Amazon Summer Sale 2024: iPhone 15 Pro, OnePlus 12 & ಈ ಫೋನ್‌ಗಳ ಮೇಲೆ ಭರ್ಜರಿ ಡಿಸ್ಕೌಂಟ್!

Mon, 06 May 2024-11:17 pm,

ಹೊಸ ಸ್ಮಾರ್ಟ್‌ಫೋನ್ ಖರೀದಿಸಲು ಬಯಸುವಿರಾ? ಹಾಗಾದರೆ ಇದು ನಿಮಗೆ ಉತ್ತಮ ಅವಕಾಶವಾಗಬಹುದು. ಅಮೆಜಾನ್‌ನ ಗ್ರೇಟ್ ಸಮ್ಮರ್ ಸೇಲ್ ಆರಂಭವಾಗಿದೆ. ಕಳೆದ ಕೆಲವು ದಿನಗಳಿಂದ ಅನೇಕ ಡೀಲ್‌ಗಳು ಗ್ರಾಹಕರಿಗೆ ಸಿಕ್ಕಿವೆ. ಈಗಾಗಲೇ ಮೊಬೈಲ್‌, ಲ್ಯಾಪ್‌ಟಾಪ್‌, ಟ್ಯಾಬ್ಲೆಟ್‌ ಸೇರಿದಂತೆ ಎಲೆಕ್ಟ್ರಾನಿಕ್ಸ್‌ ವಸ್ತುಗಳ ಖರೀದಿ ಮೇಲೆ ಗ್ರಾಹಕರಿಗೆ ವಿಶೇಷ ರಿಯಾಯಿತಿ ಸಿಗುತ್ತಿದೆ. ಇದಲ್ಲದೆ OnePlus 12, iPhone 15 Pro, Xiaomi 14 ಮತ್ತು OnePlus 12R ಸೇರಿದಂತೆ ಹಲವು ಸ್ಮಾರ್ಟ್‌ಫೋನ್‌ಗಳ ಖರೀದಿ ಮೇಲೆ ನಿಮಗೆ ಭರ್ಜರಿ ರಿಯಾಯಿತಿ ದೊರೆಯುತ್ತಿದೆ. ಇದರ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ...

ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಬಿಡುಗಡೆಯಾದ ಐಫೋನ್ 15 ಪ್ರೊ, 2023ರ ಆಪಲ್‌ನ ಅತ್ಯಂತ ಶಕ್ತಿಶಾಲಿ ಸ್ಮಾರ್ಟ್‌ಫೋನ್ ಆಗಿದೆ. ಈಗ ಈ ಫೋನ್‌ ಖರೀದಿಯ ಮೇಲೆ ಶೇ.5ರಷ್ಟು ನೇರ ರಿಯಾಯಿತಿಯನ್ನು ನೀಡಲಾಗುತ್ತಿದೆ. ಇದರಿಂದ ಇದರ ಬೆಲೆ 1,34,900 ರೂ.ಗಳಿಂದ 1,27,990 ರೂ.ಗೆ ಕಡಿಮೆಯಾಗಿದೆ. ನೀವು Amazon Pay ICICI ಬ್ಯಾಂಕ್ ಕ್ರೆಡಿಟ್ ಕಾರ್ಡ್ ಹೊಂದಿದ್ದರೆ, 6,399 ರೂ.ಗಳ ಹೆಚ್ಚುವರಿ ರಿಯಾಯಿತಿ ಪಡೆಯಬಹುದು. ಈ ರಿಯಾಯಿತಿಯ ನಂತರ ಮಾರಾಟದ ಸಮಯದಲ್ಲಿ iPhone 15 Pro ಬೆಲೆ ಕೇವಲ 1,21,591 ರೂ. ಆಗಲಿದೆ.

