ಬಟ್ಟೆ ಹಾಕದೆ ಬೆತ್ತಲೆ ಮಲಗಿದರೆ ಇಳಿಕೆಯಾಗುತ್ತೆ ಹೆಚ್ಚುವರಿ ತೂಕ: ಬ್ಲಡ್ ಶುಗರ್ ನಿಯಂತ್ರಣಕ್ಕೂ ಇದು ವರದಾನ!
ಬಟ್ಟೆ ಇಲ್ಲದೆ ಮಲಗುವುದರಿಂದ ಆರೋಗ್ಯಕ್ಕೆ ಸಂಬಂಧಿಸಿದ ಅನೇಕ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು. ಹೌದು, ಬಟ್ಟೆ ಧರಿಸದೆ ಮಲಗುವುದು ಹೃದಯ ಮತ್ತು ಮನಸ್ಸಿಗೆ ಶಾಂತಿಯನ್ನು ನೀಡುತ್ತದೆ. ಇಂದು ಈ ಲೇಖನದಲ್ಲಿ ಈ ವಿಷಯಕ್ಕೆ ಸಂಬಂಧಿಸಿದ ಕೆಲವು ಅದ್ಭುತ ಪ್ರಯೋಜನಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ
ತೂಕ ನಷ್ಟಕ್ಕೆ ಉತ್ತಮ: ತಜ್ಞರು ಹೇಳುವಂತೆ ಬಟ್ಟೆ ಇಲ್ಲದೆ ಮಲಗುವುದರಿಂದ ಚಯಾಪಚಯ ಕ್ರಿಯೆಯು ಉತ್ತಮಗೊಳ್ಳುತ್ತದೆ. ಇದು ನಿಮ್ಮ ತೂಕವನ್ನು ನಿಯಂತ್ರಣದಲ್ಲಿಡುವುದಲ್ಲದೆ, ಮಧುಮೇಹದ ಅಪಾಯವನ್ನು ಕಡಿಮೆ ಮಾಡುತ್ತದೆ. ಬೇಸಿಗೆಯಲ್ಲಿ ಈ ರೀತಿ ಮಲಗುವುದರಿಂದ ದೇಹವೂ ತಂಪಾಗಿರುತ್ತದೆ.
ಬಿಗಿಯಾದ ಒಳಉಡುಪುಗಳನ್ನು ಧರಿಸಿ ಮಲಗುವ ಪುರುಷರಲ್ಲಿ ವೀರ್ಯಾಣು ಕಡಿಮೆ ಇರುತ್ತದೆ ಎಂದು ಸಂಶೋಧನೆಯೊಂದು ಬಹಿರಂಗಪಡಿಸಿದೆ. ಇಂತಹ ಪರಿಸ್ಥಿತಿಯಲ್ಲಿ ಡ ಬಿಗಿಯಾದ ಬಟ್ಟೆಗಳನ್ನು ಧರಿಸಿ ಮಲಗಿದರೆ, ಇದರಿಂದ ವೃಷಣಗಳಿಗೆ ವಿಶ್ರಾಂತಿ ದೊರೆಯುವುದಿಲ್ಲ ಮತ್ತು ಫಲವತ್ತತೆಯ ಮೇಲೆ ವ್ಯತಿರಿಕ್ತ ಪರಿಣಾಮ ಕಂಡುಬರುವುದು ಖಚಿತ. ಹೀಗಾಗಿ ಮಲಗುವ ಮುನ್ನ ಒಳಉಡುಪುಗಳನ್ನು ತೆಗೆದು ಮಲಗಿದರೆ, ವೀರ್ಯದ ಸಂಖ್ಯೆ ಸುಧಾರಿಸುವುದು ಮಾತ್ರವಲ್ಲದೆ ಬೆವರಿನಿಂದ ಉಂಟಾಗುವ ಸೋಂಕಿನಿಂದ ರಕ್ಷಣೆ ಸಿಗುತ್ತದೆ.
