ಸೌಂದರ್ಯಕ್ಕೂ ಸೈ ,ಆರೋಗ್ಯಕ್ಕೂ ಜೈ ಈ ಚಿನ್ನ!ಬಂಗಾರದ ಓಲೆ, ಸರ, ಬಳೆ ಈ ರೋಗಗಳಿಂದ ನೀಡುವುದು ಶಾಶ್ವತ ಮುಕ್ತಿ!
ಚಿನಾಭಾರಣ ಧರಿಸಿದರೆ ಮಹಿಳೆಯರ ಸೌಂದರ್ಯ ಹೆಚ್ಚುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಚಿನ್ನ ಪ್ರತಿಷ್ಟೆಯ ಸಂಕೇತ ಅಂದರೂ ತಪ್ಪಲ್ಲ. ಆದರೆ ಇದೇ ಚಿನ್ನ ನಮ ಅನೇಕ ಆರೋಗ್ಯ ಸಮಸ್ಯೆಗಳ ಪರಿಹಾರವೂ ಹೌದು.
ಚಿನ್ನದ ಆಭರಣಗಳನ್ನು ಧರಿಸುವುದರಿಂದ ಹಲವಾರು ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು ಎನ್ನುವ ವಿಚಾರ ಅನೇಕರಿಗೆ ತಿಳಿದಿರಲಿಕ್ಕಿಲ್ಲ.ಇಂದು ನಾವು ಯಾವ ಆಭರಣವನ್ನು ಧರಿಸಿದರೆ ಯಾವ ಆರೋಗ್ಯ ಸಮಸ್ಯೆಯಿಂದ ಪರಿಹಾರ ಸಿಗುತ್ತದೆ ಎನ್ನುವ ಮಾಹಿತಿ ನೀಡಲಿದ್ದೇವೆ.
ಚಿನ್ನದ ಕಿವಿಯೋಲೆಗಳನ್ನು ಧರಿಸುವುದರಿಂದ ಖಿನ್ನತೆ ಕಡಿಮೆಯಾಗುತ್ತದೆ.ಕಿವಿಯಲ್ಲಿ ಆಭರಣಗಳನ್ನು ಧರಿಸುವುದರಿಂದ ಕಿವಿ ಸೋಂಕುಗಳ ಅಪಾಯ ಕಡಿಮೆಯಾಗುತ್ತದೆ. ಇದರೊಂದಿಗೆ ಮಾನಸಿಕ ಆರೋಗ್ಯವನ್ನೂ ಸುಧಾರಿಸುತ್ತದೆ.ಪುಟ್ಟ ಮಕ್ಕಳಿಗೆ ಕಿವಿ ಚುಚ್ಚಿದರೆ ಹಠ ಕಡಿಮೆಯಾಗುತ್ತದೆ.
ಯಾರಿಗೆ ಆಯಾಸ, ದೌರ್ಬಲ್ಯ ಮತ್ತು ರಕ್ತಹೀನತೆಯ ಸಮಸ್ಯೆಗಳಿರುತ್ತವೆಯೋ, ಅವರು ಚಿನ್ನದ ಆಭರಣಗಳನ್ನು ಧರಿಸಬಹುದು.ಚಿನ್ನದ ಆಭರಣಗಳನ್ನು ಧರಿಸುವ ಮೂಲಕ ಈ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು.ಚಿನ್ನದ ಆಭರಣಗಳನ್ನು ಧರಿಸುವುದರಿಂದ ದೇಹದಲ್ಲಿ ಶಕ್ತಿ ಹೆಚ್ಚುತ್ತದೆ.
ಚಿನ್ನದ ಆಭರಣಗಳನ್ನು ಧರಿಸುವುದರಿಂದ ದೇಹದಲ್ಲಿ ಧನಾತ್ಮಕ ಶಕ್ತಿ ಮತ್ತು ಶಾಖ ಉತ್ಪತ್ತಿಯಾಗುತ್ತದೆ.ಇದರೊಂದಿಗೆ, ಶೀತ, ಅಸ್ತಮಾ ಲಕ್ಷಣಗಳು, ಉಸಿರಾಟದ ಕಾಯಿಲೆಗಳು ಮತ್ತು ರಕ್ತದೊತ್ತಡದಂತಹ ಸಮಸ್ಯೆಗಳು ಕಡಿಮೆಯಾಗುತ್ತವೆ. ಇದು ಹೃದಯ ಸಂಬಂಧಿ ಕಾಯಿಲೆಗಳ ಅಪಾಯವನ್ನೂ ಕಡಿಮೆ ಮಾಡುತ್ತದೆ.ಅಲ್ಲದೆ ರಕ್ತ ಸಂಚಾರವೂ ಉತ್ತಮವಾಗಿರುತ್ತದೆ.
ಸೂಚನೆ : ಈ ಲೇಖನವು ಸಾಮಾನ್ಯ ಮಾಹಿತಿಗಾಗಿ ಮಾತ್ರ. ಇದು ಯಾವುದೇ ಔಷಧಿ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿರಲು ಸಾಧ್ಯವಿಲ್ಲ. ಹೆಚ್ಚಿನ ಮಾಹಿತಿಗಾಗಿ ವೈದ್ಯರನ್ನು ಸಂಪರ್ಕಿಸಿ.