ವೇತನ ಮತ್ತು ಸವಲತ್ತಿನ ವಿಚಾರದಲ್ಲಿ ಸಾಫ್ಟ್ ವೇರ್ ಎಂಜಿನಿಯರ್ ನನ್ನೂ ಮೀರಿಸುತ್ತಾರೆ ಅಂಬಾನಿ ಮನೆಯ ಅಡುಗೆ ಭಟ್ಟ! ಸಿಂಪಲ್ ಅಡುಗೆಗೆ ಇಷ್ಟೊಂದು ಸ್ಯಾಲರಿ !

Mon, 22 Jul 2024-9:41 am,

ದೇಶದ ಅತ್ಯಂತ ಶ್ರೀಮಂತ ಕುಟುಂಬವಾಗಿರುವುದರಿಂದ ಅಂಬಾನಿ ಕುಟುಂಬದ ಬಗ್ಗೆ ತಿಳಿದುಕೊಳ್ಳುವ ಆಸಕ್ತಿ ಎಲ್ಲರಲ್ಲೂ ಇರುವುದು ಸಹಜ.ಸಾಮಾಜಿಕ ಜಾಲತಾಣಗಳಲ್ಲಿಇವರ ಬಗ್ಗೆ ಏನೇ ಮಾಹಿತಿ ಬಂದರೂ ಜನ ಅದನ್ನು ಕುತೂಹಲದಿಂದ ತಿಳಿದುಕೊಳ್ಳುತ್ತಾರೆ.

ಅಂಬಾನಿ ಕುಟುಂಬವೆಂದರೆ ಕೋಟ್ಯಾಧಪತಿಗಳು ಎನ್ನುವುದನ್ನು ಒತ್ತಿ ಹೇಳಬೇಕಾಗಿಲ್ಲ.ಅವರ ಜೀವನಶೈಲಿ ಕೂಡ ತುಂಬಾ ಐಷಾರಾಮಿಯಾಗಿದೆ. ಕಾರಿನಿಂದ ಹಿಡಿದು ಬಟ್ಟೆ, ಮೊಬೈಲ್, ಹೆಲಿಕಾಪ್ಟರ್, ವಿಮಾನ ಎಲ್ಲವೂ ಐಷಾರಾಮಿ.ಆದರೆ ಆಹಾರದ ವಿಷಯಕ್ಕೆ ಬಂದಾಗ ಮಾತ್ರ ಇವರದ್ದು ಬಲು ಸರಳ ಊಟ.

ಅಂಬಾನಿ ಕುಟುಂಬದಲ್ಲಿ ಗುಜರಾತಿ ಸಸ್ಯಾಹಾರಿ ಥಾಲಿಗೆ ಹೆಚ್ಚು ಪ್ರಾಶಸ್ತ್ಯವಿದೆ. ಮುಕೇಶ್ ಅಂಬಾನಿ ಸ್ವತಃ ದಾಲ್,ಅನ್ನ, ಪಲ್ಯ, ಚಪಾತಿ ಮತ್ತು ಸಲಾಡ್ ತಿನ್ನಲು ಇಷ್ಟಪಡುತ್ತಾರೆ.ಇದರೊಂದಿಗೆ ಲಸ್ಸಿ ಅಥವಾ ಮಜ್ಜಿಗೆ ಕೂಡಾ ಬೇಕು.ಬೆಳಗಿನ ಉಪಾಹಾರದಲ್ಲಿ ಜ್ಯೂಸ್ ಕುಡಿಯಲು ಇಷ್ಟಪಡುತ್ತಾರೆ.

ಅಂಬಾನಿ ಕುಟುಂಬದಲ್ಲಿ ಚಪಾತಿ ಮಾಡಲು ಮೆಷಿನ್ ಬಳಸಲಾಗುತ್ತದೆ.  ಅದಕ್ಕೆ 2 ಕಾರಣಗಳಿವೆ.ಒಂದು ಸ್ವಚ್ಛತೆ ಮತ್ತು ಇನ್ನೊಂದು ಕಾರಣವೆಂದರೆ ಆಂಟಿಲಿಯಾದಲ್ಲಿ 400 ಕ್ಕೂ ಹೆಚ್ಚು ಜನರು ಕೆಲಸ ಮಾಡುತ್ತಾರೆ. ಹಾಗಾಗಿ ದೊಡ್ಡ ಪ್ರಮಾಣದಲ್ಲಿ ಚಪಾತಿ ಮಾಡಬೇಕಾಗುತ್ತದೆ.  

ಇನ್ನು ಮನೆ ಕೆಲಸದವರ ಪ್ರತಿ ಮುಖೇಶ್ ಅಂಬಾನಿ ಅತ್ಯಂತ ಗೌರವದಿಂದ ನಡೆದುಕೊಳ್ಳುತ್ತಾರೆಯಂತೆ. ಹಾಗಾಗಿ ಪ್ರತಿಯೊಬ್ಬರ ಬಗ್ಗೆ ವಿಶೇಷ ಕಾಳಜಿ ವಹಿತ್ತಾರೆಯಂತೆ. 

ಆಂಟಿಲಿಯಾದಲ್ಲಿ ಉಳಿದುಕೊಂಡಿರುವ ಎಲ್ಲಾ ಸಿಬ್ಬಂದಿಗೆ ಆಹಾರ ಮತ್ತು ಇತರ ಸೌಲಭ್ಯಗಳು ಸಂಪೂರ್ಣವಾಗಿ ಉಚಿತವಾಗಿದೆ.ತಮ್ಮ ಸಿಬ್ಬಂದಿಗೆ ಉತ್ತಮ ವೇತನ ನೀಡುತ್ತಾರೆ. ಅಂಬಾನಿ ಮನೆಯಲ್ಲಿ ಕೆಲಸ ಮಾಡುವ ಬಾಣಸಿಗರ ಸಂಬಳ ತಿಂಗಳಿಗೆ  2 ಲಕ್ಷ ರೂಪಾಯಿಯಂತೆ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link