ಒತ್ತಡದಿಂದ ಪರಿಹಾರ: ಇಂದಿನ ಬಿಡುವಿಲ್ಲದ ಜೀವನದಲ್ಲಿ ಸಾಮಾನ್ಯವಾಗಿ ಕಂಡುಬರುವ ಒತ್ತಡ ಮತ್ತು ಆತಂಕದಿಂದ ಈ ಟಿಪ್ಸ್ ನಿಮಗೆ ಪರಿಹಾರವನ್ನು ನೀಡುತ್ತದೆ. ಹೀಗೆ ಮಲಗುವುದರಿಂದ ಬೇಸಿಗೆಯಲ್ಲಿ ದೇಹದ ಉಷ್ಣತೆ ಸುಧಾರಿಸುವುದಲ್ಲದೆ, ಆಕ್ಸಿಟೋಸಿನ್ ನಂತಹ ಹಾರ್ಮೋನ್ ಗಳು ಬಿಡುಗಡೆಯಾಗುವುದರಿಂದ ದೇಹಕ್ಕೆ ವಿಶ್ರಾಂತಿ ಸಿಗುತ್ತದೆ.
ಹೃದಯ ಆರೋಗ್ಯಕರ: ಬಟ್ಟೆ ಇಲ್ಲದೆ ಮಲಗುವುದು ಉತ್ತಮ ನಿದ್ರೆಯನ್ನು ಪಡೆಯಲು ಸಹಾಯ ಮಾಡುತ್ತದೆ. ಇದು ನಿಮ್ಮ ಹೃದಯದ ಆರೋಗ್ಯಕ್ಕೂ ಒಳ್ಳೆಯದೇ. ಈ ರೀತಿ ಮಲಗುವುದರಿಂದ ಮಧುಮೇಹ, ಹೃದ್ರೋಗ ಮತ್ತು ಅಧಿಕ ರಕ್ತದೊತ್ತಡದಂತಹ ಸಮಸ್ಯೆಗಳ ಅಪಾಯವನ್ನು ಕಡಿಮೆ ಮಾಡಲು ಸಾಧ್ಯವಾಗುತ್ತದೆ.
ಬಟ್ಟೆ ಇಲ್ಲದೆ ಮಲಗುವುದು ಮಹಿಳೆಯರ ಯೋನಿ ಆರೋಗ್ಯದ ಮೇಲೆ ಉತ್ತಮ ಪರಿಣಾಮ ಬೀರುತ್ತದೆ. ಬೇಸಿಗೆಯಲ್ಲಿ ಅತಿಯಾಗಿ ಬೆವರುವುದು, ಇದರಿಂದ ಯೋನಿಯಲ್ಲಿ ಯೀಸ್ಟ್ ಸೋಂಕಿನ ಅಪಾಯ ಹೆಚ್ಚಾಗುತ್ತದೆ. ಇದರೊಂದಿಗೆ ತುರಿಕೆ ಮತ್ತು ಕೆಂಪಾಗುವಿಕೆಯಂತಹ ಸಮಸ್ಯೆಗಳೂ ಇವೆ. ಹೀಗಾಗಿ, ಬಟ್ಟೆಯನ್ನು ಧರಿಸದೆ ಮಲಗುವ ಮೂಲಕ ಯೋನಿ ಸಮಸ್ಯೆಗಳನ್ನು ಸಹ ಗುಣಪಡಿಸಬಹುದು.
ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಅರ್ಹ ವೈದ್ಯಕೀಯ ಅಭಿಪ್ರಾಯಕ್ಕೆ ಯಾವುದೇ ರೀತಿಯಲ್ಲಿ ಪರ್ಯಾಯವಾಗಿಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞ ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸಿ. ಈ ಮಾಹಿತಿಯ ಹೊಣೆಯನ್ನು Zee Kannada News ಖಚಿತಪಡಿಸಿಕೊಳ್ಳುವುದಿಲ್ಲ.