Amazon Prime Video Latest Updates: ತನ್ನ ಅತ್ಯಂತ ಅಗ್ಗದ ಮಾಸಿಕ ಚಂದಾದಾರಿಕೆಯ ಪ್ಲಾನ್ ಸ್ಥಗಿತಗೊಳಿಸಿದ Amazon
1. ಇನ್ಮುಂದೆ ಬಳಕೆದಾರರಿಗೆ ಈ ಪ್ಲಾನ್ ಸಿಗಲಿದೆ - ಕಂಪನಿಯು ನೀಡಿದ ಮಾಹಿತಿಯ ಪ್ರಕಾರ, ಅದು ಅಮೆಜಾನ್ ಪ್ರೈಮ್‌ನ ಮಾಸಿಕ ಚಂದಾದಾರಿಕೆಯನ್ನು ನಿಲ್ಲಿಸಿದೆ. ಅಮೆಜಾನ್ ಪ್ರೈಮ್ 129 ರೂ.ಗಳ ಯೋಜನೆಯನ್ನು ಸ್ಥಗಿತಗೊಳಿಸಿದ ನಂತರ, ಈಗ 329 ರೂ.ಗಳ ಮೂರು ತಿಂಗಳ ರೀಚಾರ್ಜ್ ಯೋಜನೆ ಬಳಕೆದಾರರಿಗೆ ಅಗ್ಗದ ಚಂದಾದಾರಿಕೆ ಯೋಜನೆಯಾಗಿ ಲಭ್ಯವಿರಲಿದೆ. ಇದರೊಂದಿಗೆ, ಅವರು 999 ರೂಗಳಿಗೆ ವಾರ್ಷಿಕ ಚಂದಾದಾರಿಕೆ ಯೋಜನೆಯನ್ನು ಸಹ ಚಂದಾದಾರರು ಪಡೆಯಬಹುದಾಗಿದೆ.
2. ಈ ಉಚಿತ ಸೇವೆ ಕೂಡ ಸ್ಥಗಿತಗೊಂಡಿದೆ - ಇದಲ್ಲದೆ ಹೊಸ ಸದಸ್ಯರಿಗೆ ನೀಡಲಾಗುತ್ತಿದ್ದ ಉಚಿತ ಟ್ರಯಲ್ ಸೇವೆಯನ್ನೂ ಕೂಡ ಸ್ಥಗಿತಗೊಳಿಸಲಾಗಿದೆ. ಕಂಪನಿ ಏಪ್ರಿಲ್ 27, 2021 ರಿಂದ ಹೊಸ ಸದಸ್ಯರಿಗೆ ನೀಡುತಿದ್ದ ಉಚಿತ ಸೈನ್-ಅಪ್ ಪ್ಲಾನ್ ಅನ್ನೂ ಕೂಡ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ.
3. ನಿಯಮ ರೂಪಿಸಿ ನಿರ್ದೇಶನ ಜಾರಿಗೊಳಿಸಿದ RBI - ಮೂಲಗಳು ನೀಡಿರುವ ಮಾಹಿತಿಯ ಪ್ರಕಾರ, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ನಿಯಮಗಳಿಂದಾಗಿ ಅಮೆಜಾನ್ ಪ್ರೈಮ್ ತನ್ನ ಮಾಸಿಕ ಮಾಸಿಕ ಚಂದಾದಾರಿಕೆ ಯೋಜನೆಯನ್ನು ಸ್ಥಗಿತಗೊಳಿಸಿದೆ ಎನ್ನಲಾಗಿದೆ. ಆಟೋ ಡೆಬಿಟ್‌ನ ಹೊಸ ನಿಯಮಗಳನ್ನು ಅನುಸರಿಸಲು RBI ಸೆಪ್ಟೆಂಬರ್ 30, 2021ರವರೆಗೆ ತನ್ನ ಗಡುವನ್ನು ಹೆಚ್ಚಿಸಿದೆ. ಇದರ ಅಡಿಯಲ್ಲಿ, ಅಡಿಷನಲ್ ಫ್ಯಾಕ್ಟರ್ ಅಥೆಂಟಿಕೆಶನ್ (AFA) ಗಾಗಿ ಹೆಚ್ಚುವರಿ ಕ್ರಮಗಳನ್ನು ಅಂದರೆ ಕಂಪನಿಗಳಿಗೆ ಪರಿಶೀಲನೆಯನ್ನು ಈಗ ಕಡ್ಡಾಯಗೊಳಿಸಿದೆ. ಇದರ ಅಡಿಯಲ್ಲಿ, ಕಾರ್ಡ್ ಅಥವಾ ಪ್ರಿಪೇಯ್ಡ್ ಪೇಮೆಂಟ್ ಇನ್ಸ್ಟ್ರುಮೆಂಟ್ (PPI) ಅಥವಾ ಏಕೀಕೃತ ಪಾವತಿ ಇಂಟರ್ಫೇಸ್ (UPI) ಬಳಸುವಾಗ AFA ಅನುಸರಿಸಬೇಕು ಎಂದಿದೆ. ಆದರೆ ವಾಸ್ತವದಲ್ಲಿ ಅದನ್ನು ಅನುಸರಿಸಲಾಗುತ್ತಿಲ್ಲ ಎಂಬಂತೆ ತೋರುತ್ತಿದೆ. ಈ ಕಾರಣದಿಂದಾಗಿ, AFA ಪಾಲಿಸದಿದ್ದರೆ, ಆ ವ್ಯವಸ್ಥೆಯು ಸೆಪ್ಟೆಂಬರ್ 30, 2021 ರ ಬಳಿಕ ಜಾರಿಯಲ್ಲಿರುವುದಿಲ್ಲ ಎಂದು RBI ಹೇಳಿದೆ.
4. ಭಾರತದಲ್ಲಿ miniTV ವಿಡಿಯೋ ಸ್ಟ್ರೀಮಿಂಗ್ ಸೇವೆ ಬಿಡುಗಡೆ ಮಾಡಿದ ಅಮೆಜಾನ್ - ನಿನ್ನೆಯಷ್ಟೇ ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ Amazon ಭಾರತೀಯ ಬಳಕೆದಾರರಿಗೆ ಅಮೆಜಾನ್ ಇ-ಕಾಮರ್ಸ್ ಅಪ್ಪ್ಲಿಕೆಶನ್ ಭಾಗವಾಗಿ miniTV ಸೇವೆಯನ್ನು ಬಿಡುಗಡೆಗೊಳಿಸಿರುವುದಾಗಿ ಹೇಳಿದೆ. ಪ್ರಸ್ತುತ ಈ ಸೇವೆಯನ್ನು ಕೇವಲ ಅಂಡ್ರಾಯಿಡ್ ಬಳಕೆದಾರರಿಗೆ ಮಾತ್ರ ಬಿಡುಗಡೆ ಮಾಡಲಾಗಿದ್ದು, ಮುಂಬರುವ ದಿನಗಳಲ್ಲಿ ಐಓಎಸ್ ಬಳಕೆದಾರರಿಗೂ ಕೂಡ ಬಿಡುಗಡೆ ಮಾಡಲಾಗುವುದು ಎಂದು ಹೇಳಿದೆ.