ನಿತ್ಯ ಬೆಲ್ಲದೊಂದಿಗೆ ಅಜ್ವೈನ್ ತಿಂದ್ರೆ ಬಿಪಿ ನಿಯಂತ್ರಣ ಅಷ್ಟೇ ಅಲ್ಲ, ಈ ಕಾಯಿಲೆಗಳಿಂದಲೂ ಪರಿಹಾರ
ಸಾಮಾನ್ಯ ಶೀತ, ನೆಗಡಿ, ಕೆಮ್ಮಿಗೆ ರಾಮಬಾಣವಾದ ಬೆಲ್ಲವನ್ನು ಜೀರ್ಣಕಾರಿ ಸಮಸ್ಯೆಗಳಿಗೆ ಔಷಧಿಯಾಗಿರುವ ಅಜ್ವೈನ್ ಜೊತೆಗೆ ಬೆರೆಸಿ ತಿನ್ನುವುದರಿಂದ ಕೆಲವು ಆರೋಗ್ಯ ಸಮಸ್ಯೆಗಳಿಂದ ದೂರ ಉಳಿಯಬಹುದು ಎನ್ನಲಾಗುತ್ತದೆ.
ಬೆಲ್ಲ ಕಬ್ಬಿಣ, ಕ್ಯಾಲ್ಸಿಯಂ ಮತ್ತು ರಂಜಕದಂತಹ ಖನಿಜಗಳಿಂದ ತುಂಬಿದ್ದರೆ, ಅಜ್ವೈನ್ ಉತ್ಕರ್ಷಣ ನಿರೋಧಕ ಮತ್ತು ಉರಿಯೂತದ ಗುಣಲಕ್ಷಣಗಳಿಂದ ಸಮೃದ್ಧವಾಗಿದೆ.
ಬೆಲ್ಲದಲ್ಲಿ ಪೊಟ್ಯಾಸಿಯಮ್ ಮತ್ತು ಅಜ್ವೈನ್ ನಲ್ಲಿರುವ ಥೈಮೋಲ್ ಅಂಶವೂ ರಕ್ತನಾಳಗಳು ಕುಗ್ಗದಂತೆ ತಡೆದು ಹೃದ್ರೋಗದ ಅಪಾಯವನ್ನು ಕಡಿಮೆ ಮಾಡುತ್ತದೆ.
ಅಜ್ವೈನ್ ಜೀರ್ಣಾಂಗ ವ್ಯವಸ್ಥೆಗೆ ದಿವ್ಯೌಷಧ. ಬೆಲ್ಲದೊಂದಿಗೆ ಇದರ ಸೇವನೆಯು ಗ್ಯಾಸ್ಟ್ರಿಕ್, ಹೊಟ್ಟೆ ಉಬ್ಬರದಂತಹ ಸಮಸ್ಯೆಗಳಿಂದ ಪರಿಹಾರ ನೀಡುತ್ತದೆ.
ಪ್ರತಿ ದಿನ ಖಾಲಿಹೊಟ್ಟೆಯಲ್ಲಿ ಬೆಲ್ಲವನ್ನು ಅಜ್ವೈನ್ ಜೊತೆಗೆ ಸೇವಿಸುವುದರಿಂದ ಹೈ ಬಿಪಿ ಎಂದರೆ ಅಧಿಕ ರಕ್ತದೊತ್ತಡವನ್ನು ಸುಲಭವಾಗಿ ಕಂಟ್ರೋಲ್ ಮಾಡಬಹುದು.
ಬೆಲ್ಲ-ಅಜ್ವೈನ್ ಮಿಶ್ರಣವು ನೈಸರ್ಗಿಕವಾಗಿ ತೂಕ ಕಡಿಮೆ ಮಾಡಲು ಬಲು ಪ್ರಯೋಜನಕಾರಿ ಮನೆಮದ್ದು.
ಒಂದು ಚಮಚ ಬೆಲ್ಲದಲ್ಲಿ ಅರ್ಧ ಚಮಚ ಅಜ್ವೈನ್ ಬೆರೆಸಿ ಖಾಲಿ ಹೊಟ್ಟೆಯಲ್ಲಿ ತಿನ್ನುವುದರಿಂದ ಅಥವಾ ಇದರ ಪಾನೀಯ ಸೇವಿಸುವುದರಿಂದ ಮೇಲೆ ತಿಳಿಸಿದ ಆರೋಗ್ಯ ಸಮಸ್ಯೆಗಳ ಜೊತೆಗೆ ಪಿರಿಯಡ್ಸ್ ನೋವು, ಆಸ್ತಮಾದಂತಹ ಸಮಸ್ಯೆಗಳಿಂದಲೂ ದೂರ ಉಳಿಯಬಹುದು.
ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ.ಈ ಮಾಹಿತಿಯ ಹೊಣೆಯನ್ನು ಜೀ ಕನ್ನಡ ನ್ಯೂಸ್ ಹೇಳಿಕೊಳ್ಳುವುದಿಲ್ಲ.