ಜಿಯೋ, ಏರ್ಟೆಲ್ನ ಈ ಯೋಜನೆಗಳಲ್ಲಿ Amazon Prime, Sony Liv, Zee 5, Netflix ಸಂಪೂರ್ಣ ಉಚಿತ
JioFiber 999ರೂ.ಗಳ ಯೋಜನೆ: JioFiberನ 999ರೂ.ಗಳ ಯೋಜನೆಯು 30 ದಿನಗಳ ಮಾನ್ಯತೆಯೊಂದಿಗೆ ಬರುತ್ತದೆ. ಇದು 150Mbps ಇಂಟರ್ನೆಟ್ ವೇಗವನ್ನು ನೀಡುತ್ತದೆ. ಈ ಯೋಜನೆಯಲ್ಲಿ Disney + Hotstar, Amazon Prime, Sony Liv, Zee5, Voot Select ಮತ್ತು 100 ಅಂತಹ OTT ಅಪ್ಲಿಕೇಶನ್‌ಗಳು ಸಂಪೂರ್ಣವಾಗಿ ಉಚಿತವಾಗಿ ಲಭ್ಯವಿದೆ. ಇದರಲ್ಲಿ ಫ್ರೀ ಕಾಲಿಂಗ್ ಸೌಲಭ್ಯವೂ ಇದೆ.
JioFiber 1499ರೂ.ಗಳ ಯೋಜನೆ: 300Mbps ವೇಗದೊಂದಿಗೆ ಲಭ್ಯವಿರುವ JioFiber ನ 1499 ರೂ.ಗಳ ಯೋಜನೆ ಕೂಡ 30 ದಿನಗಳ ಮಾನ್ಯತೆಯೊಂದಿಗೆ ಬರುತ್ತದೆ. ಇದರಲ್ಲಿ ಡಿಸ್ನಿ + ಹಾಟ್‌ಸ್ಟಾರ್, ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್ ಜೊತೆಗೆ 14 OTT ಚಾನಲ್‌ಗಳ ಉಚಿತ ಚಂದಾದಾರಿಕೆ ಪ್ರಯೋಜನಗಳು ಲಭ್ಯವಿವೆ.
JioFiber 2499ರೂ.ಗಳ ಯೋಜನೆ: ಜಿಯೋ ಫೈಬರ್ನ 2499ರೂ.ಗಳ ಯೋಜನೆಯು ಅನಿಯಮಿತ ಡಾಟಾ ಪ್ರಯೋಜನದೊಂದಿಗೆ ಲಭ್ಯವಿದೆ. ಈ ಯೋಜನೆಯ ಮಾನ್ಯತೆಯು 30 ದಿನಗಳವರೆಗೆ ಇರುತ್ತದೆ. 500Mbps ವೇಗದೊಂದಿಗೆ ಲಭ್ಯವಿರುವ ಈ ಯೋಜನೆಯಲ್ಲಿ 1499ರೂ.ಗಳ ಯೋಜನೆಯಲ್ಲಿ ಲಭ್ಯವಿರುವ ಅದೇ OTT ಚಾನಲ್‌ಗಳ ಉಚಿತ ಚಂದಾದಾರಿಕೆ ಲಭ್ಯವಿರುತ್ತದೆ.
ಏರ್‌ಟೆಲ್ 999ರೂ.ಗಳ ಯೋಜನೆ: ಏರ್‌ಟೆಲ್‌ನ 999ರೂ.ಗಳ ಬ್ರಾಡ್‌ಬ್ಯಾಂಡ್ ಯೋಜನೆಯಲ್ಲಿ 200Mbps ವೇಗದ ಅನಿಯಮಿತ ಡೇಟಾ ಸೌಲಭ್ಯ ಲಭ್ಯವಿದೆ. ಈ ಯೋಜನೆಯಲ್ಲಿ ಅನಿಯಮಿತ ಕರೆ ಕೂಡ ಲಭ್ಯವಿದೆ. ಇದಲ್ಲದೆ, ಡಿಸ್ನಿ + ಹಾಟ್‌ಸ್ಟಾರ್, ಅಮೆಜಾನ್ ಪ್ರೈಮ್, ಎಕ್ಸ್‌ಸ್ಟ್ರೀಮ್ ಪ್ರೀಮಿಯಂ ಯೋಜನೆಯಲ್ಲಿ ಲಭ್ಯವಿದೆ.
ಏರ್‌ಟೆಲ್ 1,498ರೂ.ಗಳ ಯೋಜನೆ: ಏರ್‌ಟೆಲ್‌ನ 1,498ರೂ.ಗಳ ಬ್ರಾಡ್‌ಬ್ಯಾಂಡ್ ಯೋಜನೆಯಲ್ಲಿ 300Mbps ವೇಗದೊಂದಿಗೆ ಅನಿಯಮಿತ ಇಂಟರ್ನೆಟ್ ಪ್ರಯೋಜನ ಲಭ್ಯವಾಗಲಿದೆ. ಯೋಜನೆಯಲ್ಲಿ ಅನಿಯಮಿತ ಕರೆ ಸೌಲಭ್ಯವೂ ಲಭ್ಯವಿದೆ. ಇದಲ್ಲದೆ, ಇದರಲ್ಲಿ Netflix Basic, Amazon Prime, Disney + Hotstar ಗಳಿಗೆ ಉಚಿತ ಚಂದಾದಾರಿಕೆ ಲಭ್ಯವಿದೆ.
ಏರ್‌ಟೆಲ್ 3,999 ರೂ.ಗಳ ಯೋಜನೆ: ಏರ್‌ಟೆಲ್‌ನ 3,999 ರೂ.ಗಳ ಯೋಜನೆಯಲ್ಲಿ ಅನಿಯಮಿತ ಡೇಟಾ ಲಭ್ಯವಿದೆ. ಅದೇ ಸಮಯದಲ್ಲಿ, ಇಂಟರ್ನೆಟ್ ವೇಗವು 1GB ವರೆಗೆ ಲಭ್ಯವಿದೆ. ಕರೆ ಸೌಲಭ್ಯ ಸಂಪೂರ್ಣ ಉಚಿತವಾಗಿದೆ. ಈ ಯೋಜನೆಯಲ್ಲಿ ನೆಟ್‌ಫ್ಲಿಕ್ಸ್ ಬೇಸಿಕ್, ಅಮೆಜಾನ್ ಪ್ರೈಮ್, ಡಿಸ್ನಿ + ಹಾಟ್‌ಸ್ಟಾರ್‌ನ ಉಚಿತ ಚಂದಾದಾರಿಕೆಯೂ ಲಭ್ಯವಿದೆ. ಯೋಜನೆಯು ಫಾಸ್ಟ್ಯಾಗ್ ಮತ್ತು ವಿಂಕ್ ಪ್ರೀಮಿಯಂನ ಕ್ಯಾಶ್ಬ್ಯಾಕ್ ಅನ್ನು ಒಳಗೊಂಡಿದೆ.