Photo Gallery: ಪ್ರಧಾನಿ ನರೇಂದ್ರ ಮೋದಿಯವರಿಗೆ ಅಮೆರಿಕದಲ್ಲಿ ಸಿಕ್ಕ ಅದ್ದೂರಿ ಸ್ವಾಗತ ಹೇಗಿತ್ತು ನೋಡಿ…
3 ದಿನಗಳ ಅಮೆರಿಕ ಪ್ರವಾಸ ಕೈಗೊಂಡಿರುವ ಪ್ರಧಾನಿ ಮೋದಿಯವರಿಗೆ ಅದ್ದೂರಿ ಸ್ವಾಗತ ದೊರೆತಿದೆ. ಅಮೆರಿಕ ಅಧ್ಯಕ್ಷ ಜೋ ಬಿಡೆನ್, ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರ ಜೊತೆಗಿನ ಪ್ರಧಾನಿ ಮೋದಿ ಅವರ ಭಾವಚಿತ್ರ ಹೊಂದಿರುವ ಬ್ಯಾನರ್‌ಗಳೊಂದಿಗೆ ಪ್ರಧಾನಿ ಮೋದಿಯವರನ್ನು ಸ್ವಾಗತಿಸಲಾಯಿತು. ಈ ವೇಳೆ ಭಾರತೀಯ-ಅಮೆರಿಕನ್ನರು ಡೊಳ್ಳು ಭಾರಿಸಿ ವಿಶೇಷ ಸ್ವಾಗತ ಕೋರಿದರು.
ಪ್ರಧಾನಿ ಮೋದಿಯವರ ಅಮೆರಿಕ ಭೇಟಿ ಹಿನ್ನೆಲೆ ಅವರನ್ನು ಸ್ವಾಗತಿಸಲು ಹಲವಾರು ಕಲಾವಿದರು ಮತ್ತು ಭಾರತೀಯ ವಲಸಿಗರು ಸೇರಿದಂತೆ ಇತರ ಸದಸ್ಯರು ಶ್ವೇತಭವನದ ಹೊರಗೆ ಕಾಯುತ್ತಿರುವುದು ಕಂಡುಬಂದಿದ್ದು ಹೀಗೆ.
ಸಂಪ್ರದಾಯಿಕ ಉಡುಗೆ ತೊಟ್ಟ ಮಹಿಳೆಯರು ಸಾಂಪ್ರದಾಯಿಕ ನೃತ್ಯ ಪ್ರದರ್ಶಿಸುವ ಮೂಲಕ ಪ್ರಧಾನಿ ಮೋದಿಯವರಿಗೆ ವಿಶೇಷ ಸ್ವಾಗತ ಕೋರಿದರು.
ಶ್ವೇತಭವನದ ಸುತ್ತಲೂ ಜಮಾಯಿಸಿದ್ದ ಭಾರತೀಯ-ಅಮೆರಿಕನ್ನರು ಭಾರತ ಮತ್ತು ಅಮೆರಿಕದ ಸ್ನೇಹವನ್ನು ಕೊಂಡಾಡುವ ಬ್ಯಾನರ್‌ಗಳನ್ನು ಪ್ರದರ್ಶಿಸಿದರು. ಅಮೆರಿಕ ಜೊತೆಗಿನ ಭಾರತದ ಸ್ನೇಹ-ಸಂಬಂಧ ಮತ್ತಷ್ಟು ಗಟ್ಟಿಗೊಳ್ಳಲಿ ಎಂದು ಈ ವೇಳೆ ಪ್ರಧಾನಿ ಮೋದಿಯವರಿಗೆ ಸ್ವಾಗತ ಕೋರಲಾಯಿತು.
ಅಮೆರಿಕದಲ್ಲಿರುವ ಭಾರತೀಯ ವಲಸಿಗರು ಶ್ವೇತಭವನದ ಸುತ್ತಲೂ ಜಮಾಯಿಸಿದ್ದರು. ಅಧ್ಯಕ್ಷ ಜೋ ಬಿಡೆನ್ ಭೇಟಿಯಾಗುವುದಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸ್ವಾಗತಿಸಿ ಸಂಭ್ರಮಿಸಿದರು.