27 ಅಂತಸ್ತಿನ ಭವ್ಯ ಬಂಗಲೆಯಲ್ಲಿ ಬದುಕುತ್ತಿರುವ ಮುಖೇಶ್ ಅಂಬಾನಿ ಬಾಲ್ಯ ಕಳೆದದ್ದು ಈ ಪುಟ್ಟ ಮನೆಯಲ್ಲಿ !ಇಲ್ಲಿದೆ ನೋಡಿ ಫೋಟೋ

Mon, 29 Jul 2024-9:02 am,

ಮುಖೇಶ್ ಅಂಬಾನಿ ಎಂದ ಕೂಡಲೇ ಕಣ್ಣ ಮುಂದೆ ಬರುವುದು ಅವರ ಐಶಾರಾಮಿ ಬದುಕು. ವಿಶ್ವದ ಶ್ರೀಮಂತ ವ್ಯಕ್ತಿಯ ಜೀವನಶೈಲಿ.ಆದರೆ ಇಂದು ಬಿಲಿಯನೇರ್‌ ಆಗಿರುವ ಇವರು ಕೂಡಾ ಕಷ್ಟಗಳನ್ನು ಕಂಡವರೇ.   

ಇಂದು ಮುಖೇಶ್ ಅಂಬಾನಿ ವಾಸಿಸುತ್ತಿರುವುದು ೨೭ ಮಹಡಿಯ ಭವ್ಯ ಬಂಗಲೆಯಲ್ಲಿ. ವಿಶ್ವದ ದುಬಾರಿ ಮನೆಗಳಲ್ಲಿ ಈ ಆಂಟಿಲಿಯಾ ಕೂಡಾ ಒಂದು. ಇದರ ನಿರ್ಮಾಣಕ್ಕೆ ತಗುಲಿರುವ ವೆಚ್ಚಅಂದಾಜು 15,000 ಕೋಟಿ ರೂ

ಆಂಟಿಲಿಯಾ ಅರಮನೆಗಿಂತ ಕಡಿಮೆಯಿಲ್ಲ.ಇದು 4,00,000 ಚದರ ಅಡಿಗಳಷ್ಟು ವಿಸ್ತಾರವಾಗಿದೆ.ಐಷಾರಾಮಿ ಸೌಕರ್ಯಗಳನ್ನು ಹೊಂದಿರುವ ವಿವಿಧ ಮಹಡಿಗಳನ್ನು ಹೊಂದಿದೆ. 

ಆದರೆ ಮುಖೇಶ್ ಅಂಬಾನಿ ಹುಟ್ಟಿನಿಂದಲೇ ಈ ಐಶಾರಾಮ ಕಂಡವರಲ್ಲ .ಇದು ಅವರ ಪರಿಶ್ರಮದ ಫಲ. ಅವರ ಬಾಲ್ಯ ಸವೆದದ್ದು ಪುಟ್ಟ ಮನೆಯಲ್ಲಿ.

ಅಂಬಾನಿ ಕುಟುಂಬವು 1970 ರ ದಶಕದವರೆಗೆ ಮುಂಬೈನ ಭುಲೇಶ್ವರದಲ್ಲಿ ಎರಡು ಬೆಡ್ ರೂಂಗಳ ಸಾಧಾರಣ ಅಪಾರ್ಟ್ಮೆಂಟಿನಲ್ಲಿ ವಾಸವಾಗಿದ್ದರು.ಇಲ್ಲಿ ಅವರ ಇಡೀ ಪರಿವಾರ ಅಂದರೆ ತಂದೆ, ತಾಯಿ, ಸಹೋದರ, ಸಹೋದರಿಯರು ಒಟ್ಟಾಗಿ ವಾಸಿಸುತ್ತಿದ್ದರು.   

ನಂತರ  ಧೀರೂಭಾಯಿ ಅಂಬಾನಿ ಕೊಲಾಬಾದಲ್ಲಿ 'ಸೀ ವಿಂಡ್' ಎಂಬ 14 ಅಂತಸ್ತಿನ ಅಪಾರ್ಟ್‌ಮೆಂಟ್ ಬ್ಲಾಕ್ ಅನ್ನು ಖರೀದಿಸಿದರು.ಅಲ್ಲಿ ಮುಖೇಶ್ ಮತ್ತು ಅನಿಲ್ ತಮ್ಮ ಕುಟುಂಬಗಳೊಂದಿಗೆ ವಿವಿಧ ಮಹಡಿಗಳಲ್ಲಿ ವಾಸಿಸುತ್ತಿದ್ದರು.

ZEENEWS TRENDING STORIES

By continuing to use the site, you agree to the use of cookies. You can find out more by Tapping this link