ನಿತ್ಯ 6-8 ನೆನೆಸಿದ ಬಾದಾಮಿ ತಿನ್ನಿ ಸಾಕು: ಈ ಕಾಯಿಲೆಗಳು ಮತ್ತೆಂದೂ ಬರದಂತೆ ಶಾಶ್ವತವಾಗಿ ಗುಣವಾಗುತ್ತೆ!
ಬಾದಾಮಿಯು ಕೂಡ ತುಂಬಾ ಪ್ರಯೋಜನಕಾರಿ ಡ್ರೈ ಫ್ರೂಟ್. ಆದರೆ ಅದನ್ನು ನೆನೆಸಿ ತಿಂದರೆ ಪ್ರಯೋಜನಗಳು ಮತ್ತಷ್ಟು ಹೆಚ್ಚಾಗುತ್ತವೆ.
ನಾವಿಂದು ಈ ವರದಿಯಲ್ಲಿ ನೆನೆಸಿದ ಬಾದಾಮಿಯನ್ನು ಪ್ರತೀದಿನ ತಿಂದರೆ ಯಾವೆಲ್ಲಾ ಪ್ರಯೋಜನಗಳನ್ನು ಪಡೆಯಬಹುದು ಎಂಬುದನ್ನು ತಿಳಿಯೋಣ.
ಬಾದಾಮಿಯಲ್ಲಿ ಆಂಟಿ ಆಕ್ಸಿಡೆಂಟ್’ಗಳ ಜೊತೆಗೆ ಮೊನೊಸಾಚುರೇಟೆಡ್ ಕೊಬ್ಬಿನಾಮ್ಲಗಳು ಕಂಡುಬರುತ್ತವೆ. ಇದು ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ನೆನೆಸಿದ ಬಾದಾಮಿಯನ್ನು ತಿನ್ನುವುದರಿಂದ ಹೃದಯ ಸಂಬಂಧಿ ಕಾಯಿಲೆಗಳ ಅಪಾಯ ಕಡಿಮೆಯಾಗುತ್ತದೆ.
ಪ್ರತಿದಿನ ಮುಂಜಾನೆ 5 ರಿಂದ 6 ನೆನೆಸಿದ ಬಾದಾಮಿ ತಿನ್ನಿ. ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳೆಲ್ಲವೂ ಹೇಳದೆ ಕೇಳದೆ ಮಾಯವಾಗುತ್ತವೆ. ಏಕೆಂದರೆ ಇದರಲ್ಲಿ ಫೈಬರ್ ಮತ್ತು ವಿಟಮಿನ್ ಇಯಂತಹ ಅಂಶಗಳು ಇರುತ್ತವೆ.
ನೆನೆಸಿದ ಬಾದಾಮಿಯಲ್ಲಿ ಮೆಗ್ನೀಸಿಯಮ್ ಇರುತ್ತದೆ. ಹೀಗಾಗಿ ಇದರ ಸೇವನೆಯು ಸಕ್ಕರೆಯ ಮಟ್ಟವನ್ನು ನಿಯಂತ್ರಣದಲ್ಲಿಡುತ್ತದೆ. ಮಧುಮೇಹಿಗಳು ದಿನಕ್ಕೆ 6 ರಿಂದ 8 ಬಾದಾಮಿಗಳನ್ನು ತಿನ್ನಬೇಕು.
ಬಾದಾಮಿಯನ್ನು ವಿಟಮಿನ್ ಇ ಯ ಉತ್ತಮ ಮೂಲವೆಂದು ಪರಿಗಣಿಸಲಾಗುತ್ತದೆ. ನೆನೆಸಿದ ಬಾದಾಮಿಯಲ್ಲಿ ಕಂಡುಬರುವ ವಿಟಮಿನ್ ಇ ಚರ್ಮವನ್ನು ಹೊಳೆಯುವಂತೆ ಮಾಡುತ್ತದೆ ಮತ್ತು ಸುಕ್ಕುಗಳಿಂದ ದೂರವಿರಿಸುತ್ತದೆ. ತ್ವಚೆಯ ಹೊರತಾಗಿ, ಬಾದಾಮಿ ತಿನ್ನುವುದರಿಂದ ಕೂದಲು ಕಪ್ಪು, ದಪ್ಪ ಮತ್ತು ಬಲವಾಗಿರುತ್ತದೆ. ಅದರಲ್ಲೂ ಬಿಳಿಕೂದಲಿನ ಸಮಸ್ಯೆಗೆ ಶಾಶ್ವತ ಪರಿಹಾರವನ್ನು ಕಂಡುಕೊಳ್ಳಬಹುದು.
(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇವುಗಳನ್ನು ಅನುಸರಿಸುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. Zee ಮಾಧ್ಯಮವು ಈ ಮಾಹಿತಿಯನ್ನು ಅನುಮೋದಿಸುವುದಿಲ್ಲ.)