OnePlusನ ಹೊಸ ಟಾಪ್ ಮಾಡೆಲ್ ಫೋನ್ OnePlus 12 ಸಹ ಈ ಮಾರಾಟದಲ್ಲಿ ರಿಯಾಯಿತಿಯಲ್ಲಿ ಲಭ್ಯವಿದೆ. ಇದರ ವಾಸ್ತವಿಕ ಬೆಲೆ 64,999 ರೂ. ಇದೆ. ಆದರೆ ನೀವು Amazon Pay ICICI ಬ್ಯಾಂಕ್ ಕ್ರೆಡಿಟ್ ಕಾರ್ಡ್ ಹೊಂದಿದ್ದರೆ 3,249 ರೂ.ಗಳ ರಿಯಾಯಿತಿ ಪಡೆಯಬಹುದು. ಈ ರಿಯಾಯಿತಿಯ ನಂತರ ಫೋನ್‌ನ ಬೆಲೆ 61,750 ರೂ. ಆಗಲಿದೆ. ICICI ಬ್ಯಾಂಕ್ ಮತ್ತು ಬ್ಯಾಂಕ್ ಆಫ್ ಬರೋಡಾ ಬಳಕೆದಾರರಿಗೆ ಕೆಲವು ಕೊಡುಗೆಗಳಿವೆ.

ಕಳೆದ ತಿಂಗಳು ಬಿಡುಗಡೆಯಾದ Xiaomi 14 ಸಹ ಮಾರಾಟದಲ್ಲಿ ರಿಯಾಯಿತಿಯಲ್ಲಿ ಲಭ್ಯವಿದೆ. ಫೋನ್‌ನ ಮೂಲ ಬೆಲೆ 79,999 ರೂ. ಆಗಿದ್ದು, ಇದನ್ನು 10,000 ರೂ. ರಿಯಾಯಿತಿಯೊಂದಿಗೆ ನೇರವಾಗಿ 69,999 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಹೆಚ್ಚುವರಿಯಾಗಿ ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ಗಳ ಮೇಲೆ 4,250 ರೂ.ನ ಫ್ಲಾಟ್ ರಿಯಾಯಿತಿ ಇದೆ (ಅಮೆಜಾನ್ ಪೇ ಐಸಿಐಸಿಐ ಕ್ರೆಡಿಟ್ ಕಾರ್ಡ್‌ಗಳನ್ನು ಹೊರತುಪಡಿಸಿ). ಅಮೆಜಾನ್‌ನ ವೆಬ್‌ಸೈಟ್‌ನಲ್ಲಿ ಇತರ ಬ್ಯಾಂಕ್ ಕೊಡುಗೆಗಳು ಸಹ ಲಭ್ಯವಿವೆ.

ಜನವರಿಯಲ್ಲಿ ಬಿಡುಗಡೆಯಾದ Redmi Note 13 Pro+ ಸಹ ಈ ಮಾರಾಟದಲ್ಲಿ ಕಡಿಮೆ ಬೆಲೆಗೆ ಲಭ್ಯವಿದೆ. ಇದರ ಮೂಲ ಬೆಲೆ 33,999 ರೂ. ಇದೆ. ಆದರೆ ಯಾವುದೇ ಬ್ಯಾಂಕ್ ಕೊಡುಗೆ ಇಲ್ಲದೆ ಈಗ ಇದು 30,999 ರೂ.ಗೆ ಲಭ್ಯವಿದೆ. ನೀವು Amazonನಲ್ಲಿ ICICI ಬ್ಯಾಂಕ್ ಕ್ರೆಡಿಟ್ ಕಾರ್ಡ್ ಹೊಂದಿದ್ದರೆ, ಇನ್ನೂ ಹೆಚ್ಚಿನ ರಿಯಾಯಿತಿ ಪಡೆಯಬಹುದು. 2,946 ರೂ.ಗಳ ಡಿಸ್ಕೌಂಟ್‌ನೊಂದಿಗೆ ಇದು ನಿಮಗೆ 28,053 ರೂ.ಗೆ ಸಿಗಲಿದೆ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link