ಹತ್ತು ಸಾವಿರ ರೂಪಾಯಿಗಿಂತ ಕಡಿಮೆ ಬೆಲೆಯಲ್ಲಿ ಉತ್ತಮ ಸ್ಮಾರ್ಟ್‌ಫೋನ್ ಖರೀದಿಸಲು ಒಳ್ಳೆಯ ಅವಕಾಶ
ಟೆಕ್ನೋ ಸ್ಪಾರ್ಕ್ 8ಸಿ : ಅಮೆಜಾನ್ ಸ್ಮಾರ್ಟ್‌ಫೋನ್ ಅಪ್‌ಗ್ರೇಡ್ ಡೇಸ್ ಸೇಲ್‌ನಲ್ಲಿ ನೀವು ಟೆಕ್ನೋ ಸ್ಪಾರ್ಕ್ 8ಸಿ ಸ್ಮಾರ್ಟ್‌ಫೋನ್ ಅನ್ನು 10,999 ರೂ.ಗಳ ಬದಲಿಗೆ 7,899 ರೂ.ಗಳಿಗೆ ಖರೀದಿಸಬಹುದು. 6ಜಿಬಿ ರಾಮ್ ಹಾಗೂ 64 ಜಿಬಿ ಸಂಗ್ರಹಣಾ ಸಾಮರ್ಥ್ಯವಿರುವ ಈ ಫೋನ್ ಮೇಲೆ ನೀವು ಅತ್ಯುತ್ತಮವಾದ ಬ್ಯಾಂಕ್ ಕೊಡುಗೆಗಳ ಜೊತೆಗೆ ವಿನಿಮಯ ಕೊಡುಗೆಯನ್ನು ಪಡೆಯಬಹುದು.
ನೋಕಿಯಾ ಸಿ01 ಪ್ಲಸ್ 4ಜಿ ಸ್ಮಾರ್ಟ್‌ಫೋನ್ ಅನ್ನು ನೀವು 6,999 ರೂ.ಗಳ ಬದಲಿಗೆ 6,298 ರೂ.ಗೆ ಖರೀದಿಸಬಹುದು. ಅಮೆಜಾನ್ ಸ್ಮಾರ್ಟ್‌ಫೋನ್ ಅಪ್‌ಗ್ರೇಡ್ ಡೇಸ್ ಸೇಲ್‌ನಲ್ಲಿ ಲಭ್ಯವಿರುವ ಬ್ಯಾಂಕ್ ಆಫರ್ಗಳು ಹಾಗೂ ವಿನಿಮಯ ಕೊಡುಗೆಯ ಸಂಪೂರ್ಣ ಲಾಭವನ್ನು ಪಡೆಯಲು ಸಾಧ್ಯವಾದರೆ ಈ ಫೋನ್ ಅನ್ನು ಇನ್ನೂ ಅಗ್ಗದ ದರದಲ್ಲಿ ಖರೀದಿಸಬಹುದು.
ಐ ಕಾಲ್ ಕೆ280 ಸ್ಮಾರ್ಟ್‌ಫೋನ್ ಮೂಲ ಬೆಲೆ ರೂ. 7,699 ಆಗಿದೆ. ಆದರೆ ಅಮೆಜಾನ್ ಸ್ಮಾರ್ಟ್‌ಫೋನ್ ಅಪ್‌ಗ್ರೇಡ್ ಡೇಸ್ ಸೇಲ್‌ನಲ್ಲಿ ಲಭ್ಯವಿರುವ ಕೊಡುಗೆಯ ಲಾಭಗಳನ್ನು ಪಡೆಯುವ ಮೂಲಕ ನೀವು ಇದನ್ನು ಕೇವಲ 5,699 ರೂ.ಗಳಿಗೆ ಖರೀದಿಸಬಹುದು. ನೀವು ಇದನ್ನು 268ರೂ. ಆರಂಭಿಕ ಇಎಂಐ ನಲ್ಲೂ ಖರೀಸಲು ಅವಕಾಶವಿದೆ.
ಲಾವಾ ಝೆಡ್3 4ಜಿ ಸ್ಮಾರ್ಟ್‌ಫೋನ್‌ನ ಮೂಲ ಬೆಲೆ 8,499 ರೂ.ಗಳು. ಆದರೆ ಅಮೆಜಾನ್ ಸ್ಮಾರ್ಟ್‌ಫೋನ್ ಅಪ್‌ಗ್ರೇಡ್ ಡೇಸ್ ಸೇಲ್‌ನಲ್ಲಿ ಗ್ರಾಹಕರು ಇದನ್ನು 7,499 ರೂ.ಗಳಿಗೆ ಖರೀದಿಸಬಹುದು. ಸೇಲ್‌ನಲ್ಲಿ ಲಭ್ಯವಿರುವ ಬ್ಯಾಂಕ್ ಆಫರ್ಗಳು ಹಾಗೂ ವಿನಿಮಯ ಕೊಡುಗೆಯ ಸಂಪೂರ್ಣ ಲಾಭವನ್ನು ಪಡೆದರೆ ಇದರ ಬೆಲೆ ಇನ್ನಷ್ಟು ಅಗ್ಗವಾಗಲಿದೆ.
5,000mAh ಬ್ಯಾಟರಿ ಸಾಮರ್ಥ್ಯದ ರೆಡ್ಮಿ 9 ಸ್ಪೋರ್ಟ್ಸ್ ಸ್ಮಾರ್ಟ್‌ಫೋನ್ ಅನ್ನು ಅಮೆಜಾನ್ ಸ್ಮಾರ್ಟ್‌ಫೋನ್ ಅಪ್‌ಗ್ರೇಡ್ ಡೇಸ್ ಸೇಲ್‌ನಲ್ಲಿ ಅನೇಕ ಬ್ಯಾಂಕ್ ಆಫರ್‌ಗಳು, ಇಎಂಐ ಆಯ್ಕೆಗಳು ಮತ್ತು ವಿನಿಮಯ ಕೊಡುಗೆಗಳನ್ನು ಒದಗಿಸಲಾಗುತ್ತಿದೆ. ಇವುಗಳ ಲಾಭ ಪಡೆಯುವ ಮೂಲಕ ಗ್ರಾಹಕರು ರೆಡ್ಮಿ 9 ಸ್ಪೋರ್ಟ್ಸ್ ಫೋನ್ ಅನ್ನು 8,499 ರೂ.ಗಳ ಬದಲಿಗೆ 6,999 ರೂ.ಗಳಿಗೆ ಖರೀದಿಸಬಹುದಾಗಿದೆ.