಗಳಿಗೆ ಸೇರಿಸಿ ಸೇವಿಸಲಾಗುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಜನರಿಗೆ ಇದನ್ನೆಲ್ಲಾ ಮಾಡಲು ಸಮಯವಿಲ್ಲ. ಖರ್ಬೂಜ ಬೀಜಗಳು ಈಗ ಮಾರುಕಟ್ಟೆಯಲ್ಲಿ ಸಿಗುತ್ತವೆ. ಸುಲಭವಾಗಿ ತಂದರೆ ಆಯಿತು ಎನ್ನುವ ಯೋಚನೆ.
)
ಖರ್ಬೂಜ ಬೀಜಗಳು ಪೊಟ್ಯಾಸಿಯಮ್ನಲ್ಲಿ ಸಮೃದ್ಧವಾಗಿವೆ. ಇದು ರಕ್ತದೊತ್ತಡವನ್ನು ಕಡಿಮೆ ಮಾಡುವ ಗುಣಗಳನ್ನು ಹೊಂದಿದೆ. ಬಿಪಿ ಸಮಸ್ಯೆ ಇರುವವರು ಇದನ್ನು ತಿನ್ನಬಹುದು. ಅಧಿಕ ರಕ್ತದೊತ್ತಡ ಸಮಸ್ಯೆ ಇದ್ದರೆ ಖರ್ಬೂಜ ಬೀಜಗಳು ತುಂಬಾ ಉಪಯುಕ್ತವಾಗಿವೆ. ಪೊಟ್ಯಾಸಿಯಮ್ ಸಮೃದ್ಧವಾಗಿರುವ ಈ ಬೀಜವು ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಬೇಸಿಗೆಯಲ್ಲಿ, ಸಾಮಾನ್ಯ ಚಟುವಟಿಕೆಗಳನ್ನು ನಿರ್ವಹಿಸಲು ದೇಹಕ್ಕೆ ಹೆಚ್ಚುವರಿ ಶಕ್ತಿಯ ಅಗತ್ಯವಿರುತ್ತದೆ. ದೇಹವನ್ನು ಆಕ್ಟಿವ್ ಆಗಿ ಇರಿಸಲು ವಿಶೇಷ ರೀತಿಯ ಜೀವಸತ್ವಗಳು ಮತ್ತು ಖನಿಜಗಳ ಅಗತ್ಯವಿದೆ. ಖರ್ಬೂಜ ಬೀಜಗಳಲ್ಲಿ ವಿಟಮಿನ್-ಸಿ ಸಮೃದ್ಧವಾಗಿದೆ. ಹಾಗಾಗಿ ಇದನ್ನು ಸೇವಿಸಿದರೆ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ರಕ್ತದಲ್ಲಿನ ಬಿಳಿ ರಕ್ತ ಕಣಗಳ ಸಂಖ್ಯೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
ನಮ್ಮ ಕಣ್ಣುಗಳ ಆರೋಗ್ಯಕ್ಕೂ ವಿಟಮಿನ್ ಎ ಮತ್ತು ಬೀಟಾ-ಕ್ಯಾರೋಟಿನ್ ಅವಶ್ಯಕ. ಖರ್ಬೂಜ ಬೀಜಗಳಲ್ಲಿ ಇವೆರಡೂ ಸಮೃದ್ಧವಾಗಿವೆ. ಇದು ನಮ್ಮ ಕಣ್ಣುಗಳಿಗೆ ತುಂಬಾ ಪ್ರಯೋಜನಕಾರಿಯಾಗಿದೆ. ಈ ಬೀಜಗಳನ್ನು ನಿಯಮಿತವಾಗಿ ಸೇವಿಸಬಹುದು. ಇದು ಕಣ್ಣಿನ ಪೊರೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ಇದರೊಂದಿಗೆ ಕಣ್ಣುಗಳ ಕಾಂತಿಯೂ ಹೆಚ್ಚುತ್ತದೆ.
ನಿಮ್ಮ ಉಗುರುಗಳು ಮತ್ತು ಕೂದಲಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಬಯಸಿದರೆ, ನೀವು ಖರ್ಬೂಜ ಬೀಜಗಳನ್ನು ಸೇವಿಸಲು ಪ್ರಾರಂಭಿಸಬಹುದು. ಇದರಿಂದ ಕೂದಲು ಆರೋಗ್ಯಕರವಾಗಿ, ಉದ್ದವಾಗಿ ಹೊಳೆಯುತ್ತದೆ. ಉಗುರುಗಳು ಸಹ ಬಲವಾಗಿರುತ್ತವೆ. ಕಲ್ಲಂಗಡಿ ಬೀಜಗಳಲ್ಲಿ ಹೆಚ್ಚಿನ ಪ್ರೋಟೀನ್ ಇದ್ದು, ಇದು ಅಂಗಾಂಶಗಳ ಬೆಳವಣಿಗೆಗೆ ಸಹಾಯ ಮಾಡುತ್ತದೆ.