ಬಚ್ಚನ್ ಕುಟುಂಬದಲ್ಲಿ ವಿಚ್ಛೇದನದ ಬಿರುಗಾಳಿ.. ಬಹಿರಂಗವಾಗಿ ಬಹುದೊಡ್ಡ ಸುಳಿವು ನೀಡಿದ ಬಿಗ್ ಬಿ ಪೋಸ್ಟ್!
ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ಕಳೆದ ಕೆಲವು ತಿಂಗಳುಗಳಿಂದ ಸುದ್ದಿಯಲ್ಲಿದ್ದಾರೆ. ಇಬ್ಬರ ನಡುವೆ ಯಾವುದೂ ಸರಿ ಇಲ್ಲ ಎನ್ನಲಾಗಿದ್ದು, ಸದ್ಯದಲ್ಲೇ ಬೇರೆಯಾಗಲಿದ್ದಾರೆ ಎನ್ನಲಾಗಿದೆ.
ಈ ಚರ್ಚೆಗಳು ನಡೆಯುತ್ತಿರುವಾಗಲೇ ಇದಕ್ಕೆ ಮತ್ತೊಂದು ಅನುಮಾನ ಸೇರ್ಪಡೆಯಾಗಿದೆ.. ಅಭಿಷೇಕ್ ಬಚ್ಚನ್ ನಟಿ ನಿಮ್ರತ್ ಕೌರ್ ಜೊತೆ ಅಕ್ರಮ ಸಂಬಂಧ ಹೊಂದಿದ್ದಾರೆ ಎಂಬ ವದಂತಿ ಹಬ್ಬಿದೆ.
ಬಚ್ಚನ್ ಫ್ಯಾಮಿಲಿಯಲ್ಲಿ ಇದೆಲ್ಲಾ ನಡೆಯುತ್ತಿರುವಾಗ ಬಿಗ್ ಬಿ ಅಮಿತಾಬ್ ಬಚ್ಚನ್ ಪೋಸ್ಟ್ ಒಂದನ್ನು ಶೇರ್ ಮಾಡಿದ್ದಾರೆ. ಇದನ್ನು ನೋಡಿ ನೆಟ್ಟಿಗರು ಶಾಕ್ ಆಗಿದ್ದಾರೆ..
ಈ ಪೋಸ್ಟ್‌ನಲ್ಲಿ ಅಮಿತಾಬ್, 'ಟಿ 5172- ಚಲೇ ಭಯ್ಯಾ' ಎಂದು ಬರೆದಿದ್ದಾರೆ. ಕೆಲವು ಅಭಿಮಾನಿಗಳು ತಮ್ಮದೇ ಶೈಲಿಯಲ್ಲಿ ಅವರಿಗೆ ಗುಡ್ನೈಟ್ ಹೇಳುತ್ತಿದ್ದಾರೆ ಎಂದು ಭಾವಿಸಿದ್ದರು. ಬಿಗ್ ಬಿ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಬಚ್ಚನ್ ಕುಟುಂಬದಿಂದ ಐಶ್ವರ್ಯ ರೈ ಅಂತರ ಕಾಯ್ದುಕೊಂಡಾಗ ಅಭಿಷೇಕ್ ಜೊತೆಗಿನ ವಿಚ್ಚೇದನ ವದಂತಿಗಳು ಪ್ರಾರಂಭವಾದವು. ಆದರೆ ಇಲ್ಲಿಯವರೆಗೂ ಅವರ ಕುಟುಂಬದ ಯಾರೋಬ್ಬರೂ ಈ ವಿಚಾರದ ಬಗ್ಗೆ ಬಹಿರಂಗವಾಗಿ ಮಾತನಾಡಿಲ್ಲ.. ಹಾಗಾಗಿ ಅವು ಬರೀ ವದಂತಿಗಳಾಗಿಯೇ ಉಳಿದುಕೊಂಡಿವೆ..
ಇನ್ನು ಅಭಿಷೇಕ್ ಮತ್ತು ಐಶ್ವರ್ಯಾ 2007 ರಲ್ಲಿ ವಿವಾಹವಾದರು. ಇಬ್ಬರಿಗೂ ಆರಾಧ್ಯ ಎಂಬ ಮಗಳಿದ್ದಾಳೆ. ಆದರೆ ಕೆಲವು ದಿನಗಳಿಂದ ಅಭಿಷೇಕ್ ಮತ್ತು ಐಶ್ವರ್ಯಾ ವಿಚ್ಛೇದನದ ಮಾತುಗಳು ವೇಗ ಪಡೆದುಕೊಂಡಿವೆ.