ಬಲಿಷ್ಠ ಪಾಕ್‌ ಎದುರು ಅಬ್ಬರಿಸಿದ ಅಮೇರಿಕಾ: ಸೂಪರ್‌ ಓವರ್‌ನಲ್ಲಿ ಪಂದ್ಯ ಗೆದ್ದ ಯುಎಸ್‌ಎ

Fri, 07 Jun 2024-9:03 am,

ಬಲಿಷ್ಟ ಪಾಕ್‌ ಎದುರು ಅಬ್ಬರಿಸಿದ ಅಮೇರಿಕಾ: ಸೂಪರ್‌ ಓವರ್‌ನಲ್ಲಿ ಪಂದ್ಯ ಗೆದ್ದ ಯುಎಸ್‌ಎ  

11 ನೇ ಲೀಗ್‌ನ 2024ರ ಐಸಿಸಿ ವಿಶ್ವಕಪ್‌ ಟೂರ್ನಿಯಲ್ಲಿ ಯುಎಸ್‌ಎ ತಂಡ ಪಾಕಿಸ್ತಾನದ ತಂಡದ ಎದುರು ಅಬ್ಬರಿಸಿದೆ. ಅಮೇರಿಕಾ ತಂಡದ ಅಬ್ಬರಕ್ಕೆ ಬಾಬರ್‌ ತಂಡ ಬೆಚ್ಚಿಬಿದ್ದಿದೆ.  

ಡಲ್ಲಾಸ್‌ನ ಗ್ರ್ಯಾಂಡ್ ಫ್ರೈರಿ ಸ್ಟೇಡಿಯಂನಲ್ಲಿ ನಡೆದ ವಿಶ್ವಕಪ್‌ನ ಎ ಗೊಂಪಿನ ಪಂದ್ಯದಲ್ಲಿ ಯುಎಸ್‌ಎ ತಂಡ ಪಾಕಿಸ್ತಾನ ತಂಡದ ವಿರುದ್ಧ ಕಾದಾಟ ನಡೆಸಿತ್ತು.   

ಟಾಸ್‌ ಸೋತು ಪಾಕಿಸ್ತಾನ ತಂಡ ಫೀಲ್ಡಿಂಗ್‌ ಆಯ್ದುಕೊಂಡಿತ್ತು. ಟಾಸ್‌ ಗೆದ್ದ್‌ ಅಮೇರಿಕಾ ತಂಡ ತಮ್ಮ ಬೌಲಿಂಗ್‌ನಿಂದ ಪಾಕ್‌ ಬ್ಯಾಟರ್‌ಗಳ ಬೆವರಿಳಿಸಿದ್ದರು.  

20 ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ ಪಾಕ್‌ ತಂಡ 159 ರನ್‌ ಕಲೆಹಾಕಿತು. ಟಾರ್ಗೆಟ್‌ ಬೆನ್ನತ್ತಿದ ಯುಎಸ್‌ಎ ತಂಡ 20 ಓವರ್‌ಗಳಲ್ಲಿ 3 ವಿಕೆಟ್‌ ನಷ್ಟಕ್ಕೆ 159 ರನ್‌ ಗಳಿಸಿತು. ಈ ಮೂಲಕ ಪಂದ್ಯ ಟೈನಲ್ಲಿ ನಿಲ್ಲ ಬೇಕಾಯಿತು.  

ಪಂದ್ಯ ಟೈನಲ್ಲಿ ನಿಂತ ಕಾರಣ ಸೂಪರ್‌ ಓವರ್‌ ನೀಡಲಾಯಿತು. ಸೂಪರ್‌ ಓವರ್‌ನಲ್ಲಿ ಮೊದಲ ಬ್ಯಾಟಿಂಗ್‌ ಮಾಡಿದ ಅಮೇರಿಕಾ ತಂಡ ಎದುರಾಳಿ ತಂಡಕ್ಕೆ 19 ರನ್‌ಗಳ ಟಾರ್ಗೆಟ್‌ ನೀಡಿತ್ತು. ಬಾಬರ್‌ ತಂಡ ಕೇವಲ 13 ರನ್‌ಗಳನ್ನಷ್ಟೆ ಗಳಿಸಿ ಅಮೇರಿಕಾ ತಂಡದ ವಿರುದ್ಧ ಮಂಡಿಯೂರಬೇಕಾಯಿತು.  

ಪಟೇಲ್-ಆಂಡ್ರೀಸ್ ಗೌಸ್ ಜೊತೆಯಾಟ ಆಡೋ ಮೂಲಕ ಅಮೇರಿಕಾ ತಂಡಕ್ಕೆ ಬಲ ತಂದುಕೊಟ್ಟಿದ್ದರು. ಈ ಜೋಡಿ 10 ಓವರ್‌ಗಳಲ್ಲಿ 76 ರನ್‌ ಕಲೆ ಹಾಕಿ ತಂಡದ ಗೆಲುವಿನ ಭಾಗವಾದರು.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link