27 ಮಹಡಿಗಳ ಅರಮನೆಯಾದರೂ ಅಂಬಾನಿ ಹಿರಿಯ ಪುತ್ರ ಮತ್ತು ಸೊಸೆ ಈ ಫ್ಲೋರ್ ಬಿಟ್ಟು ಬರುವಂತಿಲ್ಲ !ನೀತಾ ಅಂಬಾನಿ ನಿರ್ಧಾರದ ಹಿಂದಿನ ಕಾರಣ ಇದು !

Tue, 22 Oct 2024-9:31 am,

ಆಂಟಿಲಿಯಾ ವಿಶ್ವದ ಅತ್ಯಂತ ದುಬಾರಿ ಮನೆಗಳಲ್ಲಿ ಒಂದಾಗಿದೆ.ಈ ಐಷಾರಾಮಿ ಬಂಗಲೆಯಲ್ಲಿ ಮುಖೇಶ್ ಅಂಬಾನಿ ತಮ್ಮ ಕುಟುಂಬದೊಂದಿಗೆ ವಾಸಿಸುತ್ತಿದ್ದಾರೆ.ಈ ಮನೆಯ ಬೆಲೆ ಸುಮಾರು 15000 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ.

ಇಂಡಿಯಾ ಟೈಮ್ಸ್‌ನ ವರದಿಯ ಪ್ರಕಾರ, ಮುಖೇಶ್ ಅಂಬಾನಿ ಅವರ ಮಗ ಆಕಾಶ್ ಅಂಬಾನಿ ಮತ್ತು ಸೊಸೆ ಶ್ಲೋಕಾ ಮೆಹ್ತಾ ಈ 27 ಅಂತಸ್ತಿನ ಮನೆಯ 27 ನೇ ಮಹಡಿಯಲ್ಲಿ ವಾಸಿಸುತ್ತಿದ್ದಾರೆ.ಮುಖೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಕೂಡಾ ಇದೇ ಮಹಡಿಯಲ್ಲಿ ವಾಸಿಸುತ್ತಿದ್ದಾರೆ.

ಅಟ್ಲಾಂಟಿಕ್‌ನಲ್ಲಿರುವ ಪ್ರಸಿದ್ಧ ದ್ವೀಪದ ಹೆಸರನ್ನು ಇಡಲಾಗಿದೆ.ಆಂಟಿಲಿಯಾ 27 ನೇ ಮಹಡಿಯು ಇಡೀ ಮುಂಬೈ ನಗರದ ಮನಮೋಹಕ ದೃಶ್ಯ ಕಾಣಿಸುತ್ತದೆ. ಈ ಮಹಡಿಯು ಅತ್ಯುತ್ತಮವಾದ ಗಾಳಿ ಮತ್ತು ಸಾಕಷ್ಟು ಸೂರ್ಯನ ಬೆಳಕನ್ನು ಹೊಂದಿದೆ. 

ಅವರ ಮೊಮ್ಮಕ್ಕಳಾದ ಪೃಥ್ವಿ ಮತ್ತು ವೇದ್ ಕೂಡಾ ಇದೇ ಮಹಡಿಯಲ್ಲಿ ವಾಸಿಸುತ್ತಿದ್ದಾರೆ. ವರದಿಯ ಪ್ರಕಾರ, ಈ ಮಹಡಿಯಲ್ಲಿ ಕೆಲವೇ ಜನರಿಗೆ ಎಂಟ್ರಿ ಸಿಗುತ್ತದೆ. 27 ನೇ ಮಹಡಿಯಲ್ಲಿರುವ ಐಷಾರಾಮಿ ವಸ್ತುಗಳನ್ನು ಕೆಲವೇ ಜನರು ಬಳಸಬಹುದು. 

ಈ ಭವ್ಯವಾದ ಬಂಗಲೆಯ ನಿರ್ಮಾಣವು 2006 ರಲ್ಲಿ ಪ್ರಾರಂಭವಾಯಿತು ಮತ್ತು 2010 ರಲ್ಲಿ ಪೂರ್ಣಗೊಂಡಿತು.ನವೆಂಬರ್ 2010 ರಲ್ಲಿ ಆಂಟಿಲಿಯಾದಲ್ಲಿ ಗೃಹ ಪ್ರವೇಶ ಸಮಾರಂಭ ನಡೆಯಿತು.

8.0 ವರೆಗಿನ ಭೂಕಂಪವನ್ನು ತಡೆದುಕೊಳ್ಳುವ ರೀತಿಯಲ್ಲಿ ಆಂಟಿಲಿಯಾವನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ.ಆಂಟಿಲಿಯಾದ 27 ಮಹಡಿಗಳಲ್ಲಿ, ಮೇಲಿನ ಆರು ಮಹಡಿಗಳನ್ನು ಅಂಬಾನಿ ಕುಟುಂಬಕ್ಕೆ ಮೀಸಲಿಡಲಾಗಿದೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link