ಅಂಬಾನಿ ಸೊಸೆ ಧರಿಸರುವ ಈ ಲೆಹಂಗಾದ ಬಗ್ಗೆ ತಿಳಿದರೆ ನೀವು ಶಾಕ್ ಆಗೋದು ಗ್ಯಾರಂಟಿ..!
ಅಬು ಜಾನಿ ಸಂದೀಪ್ ಖೋಸ್ಲಾ ಅವರು ಸಮಕಾಲೀನ ಭಾರತೀಯ ಕಲಾವಿದೆ, ಇವರು ಶಿಲ್ಪಿ ಜಯಶ್ರೀ ಬರ್ಮನ್ ಮತ್ತು ರಿಯಾ ಕಪೂರ್ ಒಡಗೂಡಿ ನವ ವಧುವಿಗೆ ಅತ್ಯಂತ ವಿಶಿಷ್ಟವಾದ ಲೆಹಂಗಾವನ್ನು ವಿನ್ಯಾಸ ಮಾಡಿದ್ದಾರೆ. ಅಬು ಜಾನಿ ಖೋಸ್ಲಾ ವಿನ್ಯಾಸಗಳಿಸಿರುವ ಈ ವೀಭಿನ್ನ ಉಡುಪಿನಲ್ಲಿ ರಾಧಿಕಾ ನೋಡುಗರನ್ನು ಬೆರಗುಗೊಳಿಸಿದರು.
ಜಯಶ್ರಿ ಅವರ ಕೈಯಿಂದ ಮೂಡಿ ಬಂದಿರುವ ಚಿತ್ರ ವಿನ್ಯಸವನ್ನು ಕೈಯಿಂದ ಪೈಂಟ್ ಮಾಡಲಾಗಿದೆ. ಲೆಹಂಗಾದ ಮೇಲಿರುವ ಒಂದೊಂದು ಆಕೃತಿಯೂ ಕೈಯಿಂದ ಬಿಡಿಸಿ ಲೆಹಂಗಾವನ್ನು ವಿನ್ಯಾಸಗೊಳಿಸಲಾಗಿದೆ.
ಅನಂತ್- ರಾಧಿಕಾ ಅವರ ಮದುವೆಯನ್ನು ಹೋಲುವ ಚಿತ್ರಗಳನ್ನು ಇದರ ಮೇಲೆ ಬಿಡಿಸಲಾಗಿದೆ, ವಧು ವರ ಸೇರಿ ಅನಂತ್ ಅಂಬಾನಿಗೆ ಪ್ರಿಯವಾದ ಪ್ರಾಣಿಗಳನ್ನು ಲೆಹೆಂಗಾದ ಮೇಲೆ ಬಿಡಿಸಲಾಗಿದೆ.
ಚಿನ್ನದ ಜರ್ದೋಸಿಯಿಂದ ನೇಯಲಾದ ಈ ಲೆಹಂಗಾವನ್ನು ಕೈಯಿಂದ ಕಸೂತಿ ಮಾಡಲಾಗಿದೆ.
ಕಲೆಯೊಂದಿಗೆ ಕೈ-ಕಸೂತಿಯ ಆದರ್ಶ ಸಂಯೋಜನೆಯನ್ನು ಹೊಂದಿರುವ ಈ ಸಹಯೋಗದ ಭಾಗವಾಗಿರಲು ನಾವು ಗೌರವಿಸುತ್ತೇವೆ. ಏಕೆಂದರೆ ಕಲೆ ಮತ್ತು ಫ್ಯಾಷನ್ ಯಾವಾಗಲೂ ಪ್ರೇಮಿಗಳು. ಒಂದು ಇನ್ನೊಂದಿಲ್ಲದೆ ಇರಲು ಸಾಧ್ಯವಿಲ್ಲ. ಹಾಗಾಗಿ ಇದು ಅನಂತ್ ಮತ್ತು ರಾಧಿಕಾ ಅವರ ಪರಿಪೂರ್ಣ ಜೋಡಿಗೆ ಪರಿಪೂರ್ಣವಾದ ಓಡ್ ಆಗಿರುತ್ತದೆ" ಎಂದು ಅಬು ಜಾನಿ-ಸಂದೀಪ್ ಖೋಸ್ಲಾ ಹೇಳಿದ್ದಾರೆ.